ದೆಹಲಿಯಲ್ಲಿ ರಾಹುಲ್ ಗಾಂಧಿ ಭೇಟಿಯಾದ ಕಮಲ್ ಹಾಸನ್

ಬೆಂಗಳೂರು, ಜೂನ್ 20: ನಟ ಕಂ ರಾಜಕಾರಣಿ ಕಮಲ್ ಹಾಸನ್ ಇಂದು ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿಯಾದರು.

ತಮ್ಮ ಪಕ್ಷದ ನೋಂದಣಿ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿಗೆ ಬಂದಿದ್ದ ಮಕ್ಕಳ್ ನೀಧಿ ಮಯ್ಯಂ ಪಕ್ಷದ ಕಮಲ್ ಹಾಸನ್, ಚುನಾವಣಾ ಆಯೋಗದಿಂದ ಬಂದು ರಾಹುಲ್ ನಿವಾಸಕ್ಕೆ ತೆರಳಿದರು.

ನಂತರ ಮಾತನಾಡಿದ ಕಮಲ್, "ಇದೊಂದು ಉಭಯ ಕುಶಲೋಪರಿ ಭೇಟಿ. ನಾವು ತಮಿಳುನಾಡು ರಾಜಕೀಯದ ಬಗ್ಗೆ ಮಾತನಾಡಿದೆವು," ಎಂದು ಹೇಳಿದರು.

 Kamal Hassan met Rahul Gandhi, says, ‘formal courtesy meeting’

ಭೇಟಿ ನಂತರ ರಾಹುಲ್ ಗಾಂಧಿ ಟ್ಟೀಟ್ ಮಾಡಿದ್ದು, "ದೆಹಲಿಯಲ್ಲಿ ಕಮಲ್ ಹಾಸನ್ ರನ್ನು ಭೇಟಿಯಾಗಿ ಖುಷಿ ಪಟ್ಟೆ. ನಾವು ನಮ್ಮ ಎರಡು ಪಕ್ಷಕ್ಕೆ ಸಂಬಂಧಿಸಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದೆವು. ಇದರಲ್ಲಿ ತಮಿಳುನಾಡು ರಾಜಕೀಯ ಪರಿಸ್ಥಿತಿಯೂ ಸೇರಿತ್ತು," ಎಂದು ತಿಳಿಸಿದರು.

ಇದಕ್ಕೆ ಕಮಲ್ ಟ್ಟಿಟ್ಟರ್ ನಲ್ಲೇ ಪ್ರತಿಕ್ರಿಯೆ ನೀಡಿದ್ದು, "ನಿಮ್ಮ ಮಾಹಿತಿ ಮತ್ತು ಸಮಯಕ್ಕಾಗಿ ಧನ್ಯವಾದಗಳು ರಾಹುಲ್ ಗಾಂಧಿ ಜೀ. ನಮ್ಮ ಸಂಭಾಷಣೆ ನಿಮಗೂ ಉಪಯುಕ್ತವಾಗಿದೆ ಎಂದುಕೊಳ್ಳುತ್ತೇನೆ," ಎಂದರು.

ನೋಂದಣಿಗಾಗಿ ಭೇಟಿ

ಕಮಲ್ ಹಾಸನ್ ತಮ್ಮ ನೂತನ ಪಕ್ಷವನ್ನು ನೋಂದಣಿ ಮಾಡುವ ಸಂಬಂಧ ಇಂದು ದೆಹಲಿಗೆ ಭೇಟಿ ನೀಡಿದ್ದರು. ನಿರ್ವಚನ್ ಭವನದಲ್ಲಿ ಚುನಾವಣಾ ಆಯುಕ್ತರನ್ನು ಭೇಟಿಯಾದ ನಂತರ ಪ್ರತಿಕ್ರಿಯೆ ನೀಡಿದ ಅವರು, ಫೆಬ್ರವರಿಯಲ್ಲಿ ಚಾಲನೆ ಪಡೆದುಕೊಂಡಿರುವ ನಮ್ಮ ಪಕ್ಷ ಸದ್ಯದಲ್ಲೇ ನೋಂದಣಿಯಾಗುವ ವಿಶ್ವಾಸ ವ್ಯಕ್ತಪಡಿಸಿದರು.

ಔಪಚಾರಿಕ ಭೇಟಿಗಾಗಿ ನಾನು ಇಲ್ಲಿಗೆ ಬಂದಿದ್ದೆ. ಅವರು (ಚುನಾವಣಾ ಆಯೋಗ) ಕೆಲವು ಪ್ರಶ್ನೆಗಳನ್ನು ಕೇಳಿದರು. ಅವರ ಬಳಿ ಯಾವುದೇ ಪ್ರಮುಖ ತಕರಾರುಗಳಿರಲಿಲ್ಲ ಎಂದವರು ಮಾಹಿತಿ ನೀಡಿದರು.

ಇನ್ನು ಪಕ್ಷದ ಗುರುತಿನ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ. ಮೊದಲು ಪಕ್ಷದ ಒಳಗೆ ಚರ್ಚಿಸಿ ನಂತರ ಚುನಾವಣಾ ಆಯೋಗಕ್ಕೆ ತೆರಳುತ್ತೇವೆ ಎಂದವರು ವಿವರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+