ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್‌ಎಸ್‌ಸಿ ಪರೀಕ್ಷೆಗಳಲ್ಲಿ ಇಂಗ್ಲಿಷ್-ಹಿಂದಿ ಹೇರಿಕೆಗೆ ಕನಿಮೋಳಿ ಟೀಕೆ

|
Google Oneindia Kannada News

ಚೆನ್ನೈ, ಅಕ್ಟೋಬರ್ 06: ಕೇಂದ್ರ ಸರ್ಕಾರದ ಇಲಾಖಾ ಹುದ್ದೆಗಳಿಗೆ ಸಿಬ್ಬಂದಿ ಆಯ್ಕೆ ಸಮಿತಿಯು ನಡೆಸುವ ಸಿಜಿಎಲ್ ಪರೀಕ್ಷೆಗಳಲ್ಲಿ ಇಂಗ್ಲಿಷ್ ಮತ್ತು ಹಿಂದಿ ಹೇರಿಕೆಯನ್ನು ತಮಿಳುನಾಡು ಸಂಸದೆ ಕನಿಮೋಳಿ ತೀವ್ರವಾಗಿ ಖಂಡಿಸಿದ್ದಾರೆ.

ದೇಶದಲ್ಲಿನ ವಿವಿಧ ಇಲಾಖೆಯ ಹುದ್ದೆಗಳಿಗೆ ಸಿಬ್ಬಂದಿ ಆಯ್ಕೆಗಾಗಿ ನಡೆಸುವ ಸಿಜಿಎಲ್ ಪರೀಕ್ಷೆಗಳಲ್ಲಿ ಇಂಗ್ಲಿಷ್ ಮತ್ತು ಹಿಂದಿಯನ್ನು ಮಾತ್ರ ಬಳಸಲಾಗುವುದು ಎಂಬ ಕೇಂದ್ರ ಸರ್ಕಾರದ ಘೋಷಣೆಯನ್ನು ನಾನು ಬಲವಾಗಿ ವಿರೋಧಿಸುತ್ತೇನೆ. ಭಾರತೀಯ ಒಕ್ಕೂಟದ ಸಾರ್ವಭೌಮತ್ವವು ಅದರ ಬಹುತ್ವದಲ್ಲಿ ಬೇರೂರಿದೆ. ಇದಕ್ಕೆ ವ್ಯತಿರಿಕ್ತವಾಗಿ, ಎಲ್ಲದರ ಮೇಲೆ ಒಂದು ಅಥವಾ ಎರಡು ಭಾಷೆಯನ್ನು ಹೇರುವುದಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದು ಕನಿಮೋಳಿ ಆರೋಪಿಸಿದ್ದಾರೆ.

ಉತ್ತರ ಭಾರತಕ್ಕಿಂತ ದಕ್ಷಿಣ ಭಾರತದ ರಾಜ್ಯಗಳು ಮುಂದುವರಿದಿರುವುದು ಹೌದಾ? ಏನು ಕಾರಣ?ಉತ್ತರ ಭಾರತಕ್ಕಿಂತ ದಕ್ಷಿಣ ಭಾರತದ ರಾಜ್ಯಗಳು ಮುಂದುವರಿದಿರುವುದು ಹೌದಾ? ಏನು ಕಾರಣ?

ಅಲ್ಲದೇ ಒಂದು ಅಥವಾ ಎರಡು ಭಾಷೆಗಳ ಹೇರಿಕೆಯ ಪ್ರಯತ್ನವು ಪ್ರಜಾಪ್ರಭುತ್ವದ ಮನೋಭಾವಕ್ಕೆ ವಿರುದ್ಧವಾಗಿದೆ ಎಂದು ಕನಿಮೋಳಿ ಕೇಂದ್ರ ಸರ್ಕಾರದ ನಿರ್ಧಾರವನ್ನು ಟೀಕಿಸಿದ್ದಾರೆ.

Kanimozhi strongly opposed English and Hindi imposition by Union Government

ಎಸ್‌ಎಸ್‌ಸಿ ನೇಮಕಾತಿಗೆ ಅರ್ಜಿ ಆಹ್ವಾನ:

ಸ್ಟಾಫ್ ಸೆಲೆಕ್ಷನ್ ಕಮಿಷನ್ ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ ಎಕ್ಸಾಮಿನೇಷನ್, SSC CGL 2022 ನೋಂದಣಿ ಪ್ರಕ್ರಿಯೆಯು ಅಕ್ಟೋಬರ್ 8, 2022ರಂದು ಕೊನೆಗೊಳ್ಳಲಿದೆ. SSC ಉದ್ಯೋಗಗಳು 2022 ಗೆ ಇನ್ನೂ ನೋಂದಾಯಿಸಿಕೊಳ್ಳದ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್-- ssc.nic.in ಗೆ ಭೇಟಿ ನೀಡಬಹುದು ಎಂದು ಸರ್ಕಾರವು ಅಧಿಸೂಚನೆ ಹೊರಡಿಸಿದೆ.

SSC CGL ನೇಮಕಾತಿ 2022ರ ಅಡಿಯಲ್ಲಿ, 20,000ಕ್ಕೂ ಹೆಚ್ಚು ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಆಧಾರದ ಮೇಲೆ ಎರಡು ಹಂತದಲ್ಲಿ ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಪ್ರಾದೇಶಿಕ ಭಾಷೆಗಳ ಬದಲಿಗೆ ಇಂಗ್ಲೀಷ್ ಮತ್ತು ಹಿಂದಿ ಹೇರಿಕೆ ಮಾಡುತ್ತಿರುವುದು ತೀವ್ರ ಟೀಕೆಗೆ ಗುರಿಯಾಗಿದೆ.

English summary
Kanimozhi strongly opposed English and Hindi imposition in CGL examinations administered by the Staff Selection Commission for Union Government departmental positions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X