ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಕ್ಷಿ ಇಲ್ಲದ ಕೇಸ್ : ತಲ್ವಾರ್ ದಂಪತಿಗೆ ಶಿಕ್ಷೆ ಏಕೆ?

By Mahesh
|
Google Oneindia Kannada News

ನವದೆಹಲಿ, ನ.27: ಆರುಷಿ ತಲ್ವಾರ್ - ಹೇಮರಾಜ್ ಡಬ್ಬಲ್ ಮರ್ಡರ್ ಪ್ರಕರಣದಲ್ಲಿ ಡಾ. ರಾಜೇಶ್ ತಲ್ವಾರ್ ಹಾಗೂ ನೂಪುರ್ ಅವರಿಗೆ ಜೀವಾವಧಿ ಶಿಕ್ಷೆ ನೀಡಿ ಗಾಜಿಯಾಬಾದ್ ವಿಶೇಷ ನ್ಯಾಯಾಲಯದ ನ್ಯಾ. ಎಸ್ ಲಾಲ್ ತೀರ್ಪು ಪ್ರಕಟಿಸಿದ್ದಾರೆ.

ಈ ಪ್ರಕರಣದಲ್ಲಿ ಆರೋಪಿಗಳು ತಪ್ಪಿತಸ್ಥರು ಎಂದು ಸಾಬೀತು ಮಾಡಲು ಹಾಕಿರುವ ಐಪಿಎಸ್ ಸೆಕ್ಷನ್ ಅನ್ವಯ ಕನಿಷ್ಠ ಜೀವಾವಧಿ ಶಿಕ್ಷೆ ವಿಧಿಸುವುದು ನಿರೀಕ್ಷಿತವಾಗಿತ್ತು. ಆದರೆ, ಯಾವುದೇ ಸಾಕ್ಷಿ ಇಲ್ಲದ ಪ್ರಕರಣದಲ್ಲಿ ಸಿಬಿಐ ತಂಡ ಒದಗಿಸಿರುವ 26 ಪ್ರಬಲ ಸಾಂದರ್ಭಿಕ ಸಾಕ್ಷ್ಯಗಳನ್ನು ಆಧಾರಿಸಿದ ತೀರ್ಪು ನೀಡಲಾಗಿದೆ ಎಂದು ನ್ಯಾ. ಶಾಂತಿಲಾಲ್ ಹೇಳಿದ್ದಾರೆ.

14 ವರ್ಷದ ಮಗಳು ಆರುಷಿ ತಲ್ವಾರ್ ಹಾಗೂ ಮನೆಗೆಲಸದವ ಹೇಮರಾಜ್ ಹತ್ಯೆ ಮಾಡಿ ತಪ್ಪಿತಸ್ಥರಾಗಿರುವ ಡಾ.ರಾಜೇಶ್ ತಲ್ವಾರ್ (49) ಮತ್ತು ಡಾ.ನೂಪುರ್ ತಲ್ವಾರ್ (48)ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. [ಡಬ್ಬಲ್ ಮರ್ಡರ್ ಟೈಮ್ ಲೈನ್]

ಜತೆಗೆ ಸಾಕ್ಷ್ಯಗಳ ನಾಶ ಮಾಡಿದ ಆರೋಪಕ್ಕೆ ಸಂಬಂಧಿಸಿ ದಂಪತಿಗೆ ಐದು ವರ್ಷ ಜೈಲು ಮತ್ತು ಎಫ್ಐಆರ್ ದಾಖಲು ವೇಳೆ ಪೊಲೀಸರಿಗೆ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಡಾ. ರಾಜೇಶ್ ತಲ್ವಾರ್ ಗೆ ಒಂದು ವರ್ಷದ ಜೈಲು ಶಿಕ್ಷೆಯನ್ನೂ ಹೆಚ್ಚುವರಿಯಾಗಿ ನ್ಯಾಯಾಲಯ ವಿಧಿಸಿದೆ. ಡಾ.ರಾಜೇಶ್ ತಲ್ವಾರ್ ಗೆ 17 ಸಾವಿರ, ಡಾ. ನೂಪುರ್ ಗೆ 15 ಸಾವಿರ ದಂಡ ವಿಧಿಸಲಾಗಿದೆ. ತಪ್ಪಿದಲ್ಲಿ ಆರು ತಿಂಗಳ ಜೈಲು ಶಿಕ್ಷೆಯನ್ನೂ ಅನುಭವಿಸಬೇಕಾಗುತ್ತದೆ ಎಂದೂ ಕೋರ್ಟ್ ಎಚ್ಚರಿಕೆ ನೀಡಿದೆ. ನ್ಯಾ. ಶಾಂತಿಲಾಲ್ ಅವರು ನೀಡಿದ 26 ಕಾರಣಗಳ ಸಾರಾಂಶ ಇಲ್ಲಿವೆ...

