ಖಲಿಸ್ತಾನ್‌ ಉಗ್ರಗಾಮಿ ಭಿಂದ್ರನ್‌ವಾಲೆಗೆ ಹಣ ಕಳುಹಿಸಿದ್ದ ಕಮಲ್‌ನಾಥ್‌, ಸಂಜಯ್‌ ಗಾಂಧಿ: ಮಾಜಿ RAW ಅಧಿಕಾರಿ ಸ್ಪೋಟಕ ಹೇಳಿಕೆ

ನವದೆಹಲಿ, ಸೆಪ್ಟೆಂಬರ್‌ 19: 1984 ರ ಆಪರೇಷನ್ ಬ್ಲೂ ಸ್ಟಾರ್‌ನಲ್ಲಿ ಕೊಲ್ಲಲ್ಪಟ್ಟ ಖಲಿಸ್ತಾನ ಉಗ್ರಗಾಮಿ ನಾಯಕ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆಗೆ ಕಾಂಗ್ರೆಸ್ ನಾಯಕರಾದ ಕಮಲ್ ನಾಥ್ ಮತ್ತು ಸಂಜಯ್ ಗಾಂಧಿ ಹಣವನ್ನು ಕಳುಹಿಸಿದ್ದರು ಎಂಬ ಆರೋಪವನ್ನು ಮಾಜಿ RAW ಅಧಿಕಾರಿಯೊಬ್ಬರು ಮಾಡಿದ್ದಾರೆ.

ಮಧ್ಯಪ್ರದೇಶ ಮಾಜಿ ಸಿಎಂ ಕಮಲ್‌ ನಾಥ್‌ ಹಾಗೂ ಇಂದಿರಾ ಗಾಂಧಿ ಅವರ ಪುತ್ರ, ಮಾಜಿ ಸಂಸದ ಸಂಜಯ್‌ ಗಾಂಧಿ ಹಣ ಕಳುಹಿಸಿದ್ದರು ಎಂದು ಮಾಜಿ RAW ಅಧಿಕಾರಿ ಜಿಬಿಎಸ್ ಸಿಧು ಹೇಳಿದ್ದಾರೆ.

ಸುದ್ದಿಸಂಸ್ಥೆ 'ಎಎನ್‌ಐ' ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿರುವ ಅವರು, 'ಆ ಸಮಯದಲ್ಲಿ ನಮ್ಮ ದೇಶದ ರಾಜಕೀಯ ನಾಯಕತ್ವವು ಹಿಂದೂಗಳನ್ನು ಹೆದರಿಸಲು ಭಿಂದ್ರನ್‌ವಾಲೆಯನ್ನು ಬಳಸಿಕೊಂಡಿತು' ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ.

kamal-nath-sanjay-gandhi-sent-money-to-bhindranwale

ದೇಶದ ಸಮಗ್ರತೆಯ ಬಗ್ಗೆ ಜನಸಾಮಾನ್ಯರಲ್ಲಿ ಆತಂಕವನ್ನು ಉಂಟುಮಾಡಲು ಖಾಲಿಸ್ತಾನದ ಸಮಸ್ಯೆಯನ್ನು ಅಂದಿನ ರಾಜಕಾರಣ ಸೃಷ್ಟಿಸಿತು ಎಂದು ಸಿಧು ಹೇಳಿದ್ದಾರೆ.

'ಆ ಕಾಲದ ರಾಜಕೀಯ ನಾಯಕರು ಹಿಂದೂಗಳನ್ನು ಹೆದರಿಸಲು ಭಿಂದ್ರನ್‌ವಾಲೆಯನ್ನು ಬಳಸಿಕೊಂಡರು. ಅಸ್ತಿತ್ವದಲ್ಲಿ ಇರದ ಖಾಲಿಸ್ತಾನದಂತಹ ಹೊಸ ಸಮಸ್ಯೆಯನ್ನು ಹುಟ್ಟುಹಾಕಿದರು. ಭಾರತದ ಹೆಚ್ಚಿನ ಜನರು ದೇಶದ ಸಮಗ್ರತೆಗೆ ಅಪಾಯವಿದೆ ಎಂದು ಯೋಚಿಸಲು ಪ್ರಾರಂಭಿಸುತ್ತಾರೆ. ಇದರಿಂದ ತಮಗೆ ಲಾಭವಾಗಲಿದೆ ಎಂಬುದನ್ನು ಅಂದಿನ ರಾಜಕೀಯ ನಾಯಕರು ನಂಬಿದ್ದರು. ಇದು ಅಂದಿನ ರಾಜಕೀಯ ನಾಯಕರ ಇಂಗಿತವೂ ಆಗಿತ್ತು' ಎಂದು ಅವರು ಹೇಳಿದ್ದಾರೆ.

