ಮಹಾತ್ಮಾ ಗಾಂಧೀಜಿ ವಿರುದ್ಧ ಅವಹೇಳನಕಾರಿ ಭಾಷೆ: ಕಾಳಿಚರಣ್ ಅರೆಸ್ಟ್

ಛತ್ತೀಸಗಢ, ಡಿಸೆಂಬರ್ 30: ಮಧ್ಯಪ್ರದೇಶದ ಖಜುರಾಹೊದಲ್ಲಿ ಮಹಾತ್ಮ ಗಾಂಧಿಯವರ ವಿರುದ್ಧ ಅವಹೇಳನಕಾರಿ ಭಾಷೆ ಬಳಸಿದ ಆರೋಪದ ಮೇಲೆ ಛತ್ತೀಸ್‌ಗಢ ಪೊಲೀಸರು ಧಾರಮಿಕ ಮುಖಂಡ ಕಾಳಿಚರಣ್ ಮಹಾರಾಜ್ ಅವರನ್ನು ಗುರುವಾರ ಬಂಧಿಸಿದ್ದಾರೆ. ಮಹಾತ್ಮ ಗಾಂಧಿಯವರ ಬಗ್ಗೆ ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡಿದ ಮತ್ತು ನಾಥೂರಾಂ ಗೋಡ್ಸೆಯನ್ನು ಹೊಗಳಿದ ಆರೋಪದ ಮೇಲೆ ಪೊಲೀಸರು ಧಾರ್ಮಿಕ ಮುಖಂಡ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ರಾಯ್‌ಪುರದ ಮಾಜಿ ಮೇಯರ್ ಮತ್ತು ಕಾಂಗ್ರೆಸ್ ನಾಯಕ ಪ್ರಮೋದ್ ದುಬೆ ಅವರ ದೂರಿನ ಮೇರೆಗೆ ಪೊಲೀಸರು ಟಿಕ್ರಪಾರಾ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 505 (2), 294 ಐಪಿಸಿ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ರಾಯಪುರದಲ್ಲಿ ಭಾನುವಾರ (ಡಿಸೆಂಬರ್ 26) 'ಧರಮ್ ಸಂಸದ್' ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕಾಳಿಚರಣ್ ಮಹಾರಾಜ್ ಅವರು ಮಹಾತ್ಮ ಗಾಂಧಿಯವರಿಗೆ ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ ಮತ್ತು ಗಾಂಧಿಯನ್ನು ಕೊಂದ ನಾಥುರಾಮ್ ಗೋಡ್ಸೆಯನ್ನು ಸಮರ್ಥಿಸಿದ್ದಾರೆ ಎಂದು ಆರೋಪಿಸಲಾಗಿದೆ.

ನೌಪದ್ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿರುವ ಮಹಾರಾಷ್ಟ್ರದ ಸಚಿವ ಜೀತೇಂದ್ರ ಅವದ್, ರಾಷ್ಟ್ರಪಿತ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ವಿರುದ್ಧ ಕಾಳಿಚರಣ್ ಸ್ವಾಮೀಜಿ ಬಳಸಿರುವ ಪದ ತುಂಬಾ ನೋವುಂಟು ಮಾಡಿದೆ ಎಂದು ಹೇಳಿದ್ದರು.

Kalicharan Maharaj arrested over remarks against Mahatma Gandhi

ಕಾಳಿಚರಣ್ ಅವರ ಬಂಧನವನ್ನು ರಾಯ್ಪುರದ ಹಿರಿಯ ಪೊಲೀಸ್ ಅಧಿಕಾರಿ ಪ್ರಶಾಂತ್ ಅಗರ್ವಾಲ್ ಖಚಿತಪಡಿಸಿದ್ದಾರೆ. ಕಾಳಿಚರಣ್ ಖಜರಾಹೋದ ಅತಿಥಿಗೃಹದಲ್ಲಿ ಕೋಣೆಯನ್ನು ಕಾಯ್ದಿರಿಸಿದ್ದರು. ಆದರೆ, ಅವರು ಅಲ್ಲಿ ವಾಸವಿದ್ದಿರಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪೊಲೀಸರನ್ನು ದಾರಿ ತಪ್ಪಿಸುವ ಉದ್ದೇಶದಲ್ಲಿ ಸಮೀಪದಲ್ಲಿರುವ ಬಾಡಿಗೆ ಮನೆಯಲ್ಲಿ ಉಳಿದುಕೊಂಡಿದ್ದರು. ಪ್ರಕರಣ ದಾಖಲಿಸಿದ ದಿನದಿಂದಲೂ ಅವರ ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು. ಪೊಲೀಸರಿಂದ ಟ್ರ್ಯಾಕಿಂಗ್ ತಪ್ಪಿಸಿಕೊಳ್ಳುವ ಸಲುವಾಗಿ ಅವರ ಎಲ್ಲಾ ಆಪ್ತ ಸಹಾಕರು ತಮ್ಮ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದರು.