ಹೇಮರಾಜ್ ಜತೆ ಆರುಷಿ ಸಂಬಂಧ

ಹೇಮರಾಜ್ ಜತೆ ಆರುಷಿ ಸಂಬಂಧ

2008ರ ಮೇ 15-16ರ ರಾತ್ರಿ ಮನೆಗೆಲಸದಾಳು ಹೇಮರಾಜ್ ಜತೆ ಪುತ್ರಿ ಆರುಷಿ ಇದ್ದದ್ದನ್ನು ಕಂಡು ಡಾ.ತಲ್ವಾರ್ ದಂಪತಿಗೆ ಕೋಪಗೊಂಡು ಕೊಲೆ ಮಾಡಿದ್ದಾರೆ.

ಆರುಷಿ ಜತೆ ಹೇಮರಾಜ್ ಅಸಹ್ಯಕರ ಭಂಗಿಯಲ್ಲಿದ್ದ ಎಂದು ತಿಳಿದು ಬಂದಿದೆ. ಇದೊಂದು ಅಪರೂಪದ ಪ್ರಕರಣ. ತಿರುವಿನ ಮೇಲೆ ತಿರುವು ಇದಕ್ಕೆ ಸಿಕ್ಕಿತ್ತು. ಹೀಗಾಗಿ, ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಸಿಬಿಐ ವಾದಿಸಿತು. ಆದರೆ, ಹೇಮರಾಜ್ ಜತೆ ಆರುಷಿ ಸಂಬಂಧ ಹೊಂದಿದ್ದಳು ಎಂಬುದಕ್ಕೆ ಯಾವುದೇ ಪುರಾವೇ ಸಿಕ್ಕಿಲ್ಲ

ಜಲವಾಯುವಿಹಾರ್ ನ ಫ್ಲಾಟ್ ನಂ. ಎಲ್ -32ರಲ್ಲಿ ರಾತ್ರಿ 9.30ಕ್ಕೆ ಈ ಕೃತ್ಯ ನಡೆದಿದ್ದು, ರಾಜೇಶ್ ಅವರ ಡ್ರೈವರ್ ಉಮೇಶ್ ಶರ್ಮ ಪ್ರಮುಖ ಸಾಕ್ಷಿಯಾಗಿದ್ದಾರೆ.

ಪೋಷಕರೆ ಪಾತಕಿಗಳು

ಪೋಷಕರೆ ಪಾತಕಿಗಳು

ಇಡೀ ಚರಿತ್ರೆಯನ್ನು ಗಮನಿಸಿದಾಗ ಹೆತ್ತವರೇ ಪುತ್ರಿಯನ್ನು ಕೊಲೆ ಮಾಡಿದ ಘಟನೆ ಸಿಗುವುದು ಅಪರೂಪ. ಇಂಥ ಹೇಯ ಕೃತ್ಯಕ್ಕೆ ಏಕೆ ಮನಸ್ಸು ಮಾಡಿದಿರಿ?
ದೂರದ ನೇಪಾಳದಿಂದ ಬಂದ ಮನೆಯಾಳು (ಹೇಮರಾಜ್) ಎಲ್ಲ ಕೆಲಸವನ್ನೂ ಮಾಡಿಕೊಂಡಿದ್ದ. ಮನೆಯ ಒಡೆಯನ ಆಣತಿಯನ್ನು ನಿಷ್ಠೆಯಿಂದ ಪಾಲಿಸಿದ್ದ.