'ಆ ಸಮಯದಲ್ಲಿ ನಾನು ಕೆನಡಾದಲ್ಲಿದ್ದೆ. ಕಾಂಗ್ರೆಸ್ ಭಿಂದ್ರನ್‌ವಾಲೆಯನ್ನು ಏಕೆ ಹೊಗಳುತ್ತಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದರು. ಉನ್ನತ ಮಟ್ಟದ ಸಂತನೊಬ್ಬನನ್ನು ನಾವು ನೇಮಿಸಿಕೊಳ್ಳಲು ಬಯಸಿದ್ದೇವೆ ಎಂದು ಸ್ವತಃ ಕಮಲ್‌ನಾಥ್‌ ಹೇಳಿದ್ದರು' ಎಂದು ಅಧಿಕಾರಿ ಆರೋಪಿಸಿದ್ದಾರೆ.

kamal-nath-sanjay-gandhi-sent-money-to-bhindranwale

ಕಮಲ್ ನಾಥ್ ಮತ್ತು ಸಂಜಯ್ ಗಾಂಧಿ ಅವರು ಭಿಂದ್ರನ್‌ವಾಲೆಗೆ ಹಣವನ್ನು ಕಳುಹಿಸಿದ್ದರು ಎಂದು ಸಿಧು ಹೇಳಿದ್ದಾರೆ.

ಭಿಂದ್ರನ್‌ವಾಲೆ ಎಂದೂ ಖಲಿಸ್ತಾನವನ್ನು ಕೇಳಲಿಲ್ಲ. ಆದರೆ, ಇಂದಿರಾ ಗಾಂಧಿಯವರು ಖಲಿಸ್ತಾನವನ್ನು ನಮಗೆ ಒಪ್ಪಿಸಿದರೆ ನಾವು ಅದನ್ನು ನಿರಾಕರಿಸುವುದಿಲ್ಲ ಎಂಬುದಾಗಿ ಭಿಂದ್ರನ್‌ವಾಲೆ ಪ್ರತಿಪಾದಿಸಿದ್ದರು ಎಂದು ಅವರು ತಿಳಿಸಿದ್ದಾರೆ.

ರಾಜಕೀಯ ಉದ್ದೇಶಗಳಿಗಾಗಿ ಭಿಂದ್ರನ್‌ವಾಲೆ ಅವರನ್ನು ಇಂದಿರಾ ಗಾಂಧಿ ಬಳಸಿಕೊಂಡರು ಎಂದು ಅವರು ಹೇಳಿದ್ದಾರೆ.

ಭಿಂದ್ರನ್‌ವಾಲೆ ಸಿಖ್ ಧಾರ್ಮಿಕ ಪಂಥದ ದಮ್‌ದಾಮಿ ತಕ್ಸಲ್‌ನ ಮುಖ್ಯಸ್ಥರಾಗಿದ್ದರು. ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಆದೇಶದ ಮೇರೆಗೆ 1984 ರಲ್ಲಿ ಗೋಲ್ಡನ್ ಟೆಂಪಲ್ ಸಂಕೀರ್ಣದಲ್ಲಿ ಭಾರತೀಯ ಸೇನೆಯು ಪ್ರಾರಂಭಿಸಿದ ಆಪರೇಷನ್ ಬ್ಲೂ ಸ್ಟಾರ್‌ನಲ್ಲಿ ಅವರು ಹತರಾದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+