ಅಂತಿಮವಾಗಿ ಕಾಳಿಚರಣ್ ಮಹಾರಾಜ್ ಅವರನ್ನು ಪತ್ತೆ ಹಚ್ಚಿದ್ದು, ಇಂದು ಬೆಳಗ್ಗೆ 10 ಸದಸ್ಯರ ಪೊಲೀಸರ ತಂಡ ಛತ್ತೀಸ್ ಗಢದ ರಾಜಧಾನಿ ರಾಯ್ಪುರಕ್ಕೆ ಕರೆದೊಯ್ದಿದೆ. ಈ ನಡುವೆ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೆ ರಾಜ್ಯದಿಂದ ಕಾಳಿಚರಣ್‌ನನ್ನು ಬಂಧಿಸುವ ಮೂಲಕ ಛತ್ತೀಸ್‌ಗಢ ಪೊಲೀಸರು ಅಂತರ-ರಾಜ್ಯ ಪ್ರೋಟೋಕಾಲ್ ಅನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಮಧ್ಯಪ್ರದೇಶ ಪೊಲೀಸ್ ಮುಖ್ಯಸ್ಥರು ಈ ವಿಚಾರವನ್ನು ಛತ್ತೀಸ್ ಗಢ ಪೊಲೀಸ್ ಮುಖ್ಯಸ್ಥರೊಂದಿಗೆ ಚರ್ಚೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Kalicharan Maharaj arrested over remarks against Mahatma Gandhi

ಡಿ. 17 ರಿಂದ 20ರವರೆಗೆ ಧಾರ್ಮಿಕ ಸಮ್ಮೇಳನ ನಡೆದಿತ್ತು. ಇದರಲ್ಲಿ ಭಾಷಣ ಮಾಡಿದ ಅನೇಕರು ದ್ವೇಷ ಭಾಷಣಗಳನ್ನು ಮಾಡಿದ್ದರು ಎಂದು ಆರೋಪಿಸಲಾಗಿದೆ. ಇದರ ಕೆಲವು ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಟೀಕೆಗೆ ಗುರಿಯಾಗಿವೆ.ಯಾವುದೇ ದೂರು ದಾಖಲಾಗದ ಕಾರಣ ಎಫ್‌ಐಆರ್ ದಾಖಲಿಸಿಲ್ಲ ಎಂದು ಈ ಮೊದಲು ಪೊಲೀಸರು ತಿಳಿಸಿದ್ದರು. ವೈರಲ್ ಆಗಿರುವ ವಿಡಿಯೋಗಳ ಬಗ್ಗೆ ಪ್ರಶ್ನಿಸಿದಾಗ, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಲಾಗುತ್ತಿದೆ ಎಂದು ಹರಿದ್ವಾರ ಎಸ್‌ಪಿ ಸ್ವತಂತ್ರ ಕುಮಾರ್ ಸಿಂಗ್ ಹೇಳಿದ್ದರು.

ತೃಣಮೂಲ ಕಾಂಗ್ರೆಸ್ ನಾಯಕ ಮತ್ತು ಆರ್‌ಟಿಐ ಕಾರ್ಯಕರ್ತ ಸಾಕೇತ್ ಗೋಖಲೆ ನೀಡಿದ ದೂರಿನ ಅನ್ವಯ ಎಫ್‌ಐಆರ್ ದಾಖಲಾಗಿದೆ. ಶಿಯಾ ವಕ್ಫ್ ಮಂಡಳಿ ಅಧ್ಯಕ್ಷರಾಗಿದ್ದ, ಇತ್ತೀಚೆಗಷ್ಟೇ 'ಜಿತೇಂದರ್ ನಾರಾಯಣ್' ಹೆಸರಿನಲ್ಲಿ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದ ವಸೀಂ ರಿಜ್ವಿ ಅವರ ಹೆಸರನ್ನು ಉಲ್ಲೇಖಿಸಲಾಗಿದೆ. ಅವರು ಮತ್ತು ಇತರರು ಸಮ್ಮೇಳನದಲ್ಲಿ ಅವಹೇಳನಾಕಾರಿ ಮತ್ತು ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿದ್ದರು ಎಂದು ಎಫ್‌ಐಆರ್ ಹೇಳಿದೆ.

'ಮಯನ್ಮಾರ್‌ನಲ್ಲಿ ನಡೆದಿರುವಂತೆಯೇ, ನಮ್ಮ ಪೊಲೀಸರು, ನಮ್ಮ ರಾಜಕಾರಣಿಗಳು, ನಮ್ಮ ಸೇನೆ ಮತ್ತು ಪ್ರತಿ ಹಿಂದೂ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳಬೇಕು ಮತ್ತು ಸಮುದಾಯ ಸ್ವಚ್ಛತೆಯನ್ನು ನಡೆಸಬೇಕು. ಈಗ ನಮಗೆ ಬೇರೆ ಆಯ್ಕೆ ಉಳಿದಿಲ್ಲ' ಎಂದು ಅವರು ಹೇಳುವುದು ವಿಡಿಯೋದಲ್ಲಿ ದಾಖಲಾಗಿದೆ. ಮತ್ತೊಂದು ವಿವಾದಾತ್ಮಕ ವಿಡಿಯೋ ಪೂಜಾ ಶಕುನ್ ಪಾಂಡೆ ಅಲಿಯಾಸ್ ಸಾಧ್ವಿ ಅನ್ನಪೂರ್ಣ ಅವರದ್ದಾಗಿದ್ದು, 'ಅವರನ್ನು ಮುಗಿಸಬೇಕು ಎಂದಿದ್ದರೆ, ಅವರನ್ನು ಸಾಯಿಸಿ. ಇದನ್ನು ಗೆಲ್ಲಲು ಅವರಲ್ಲಿ 20 ಲಕ್ಷ ಜನರನ್ನು ಕೊಲ್ಲುವ 100 ಸೈನಿಕರು ನಮಗೆ ಬೇಕಿದ್ದಾರೆ' ಎಂದಿರುವುದು ಸೆರೆಯಾಗಿದೆ.

Recommended Video

      ಸೌತ್ ಆಫ್ರಿಕಾವನ್ನು ಬಗ್ಗುಬಡಿದಿದ್ದು ಹೇಗೆ ಅಂತಾ ಹೇಳಿದ ವಿರಾಟ್ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+