ಉತ್ತರಪ್ರದೇಶದಲ್ಲಿ ಹಳಿ ತಪ್ಪಿದ ಎಕ್ಸ್ ಪ್ರೆಸ್ ರೈಲು, 60 ಜನರಿಗೆ ಗಾಯ

Posted By:
Subscribe to Oneindia Kannada

ಲಕ್ನೋ, ಆಗಸ್ಟ್ 23: ಉತ್ತರಪ್ರದೇಶದಲ್ಲಿ ಮತ್ತೊಂದು ರೈಲು ದುರಂತ ಸಂಭವಿಸಿದೆ. ಅಜಂಗಢದಿಂದ ದೆಹಲಿಗೆ ತೆರಳುತ್ತಿದ್ದ ಕೈಫಿಯತ್ ಎಕ್ಸ್ ಪ್ರೆಸ್ ರೈಲು ದುರಂತಕ್ಕೀಡಾಗಿದೆ.

ಬುಧವಾರ ಮುಂಜಾನೆ 2.40ರ ಸುಮಾರಿಗೆ ಔರಾಲಿಯಾ ಬಳಿ ಸಂಭವಿಸಿದ ಈ ಅಪಘಾತದಲ್ಲಿ ಕೈಫಿಯತ್ ಎಕ್ಸ್ ಪ್ರೆಸ್ ನ 10 ಬೋಗಿಗಳು ಹಳಿ ತಪ್ಪಿವೆ.

Kaifiyat Express derails at UP, over 50 injured, helpline numbers here


ಕೈಫಿಯತ್ ಎಕ್ಸ್ ಪ್ರೆಸ್ ರೈಲಿನ ಬೋಗಿಗಳು ಹಳಿ ತಪ್ಪಿದ್ದರಿಂದ 60ಕ್ಕೂ ಅಧಿಕ ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

Helpline numbers:
FD: 05278-222603,
SHG: 9794839010,
LKO:9794830975, KO:0522-2237677

ಇತ್ತೀಚೆಗೆ ಕಳಿಂಗ- ಉತ್ಕಲ್ ಎಕ್ಸ್ ಪ್ರೆಸ್ ಹಳಿ ತಪ್ಪಿ 22 ಜನರ ಸಾವಿಗೆ ಕಾರಣವಾಗಿತ್ತು. ಇದಾದ ಕೆಲ ದಿನಗಳ ಬಳಿಕ ಈ ಅಪಘಾತ ಸಂಭವಿಸಿದೆ. ಗಾಯಗೊಂಡವರನ್ನು ಅಚ್ಚಾಲ್ಡಾ ನಾಗರಿಕ ಆಸ್ಪತ್ರೆಗೆ ಸೇರಿಸಲಾಗಿದೆ.

ಎಕ್ಸ್ ಪ್ರೆಸ್ ರೈಲಿನ ಇಂಜಿನ್ ಭಾಗ ಸೇರಿದಂತೆ ಬೋಗಿಗಳು ಹಳಿ ತಪ್ಪಿದ್ದು, ರಕ್ಷಣಾ ಕಾರ್ಯಾಚರಣೆ ಜಾರಿಯಲ್ಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Kaifiyat Express has derailed near Auraiya in Uttar Pradesh. Ten coaches of the train derailed following which over 60 were injured.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