ಮೇ16 ರಂದು ಬೆಳಗ್ಗೆ 6 ಗಂಟೆಗೆ ಆರುಷಿ ಶವ ಬೆಡ್ ರೂಮಿನಲ್ಲಿ ಕಂಡು ಬಂದಿತ್ತು. ಈ ಕೋಣೆ ಪಕ್ಕದಲ್ಲಿ ಆರೋಪಿಗಳ ಬೆಡ್ ರೂಮ್ ಇದೆ. ಕೆಲಸದಾಳು ಹೇಮರಾಜ್ ನಾಪತ್ತೆ ಎಂದು ಸುದ್ದಿ ಹಬ್ಬಿಸಲಾಗಿತ್ತು.
ಹೇಮರಾಜ್ ಶವ ಪತ್ತೆ

ಹೇಮರಾಜ್ ಶವ ಪತ್ತೆ

ಇದು ಅಪರೂಪದಲ್ಲಿ ಅಪರೂಪದ ಪ್ರಕರಣ ಎಂದು ಸಿಬಿಐ ಪರ ವಕೀಲ ಆರ್.ಕೆ.ಸೈನಿ ಆಗ್ರಹಪೂರ್ವಕವಾಗಿ ವಾದ ಮಂಡಿಸಿದರು. ಆದರೆ, ತಲ್ವಾರ್ ದಂಪತಿ ಪರ ವಕೀಲ ತನ್ವೀರ್ ಮಿರ್ ತಮ್ಮ ಕಕ್ಷಿದಾರರ ವಿರುದ್ಧ ಇರುವ ಸಾಕ್ಷ್ಯಗಳು ಪ್ರಬಲವಾಗಿಲ್ಲ. ಹೀಗಾಗಿ ಅವರಿಗೆ ಕಡಿಮೆ ಪ್ರಮಾಣದ ಶಿಕ್ಷೆ ವಿಧಿಸಬೇಕೆಂದು ಎಂದರು. ವಾದ ಪ್ರತಿವಾದ ಐದು ನಿಮಿಷದಲ್ಲೇ ಮುಕ್ತಾಯವಾಯಿತು.

ಮೇ 17 2008 ರಂದು ಹೇಮರಾಜ್ ಶವ ರಾಜೇಶ್ ಮನೆ ಟೆರೇಸ್ ಮೇಲೆ ಸಿಕ್ಕಿತು. ಟೆರೇಸ್ ಬಾಗಿಲು ಒಳಗಿನಿಂದ ಲಾಕ್ ಮಾಡಲಾಗಿತ್ತು. ರಕ್ತದ ಮಡುವಿನಲ್ಲಿ ಶವ ಕಾಣಿಸಿಕೊಂಡಿತ್ತು.

ಸಾಂದರ್ಭಿಕ ಸಾಕ್ಷಿ

ಸಾಂದರ್ಭಿಕ ಸಾಕ್ಷಿ

ಘಟನೆ ನಡೆದ ರಾತ್ರಿಯಲ್ಲಿ ರಾಜೇಶ್ ತಲ್ವಾರ್ ದಂಪತಿಯಲ್ಲದೆ ಮತ್ತೊಬ್ಬರು ಮನೆಗೆ ಬಂದಿರುವ ಬಗ್ಗೆ ಮಾಹಿತಿ ಇಲ್ಲ. ಹೀಗಾಗಿ ಕೊಲೆಯಾದವರ ಸಂಪರ್ಕದಲ್ಲಿ ಇದ್ದದ್ದು ಈ ದಂಪತಿಗಳು ಮಾತ್ರ. ಕೊಲೆ ಮಾಡಿದ್ದರೆ ದಂಪತಿಗಳೆ ಮಾಡಿರಬೇಕು ಎಂದು ಸಿಬಿಐ ತಂಡ ವಾದಿಸಿ ಗೆದ್ದಿದೆ.

