ದುಬೈ-ದೆಹಲಿ ವಿಮಾನದಲ್ಲಿ ಬಾಂಬ್ ಇದೆ ಎಂದು ಇಮೇಲ್ ಮಾಡಿದ 13 ವರ್ಷದ ಬಾಲಕ: ಮುಂದೆ ಆಗಿದ್ದೇನು?
ನವದೆಹಲಿ, ಜೂನ್.24: ಇತ್ತೀಚೆಗೆ ವಿಮಾನ ನಿಲ್ದಾಣಗಳಿಗೆ, ಶಾಲಾ ಕಾಲೇಜುಗಳಿಗೆ, ಆಸ್ಪತ್ರೆಗಳಿಗೆ ಹುಸಿ ಬಾಂಬ್ ಕರೆ ಬರುವುದು ಸಾಮಾನ್ಯ ಎನ್ನುವಂತಾಗಿದೆ. ವಾರದಲ್ಲಿ ಮೂರರಿಂದ ನಾಲ್ಕು ಘಟನೆಗಳು ನಡಯುತ್ತಲೆ ಇವೆ. ಒಮ್ಮೆ ಬೆಂಗಳೂರು, ಒಮ್ಮೆ ನವದೆಹಲಿ.. ಹೀಗೆ. ಪೊಲೀಸರು ಕೂಡ ಸಾಕು ಸಾಕಾಗಿ ಹೋಗಿದ್ದಾರೆ. ಈಗ ಮತ್ತೆ ದೆಹಲಿಯಲ್ಲಿ ಇಂತಹದ್ದೆ ಇಮೇಲ್ ಬಂದಿದೆ.
ದುಬೈಗೆ ತೆರಳುತ್ತಿದ್ದ ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂದು ದೆಹಲಿ ವಿಮಾನ ನಿಲ್ದಾಣಕ್ಕೆ ನಕಲಿ ಇಮೇಲ್ ಬೆದರಿಕೆ ಕಳುಹಿಸಿಸಲಾಗಿದೆ. ತಕ್ಷಣ ಪೊಲಿಸರು ಮತ್ತು ಬಾಂಬ ನಿಷ್ಕ್ರಿಯ ದಳ ಅಲರ್ಟ್ ಆಗಿದೆ. ಆದರೆ, ಈ ಇಮೇಲ್ ಮಾಡಿದ್ದ ಕೇವಲ 13 ವರ್ಷದ ಬಾಲಕ. ಹೌದು.. ಅಪ್ತಾಪ್ರ ಬಾಲಕನೊಬ್ಬ ಇಂತಹ ಇಮೇಲ್ ಮಾಡಿದ್ದು, ಪೊಲೀಸರು ಬಂಧಿಸಿದ್ದಾರೆ.

ಅಪ್ರಾಪ್ತನಿಂದ ಹುಸಿ ಬಾಂಬ್ ಕರೆ
ಉತ್ತರಾಖಂಡ ಮೂಲದ 13 ವರ್ಷದ ಬಾಲಕನೊಬ್ಬ ದೆಹಲಿ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಇಮೇಲ್ ಕಳುಹಿಸಿದ್ದ ಆರೋಪದ ಮೇಲೆ ಸಿಕ್ಕಿಬಿದ್ದಿದ್ದಾನೆ. 9 ನೇ ತರಗತಿಯ ವಿದ್ಯಾರ್ಥಿಯಾಗಿರುವ ಈತ, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿನ ಸುದ್ದಿಗಳಿಂದ ಪ್ರಭಾವಿತನಾಗಿ "ಮೋಜಿಗಾಗಿ" ಬೆದರಿಕೆ ಕರೆ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ. ಹಲವು ಮಕ್ಕಳು ಇದೇ ರೀತಿಯ ಬಾಂಬ್ ನಕಲಿ ಇಮೇಲ್‌ಗಳನ್ನು ಕಳುಹಿಸುವುದನ್ನು ಗಮನಿಸಿದ್ದಾರೆ.
ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ (ಐಜಿಐ ಏರ್‌ಪೋರ್ಟ್) ಉಷಾ ರಂಗ್ನಾನಿ, ಕೆಲವು ದಿನಗಳ ಹಿಂದೆ ನಕಲಿ ಬಾಂಬ್ ಬೆದರಿಕೆ ಇಮೇಲ್ ಮಾಡಿದ ಇನ್ನೊಬ್ಬ ಅಪ್ರಾಪ್ತರ ಸುದ್ದಿಯಿಂದ ಪ್ರಭಾವಿತನಾದ ನಂತರ ಹುಡುಗ "ಕೇವಲ ಮೋಜಿಗಾಗಿ" ಮೇಲ್ ಕಳುಹಿಸಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.

