ಪ್ರಯಾಣಿಕರ ದೂರು, ದೆಹಲಿ ವಿಮಾನ ನಿಲ್ದಾಣಕ್ಕೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಭೇಟಿ

ನವದೆಹಲಿ, ಡಿ. 12: ಪ್ರಯಾಣಿಕರ ದೂರುಗಳ ನಂತರ ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಎಂ ಸಿಂಧಿಯಾ ಸೋಮವಾರ ದೆಹಲಿ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ದೆಹಲಿ ವಿಮಾನ ನಿಲ್ದಾಣದಲ್ಲಿ ದೀರ್ಘ ಸರತಿ ಸಾಲುಗಳಲ್ಲಿ ನಿಲ್ಲುವುದು ಮತ್ತು ಚೆಕ್-ಇನ್‌ ಆಗುವಲ್ಲು ಭಾರಿ ವಿಳಂಬವಾಗುತ್ತಿದೆ ಎಂದು ಪ್ರಯಾಣಿಕರು ಸಾಮಾಜಿಕ ಮಾಧ್ಯಮದಲ್ಲಿ ದೂರು ನೀಡಿದ್ದರು. ಬಳಿಕ ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಎಂ ಸಿಂಧಿಯಾ, ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ವಿಮಾನ ನಿಲ್ದಾಣಕ್ಕೆ ಬಂದು ತಪಾಸಣೆ ನಡೆಸಿದರು.

ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿಯೊಂದಿಗೆ ಸಂವಹನ ನಡೆಸಿದರು.

ಭಾನುವಾರ ದೆಹಲಿ ವಿಮಾನ ನಿಲ್ದಾಣದಲ್ಲಿ ಹೆಚ್ಚು ಕಾಲ ಕಾಯುವಂತಾದ ಅನುಭವವನ್ನು ಪ್ರಯಾಣಿಕರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಐಜಿಐಎ) ಟರ್ಮಿನಲ್ 3 (ಟಿ3) ಯಲ್ಲಿನ ಜನಸಂದಣಿಯ ಚಿತ್ರಗಳನ್ನು ಅನೇಕರು ಹಂಚಿಕೊಂಡಿದ್ದಾರೆ.

Jyotiraditya M Scindia At Delhi Airport After complaints from commuters

ಹೊಸ ಟರ್ಮಿನಲ್‌ಗಳ ಅಗತ್ಯವಿದೆ ಎಂದು ಹಲವು ಪ್ರಯಾಣಿಕರು ತಿಳಿಸಿದ್ದರು. ದೂರು ನೀಡಿದ ಪ್ರಯಾಣಿಕರೊಬ್ಬರ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ, ದೆಹಲಿ ವಿಮಾನ ನಿಲ್ದಾಣವು ಪ್ರಯಾಣಿಕರಿಗೆ ಸಹಾಯ ಮಾಡಲು ಮತ್ತು ಯಾವುದೇ ಅನಾನುಕೂಲತೆಯನ್ನು ಕಡಿಮೆ ಮಾಡಲು ಅಧಿಕಾರಿಗಳನ್ನು ನಿಯೋಜಿಸಿದೆ ಎಂದು ಹೇಳಿದೆ.

ದೆಹಲಿ ವಿಮಾನ ನಿಲ್ದಾಣ ಮತ್ತು ನಾಗರಿಕ ವಿಮಾನಯಾನ ಸಚಿವಾಲಯವು ಚೆಕ್-ಇನ್ ಸಮಯದಲ್ಲಿ ದಟ್ಟಣೆ ಮತ್ತು ದೀರ್ಘ ಸರತಿಗಳಲ್ಲಿ ನಿಲ್ಲಬೇಕಾದ ದೂರುಗಳನ್ನು ಕಡಿಮೆ ಮಾಡಲು ಮಾಡಲು ನಾಲ್ಕು ಅಂಶಗಳ ಯೋಜನೆಯನ್ನು ರೂಪಿಸಿದೆ.

Jyotiraditya M Scindia At Delhi Airport After complaints from commuters

ಎಕ್ಸ್-ರೇ ಸ್ಕ್ರೀನಿಂಗ್ ಸಿಸ್ಟಮ್‌ಗಳು, ಒಂದು ಸ್ವಯಂಚಾಲಿತ ಟ್ರೇ ರಿಟ್ರೀವಲ್ ಸಿಸ್ಟಮ್ (ATRS) ಯಂತ್ರ, ಎರಡು ಗುಣಮಟ್ಟದ ಎಕ್ಸ್-ರೇ ಯಂತ್ರಗಳು ಮತ್ತು ಎರಡು ಪ್ರವೇಶ ದ್ವಾರಗಳಮ್ಮು ತೆರೆಯಲಾಗುತ್ತದೆ ಎಂದು ಹೇಳಿದೆ.

ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರತಿದಿನ ಸುಮಾರು 1.90 ಲಕ್ಷ ಪ್ರಯಾಣಿಕರು ಮತ್ತು ಸುಮಾರು 1,200 ವಿಮಾನಗಳು ಕಾರ್ಯನಿರ್ವಹಿಸುತ್ತವೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+