ಆರುಷಿ ಬೆಡ್ ರೂಮ್ ಆಟೋಮ್ಯಾಟಿಕ್ ಕ್ಲಿಕ್ ಶಟ್ ಲಾಕ್ ಹೊಂದಿದೆ. ಲಾಕ್ ಆದರೆ ಒಳಗಿದ್ದವರು ಮಾತ್ರ ಕೀ ಬಳಸಿ ಓಪನ್ ಮಾಡಬಹುದಾಗಿದೆ ಎಂಬುದನ್ನು ತಲ್ವಾರ್ ದಂಪತಿ ಒಪ್ಪಿಕೊಂಡಿದ್ದಾರೆ ಎಂದು ಆಗಿನ ನೋಯ್ಡಾ ಎಸ್ ಪಿ ಮಹೇಶ್ ಕುಮಾರ್ ಮಿಶ್ರಾ ಹೇಳಿಕೆ ದಾಖಲಿಸಿದ್ದಾರೆ. ಆದರೆ, ಆರುಷಿ ಕೋಣೆ ಓಪನ್ ಆಗಿದ್ದು ಹೇಗೆ ಯಾರು ಓಪನ್ ಮಾಡಿದ್ದು ಎಂಬುದು ತಿಳಿದು ಬಂದಿಲ್ಲ. ಅಫ್ ಕೋರ್ಸ್ ಸಾಕ್ಷಿ ಇಲ್ಲ.

ಘಟನೆ ದಿನ ರಾತ್ರಿ

ಘಟನೆ ದಿನ ರಾತ್ರಿ

ನೂಪುರ್ ತಲ್ವಾರ್ ಮಧ್ಯಾಹ್ನ 1.30ಕ್ಕೆ ಶಾಲೆಯಿಂದ ಆರುಷಿಯನ್ನು ಕರೆತಂದು ಮನೆಗೆ ಬಿಟ್ಟು, ಕ್ಲಿನಿಕ್ಗೆ ತೆರಳುತ್ತಾರೆ. ರಾತ್ರಿ 7.30ಕ್ಕೆ ಮನೆಗೆ ವಾಪಸಾಗುತ್ತಾರೆ
* ಸುಮಾರು 9.30ರ ವೇಳೆಗೆ ಚಾಲಕ ಉಮೇಶ್ ಜತೆಗೆ ರಾಜೇಶ್ ಮನೆಗೆ ಆಗಮಿಸುತ್ತಾರೆ
* ಮೇ.24ರಂದು ಆರುಷಿ ಹುಟ್ಟುಹಬ್ಬವಾದ್ದರಿಂದ ರಾಜೇಶ್ ತಲ್ವಾರ್ ಆನ್ಲೈನ್ ಮೂಲಕ ಡಿಜಿಟಲ್ ಕ್ಯಾಮೆರಾಗೆ ಆರ್ಡರ್ ಮಾಡಿದ್ದರು.
* ರಾತ್ರಿ ಊಟದ ಬಳಿಕ ನೂಪುರ್ ಆರುಷಿಯ ಕೋಣೆಗೆ ಹೋಗುತ್ತಾಳೆ. ಮಗಳಿಗೆ ಇಂದೇ ಕ್ಯಾಮೆರಾ ಗಿಫ್ಟ್ ಕೊಡೋಣ ಎಂದು ಪತಿಯಲ್ಲಿ ಹೇಳುತ್ತಾಳೆ. ಅದರಂತೆ ರಾಜೇಶ್ ಕ್ಯಾಮೆರಾ ಕೊಡುತ್ತಾರೆ. ಖುಷಿಪಟ್ಟ ಆರುಷಿ ಅದರಿಂದ ಅನೇಕ ಫೋಟೋ ಕ್ಲಿಕ್ಕಿಸುತ್ತಾಳೆ. ಆಗ ರಾತ್ರಿ 10.10 ಗಂಟೆ. ಬಳಿಕ..