ಮಾಧ್ಯಮಗಳಿಗೆ ವಿವರಗಳನ್ನು ಹಂಚಿಕೊಂಡಿರುವ ಡಿಸಿಪಿ, "ಜೂನ್ 17 ರಂದು ದುಬೈಗೆ ತೆರಳುವ ವಿಮಾನಕ್ಕೆ ಬಾಂಬ್ ಬೆದರಿಕೆಯ ಬಗ್ಗೆ ಬೆದರಿಕೆ ಮೇಲ್ ಬಂದ ನಂತರ ದೆಹಲಿ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಮಾಡಲಾಗಿತ್ತು. ಸಂಪೂರ್ಣ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು. ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಭದ್ರತೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು SOP ನಲ್ಲಿ ಹಾಕಲಾದ ಮಾರ್ಗಸೂಚಿಗಳು ಮತ್ತು ಪ್ರೋಟೋಕಾಲ್ ಅನ್ನು ಸರಿಯಾಗಿ ಅನುಸರಿಸಲಾಗಿದೆ ಎಂಬುದನ್ನು ಚೆಕ್ ಮಾಡಲಾಯಿತು. ಸರಿಯಾದ ಪರಿಶೀಲನೆಯ ನಂತರ, ಇದು ಹುಸಿ ಎಂದು ಕಂಡುಬಂದಿದೆ" ಎಂದಿದ್ದಾರೆ.
"ಘಟನೆ ಹಿನ್ನೆಲೆ ಎಫ್‌ಐಆರ್ ದಾಖಲಿಸಿ, ಕರೆ ಮಾಡಿದ ಆರೋಪಿಯನ್ನು ಕಂಡುಹಿಡಿಯಲು ತನಿಖೆಯನ್ನು ಪ್ರಾರಂಭಿಸಲಾಗಿದೆ. ಇಮೇಲ್ ಕಳುಹಿಸಿದ ನಂತರ ಅದನ್ನು ಐಡಿ ಡಿಲೀಟ್ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ತಾಂತ್ರಿಕ ತನಿಖೆಯ ಪಿನ್ ಉತ್ತರಾಂಚಲ್‌ನ ಪಿಥೋರಗಢ್‌ನಲ್ಲಿ ಇಮೇಲ್‌ನ ಮೂಲವನ್ನು ತೋರಿಸಿತ್ತು. ತಕ್ಷಣವೇ ತಂಡವನ್ನು ಅಲ್ಲಿಗೆ ಕಳುಹಿಸಲಾಯಿತು ಮತ್ತು ಹುಸಿ ಇಮೇಲ್ ಕಳುಹಿಸಿದ್ದಕ್ಕಾಗಿ ಹುಡುಗನನ್ನು ಬಂಧಿಸಲಾಯಿತು" ಎಂದು ಹೇಳಿದ್ದಾರೆ.
ವಿಚಾರಣೆಯಲ್ಲಿ ಓದಿಕೊಳ್ಳಲು ಪೋಷಕರು ಮೊಬೈಲ್ ನೀಡಿದ್ದರು, ಅದರ ಮೂಲಕ ಇಮೇಲ್ ಕಳುಹಿಸಿದ್ದೇನೆ ಮತ್ತು ನಂತರ ತನ್ನ ಐಡಿಯನ್ನು ಅಳಿಸಿದ್ದೇನೆ ಎಂದು ಬಾಲಕ ಪೊಲೀಸರಿಗೆ ತಿಳಿಸಿದ್ದಾನೆ. ಭಯಗೊಂಡ ಆತ ಪೋಷಕರ ಬಳಿ ಯಾವುದೇ ಮಾಹಿತಿ ಹಂಚಿಕೊಂಡಿರಲಿಲ್ಲ. ಆತನನ್ನು ಬಂಧಿಸಿ ನಂತರ ಪೋಷಕರಿಗೆ ಒಪ್ಪಿಸಲಾಗಿದೆ.












Click it and Unblock the Notifications