ರಾಷ್ಟ್ರಪ್ರಶಸ್ತಿ ವಿಜೇತ ನಟನ ಸಾವಿನ ತನಿಖೆ ಸಿಬಿಐಗೆ

ಕೊಚ್ಚಿ, ಏಪ್ರಿಲ್ 13: ಬಹುಭಾಷಾ ನಟ, ಜಾನಪದ ಗಾಯಕ, ಮಿಮಿಕ್ರಿ ಕಲಾವಿದ ಕಲಾಭವನ್ ಮಣಿ ಸಾವಿನ ರಹಸ್ಯ ಇನ್ನೂ ಬಯಲಾಗಿಲ್ಲ. ಮಣಿ ಅವರದ್ದು ಸಹಜ ಸಾವಲ್ಲ, ಈ ಬಗ್ಗೆ ಸಿಬಿಐ ತನಿಖೆ ನಡೆಯಬೇಕು ಎಂದು ಕೇರಳದ ಬಿಜೆಪಿ ಮುಖಂಡರು, ಮಣಿ ಅವರ ಕುಟುಂಬಸ್ಥರು ನೀಡಿದ ಮನವಿಗೆ ಬೆಲೆ ಸಿಕ್ಕಿದೆ. ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಕೇರಳ ಹೈಕೋರ್ಟು ಆದೇಶಿಸಿದೆ.

ಒಂದು ತಿಂಗಳೊಳಗೆ ಪ್ರಕರಣವನ್ನು ವಹಿಸಿಕೊಂಡು ತನಿಖೆ ಆರಂಭಿಸಬೇಕೆಂದು ಹೈಕೋರ್ಟು ಸೂಚಿಸಿದೆ. ಮಣಿಯ ಸಹೋದರ ಆರ್‌ಎಲ್‌ವಿ ರಾಮಕೃಷ್ಣನ್ ನೀಡಿದ ಅರ್ಜಿಯನ್ನು ಹೈಕೋರ್ಟು ಪರಿಗಣಿಸಿದೆ. ಕಲಾಭವನ್ ಮಣಿಯ ಸಾವಿನ ಕುರಿತ ನಿಗೂಢತೆಯನ್ನು ನಿವಾರಿಸಬೇಕು ಎಂದು ಮಣಿ ಅವರ ಪತ್ನಿ ನಿಮ್ಮಿ ಹಾಗೂ ಸಹೋದರ ಆರ್‌ಎಲ್‌ವಿ ರಾಮಕೃಷ್ಣನ್ ಅವರು ಕೋರಿದ್ದರು.[ಈ ಬಹುಭಾಷಾ ನಟನ ಸಾವಿನ ನಿಗೂಢತೆ ಇನ್ನೂ ಬಯಲಾಗಿಲ್ಲ]

Kalabhavan Mani death case:Kerala HC asks CBI to take over probe

ಈ ಹಿಂದೆ ಸಿಬಿಐ ತನಿಖೆ ಕುರಿತಂತೆ ಸ್ಪಷ್ಟನೆ ನೀಡಿದ ಸರ್ಕಾರ, ರಾಸಾಯನಿಕ ಪರೀಕ್ಷೆ ಸಹಿತ ವಿವರವಾದ ತನಿಖೆಯನ್ನು ನಡೆಸಲಾಗಿದೆ ಆದ್ದರಿಂದ ಪ್ರಕರಣದ ತನಿಖೆಯನ್ನು ವಹಿಸಿಕೊಳ್ಳುವ ಅಗತ್ಯವಿಲ್ಲ ಎಂದು ಕೋರ್ಟಿಗೆ ತಿಳಿಸಿತ್ತು.

ಮಣಿ ಅವರದ್ದು ಅಸಹಜ ಸಾವು ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ. ಕನ್ನಡ ಸೇರಿದಂತೆ ಮಲಯಾಳಂ, ತಮಿಳು, ತೆಲುಗು ಚಿತ್ರಗಳಲ್ಲಿ ನಟಿಸಿದ್ದ ಮಣಿ ಅವರ ಮೃತದೇಹದಲ್ಲಿ ಮಿಥೈಲ್ ಅಲ್ಕೋಹಾಲ್ ಅಂಶ ಅಧಿಕವಾಗಿರುವುದು ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯನ್ನು ತ್ರಿಸ್ಸೂರಿನ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ನಡೆಸಲಾಯಿತು. ವಿಸೇರಾದಲ್ಲಿ ಕೀಟನಾಶಕ ಅಂಶ ಇರುವುದು ಅನುಮಾನ ಮೂಡಿಸಿತ್ತು. ಆದರೆ, ಈಗ ಕೀಟನಾಶಕ ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+