'ನಾನು ಮಮತಾ ಅವರ ಫ್ಯಾನ್': ಕಮಲ್ ಹಾಸನ್

Posted By:
Subscribe to Oneindia Kannada

ಕೋಲ್ಕತ್ತಾ, ನವೆಂಬರ್ 11: ರಾಜಕೀಯ ರಂಗಕ್ಕೆ ಪ್ರವೇಶಿಸುವ ಉತ್ಸಾಹದಲ್ಲಿರುವ ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್ ಅವರು ಟಿಎಂಸಿ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ.

ಕೋಲ್ಕತ್ತಾದಲ್ಲಿ ನಡೆದಿರುವ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್ ಗೆ ಬಂದಿರುವ ಕಮಲ್ ಅವರು ಶುಕ್ರವಾರ ರಾತ್ರಿ ವೇಳೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ಟಿಎಂಸಿ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದರು.

ದೀದಿ ಅವರನ್ನು ಭೇಟಿಯಾದ ಸಂದರ್ಭದಲ್ಲಿ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಯಾವುದೇ ಸುಳಿವನ್ನು ಕಮಲ್ ಬಿಟ್ಟು ಕೊಟ್ಟಿಲ್ಲ.

Kamal Haasan Meets Mamata Banerjee, Says he is a Big Fan

ಫಿಲ್ಮ್‌ ಫೆಸ್ಟಿವಲ್‌ ಉದ್ಘಾಟನಾ ಸಮಾರಂಭದ ನಂತರ ಮಮತಾ ಬ್ಯಾನರ್ಜಿ ಹಾಗೂ ಕಮಲ್‌ ಹಾಸನ್‌ ಇಬ್ಬರೂ ಕೆಲ ಹೊತ್ತು ಮಾತುಕತೆ ನಡೆಸಿದರು. ಇದಾದ ಬಳಿಕ ಮಾತನಾಡಿದ ಕಮಲ್‌, 'ನನಗೆ ಈ ನಗರ ಇಷ್ಟ, ನನಗೆ ಫಿಲಂ ಫೆಸ್ಟಿವಲ್ ಇಷ್ಟ, ನಾನು ನಿಮ್ಮ ಸಿಎಂ(ಮಮತಾ) ಅವರ ಫ್ಯಾನ್' ಎಂದು ಹೇಳಿದರು.

ನಟ ಕಮಲ್‌ ಹಾಸನ್‌, ನನ್ನನ್ನು ಫಿಲ್ಮ್‌ ಫೆಸ್ಟಿವಲ್‌ಗೆ ಆಹ್ವಾನಿಸಿದ್ದಕ್ಕೆ ಧನ್ಯವಾದ ಮಮತಾಜೀ ಎಂದು ಟ್ವೀಟ್‌ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಕೇರಳ ಸಿಎಂ ಪಿನರಾಯಿ ವಿಜಯನ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿಯಾದ ನಂತರ ಪಶ್ಚಿಮ ಬಂಗಾಳದ ಸಿಎಂ ಮಮತಾ ಅವರನ್ನು ಕಮಲ್ ಅವರು ಭೇಟಿಯಾಗಿದ್ದರು. ಈ ಮೂವರು ಸಿಎಂಗಳಿಗೂ ಮೋದಿ ಸರ್ಕಾರಕ್ಕೂ ಒಳ್ಳೆ ಸಂಬಂಧವಿಲ್ಲ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಆದರೆ, ಕಮಲ್ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದು, ಬಲ-ಎಡ ಪಂಥೀಯ ಎಂದು ನಾನು ಎಂದಿಗೂ ಗುರುತಿಸಿಕೊಳ್ಳುವುದಿಲ್ಲ. ಜನತೆಗೆ ಬೇಕಾದ ನೆರವು ನೀಡಲು ಯಾವುದು ಉತ್ತಮ ಮಾರ್ಗವೋ ಅದನ್ನು ಅನುಸರಿಸುತ್ತೇನೆ ಎಂದಿದ್ದರು.

ತಮ್ಮ ಹುಟ್ಟುಹಬ್ಬದ ದಿನ(ನವೆಂಬರ್ 07) ದಂದು ಹೊಸ ಪಕ್ಷದ ಬಗ್ಗೆ ಯಾವುದೇ ಸುಳಿವು ನೀಡದ ಕಮಲ್, Maiyyam Whistle ಎಂಬ ಅಪ್ಲಿಕೇಷನ್ ಲೋಕಾರ್ಪಣೆ ಮಾಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Actor Kamal Haasan met West Bengal Chief Minister Mamata Banerjee during Kolkata International Film Festival.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