ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರದಿಂದ ಕನ್ಹಯ್ಯ ಕುಮಾರ್ ಲೋಕಸಭೆಗೆ ಸ್ಪರ್ಧೆ

By Mahesh
|
Google Oneindia Kannada News

ಪಾಟ್ನಾ, ಸೆಪ್ಟೆಂಬರ್ 02: ಜೆಎನ್ ಯು ವಿದ್ಯಾರ್ಥಿ ಸಂಗಟನೆಯ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ. ಬಿಹಾರದ ಬೇಗುಸರಾಯ್ ಕ್ಷೇತ್ರದಿಂದ ಕನ್ಹಯ್ಯ ಅವರು ಕಣಕ್ಕಿಳಿಯುತ್ತಿದ್ದಾರೆ.

ಕನ್ಹಯ್ಯ ಅವರನ್ನು ಕಣಕ್ಕಿಳಿಸಲು ಎಡಪಕ್ಷಗಳು ಉತ್ಸುಕವಾಗಿದ್ದು, ಅನಧಿಕೃತವಾಗಿ ಈ ಕುರಿತಂತೆ ಮಾತುಕತೆ ನಡೆದಿರುವ ಸುದ್ದಿ ಸಿಕ್ಕಿದೆ. ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಸಿಪಿಐ) ನಿಂದ ಟಿಕೆಟ್ ಪಡೆದು ಸ್ಪರ್ಧಿಸಲಿದ್ದಾರೆ. ಬೆಗುಸರಾಯ್ ಜಿಲ್ಲೆಯ ಬೀಹತ್ ಪಂಚಾಯತ್ ನ ಮೂಲದವರಾದ ಕನ್ಹಯ್ಯ ಅವರು 2016ರಲ್ಲಿ ದೆಹಲಿ ಪೊಲೀಸರಿಂದ ಬಂಧಿತರಾಗಿದ್ದರು. ಜೆಎನ್ ಯು ಸಭೆಯಲ್ಲಿ ದೇಶ ವಿರೋಧಿ ಘೋಷಣೆ ಕೂಗಿದ ಆರೋಪ ಹೊರೆಸಲಾಗಿತ್ತು.

ಬಿಜೆಪಿ ಮೇಲೆ ಜೆಡಿಯು ಸಿಟ್ಟು, ಲೋಕಸಭಾ ಸಮರಕ್ಕೂ ಮುನ್ನ ಬಿಕ್ಕಟ್ಟು?!ಬಿಜೆಪಿ ಮೇಲೆ ಜೆಡಿಯು ಸಿಟ್ಟು, ಲೋಕಸಭಾ ಸಮರಕ್ಕೂ ಮುನ್ನ ಬಿಕ್ಕಟ್ಟು?!

ಬಿಹಾರದಿಂದ ಕನ್ಹಯ್ಯ ಅವರು ಸ್ಪರ್ಧಿಸಲು ಎಲ್ಲಾ ಎಡಪಕ್ಷಗಳು ಬೆಂಬಲಿಸಿವೆ ಎಂದು ಬಿಹಾರ ಸಿಪಿಐನ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣನ್ ಸಿಂಗ್ ಹೇಳಿದ್ದಾರೆ.

Kanhaiya Kumar set to contest 2019 Lok Sabha polls from Bihar

ಕಾಂಗ್ರೆಸ್, ರಾಷ್ಟ್ರೀಯ ಜನತಾ ದಳ ಸೇರಿದಂತೆ ಮಹಾಘಟಬಂಧನ್ ನ ಬೆಂಬಲಿತ ಅಭ್ಯರ್ಥಿಯಾಗಿ ಕನ್ಹಯ್ಯ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿಯೂ ಇದೆ.

ಬಿಜೆಪಿಗೆ 20, ಜೆಡಿಯುಗೆ 12! ಲೋಕಸಭಾ ಚುನಾವಣೆಗೆ ಬಿಹಾರ ಸಿದ್ಧ!ಬಿಜೆಪಿಗೆ 20, ಜೆಡಿಯುಗೆ 12! ಲೋಕಸಭಾ ಚುನಾವಣೆಗೆ ಬಿಹಾರ ಸಿದ್ಧ!

2014ರಲ್ಲಿ ಬೇಗುಸರಾಯ್ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ಭೋಲಾ ಸಿಂಗ್ ಅವರು ಆರ್ ಜೆ ಡಿಯ ತನ್ವೀರ್ ಹಸನ್ ಅವರನ್ನು 58,000 ಮತಗಳ ಅಂತರದಿಂದ ಸೋಲಿಸಿದ್ದರು.

English summary
Former president of Jawaharlal Nehru University Student Union Kanhaiya Kumar is all set to contest the 2019 Lok Sabha election from Bihar's Begusarai constituency. An informal understanding has been reached within the Left parties on his candidature.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X