ಇಂಟರ್ನೆಟ್ ರೂಟರ್

ಇಂಟರ್ನೆಟ್ ರೂಟರ್

ಬಳಿಕ ರಾಜೇಶ್ ಮತ್ತು ನೂಪುರ್ ತಮ್ಮ ಬೆಡ್ ರೂಮಿಗೆ ಹೋಗುತ್ತಾರೆ. ಸಮಯ 11 ಗಂಟೆ ಸುಮಾರಿಗೆ ಆರುಷಿಯ ಕೋಣೆಯಲ್ಲಿರುವ ಇಂಟರ್ನೆಟ್ ರೂಟರ್ ಅನ್ನು ಸ್ವಿಚ್ ಆನ್ ಮಾಡುವಂತೆ ರಾಜೇಶ್ ನೂಪುರ್ ಗೆ ಸೂಚಿಸುತ್ತಾರೆ. ರಾತ್ರಿ 12.08 ಗಂಟೆಯ ತನಕ ರಾಜೇಶ್ ಆನ್ ಲೈನ್ ನಲ್ಲಿರುತ್ತಾರೆ.

ಮಧ್ಯರಾತ್ರಿ ವೇಳೆಗೆ ಆರುಷಿಯ ಗೆಳೆಯ ಆಕೆಯ ಹೆತ್ತವರ ಕೋಣೆಯಲ್ಲಿರುವ ಲ್ಯಾಂಡ್ ಲೈನ್ ಕರೆ ಮಾಡುತ್ತಾನೆ. ಆದರೆ ಯಾರೂ ಕರೆ ಸ್ವೀಕರಿಸುವುದಿಲ್ಲ. ರಾತ್ರಿ 12.08 ರಿಂದ ಬೆಳಗ್ಗೆ 6 ರವರೆಗೆ ನಿಜವಾಗಿ ನಡೆದಿದ್ದೇನು ಎಂಬುದಕ್ಕೆ ನೇರ ಸಾಕ್ಷಿಗಳು ಯಾವುದೂ ಇಲ್ಲ.

ರಾತ್ರಿ ಇಡೀ ಒಬ್ಬ ಆರೋಪಿ ಎಚ್ಚರವಾಗಿದ್ದರು. ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಎಂಬುದಕ್ಕೆ ಪುರಾವೆ ಇಲ್ಲ. ಆದರೂ ಇದು ತೀರ್ಪುನ ಸಂದರ್ಭದಲ್ಲಿ ಪರಿಗಣಿಸಲಾಗಿದೆ.

ಮನೆಕೆಲಸದಾಕೆ ಹೇಳಿಕೆ

ಮನೆಕೆಲಸದಾಕೆ ಹೇಳಿಕೆ

ಘಟನೆ ದಿನ ರಾತ್ರಿ 9.30ರ ನಂತರ ಮನೆಗೆ ಬೇರೆ ಯಾರು ಬಂದಿಲ್ಲ ಎಂಬುದು ತಿಳಿದು ಬಂದಿದೆ. ರಾಜೇಶ್ ನಿವಾಸದ ಬಳಿ ಯಾರೂ ಅನುಮಾನಾಸ್ಪದವಾಗಿ ಸುಳಿದಾಡಿ, ಮನೆಗೆ ಅತಿಕ್ರಮ ಪ್ರವೇಶ ಮಾಡಿಲ್ಲ.

ಮೇ 16,2008ರಂದು ಮನೆಕೆಲಸದಾಕೆ ಬೆಳಗ್ಗೆ ಕಸ ಗುಡಿಸಲು ಬಂದಾಗ ಆರುಷಿ ಕೋಣೆ ಹೊರಗಿನಿಂದ ಲಾಕ್ ಆಗಿದೆ ಎಂಬಂತೆ ಬಿಂಬಿಸಲಾಗಿದೆ. ತಲ್ವಾರ್ ದಂಪತಿಗಳು ಕಣ್ಣೀರಿಟ್ಟಿರುವ ಬಗ್ಗೆ ಮನೆ ಕೆಲಸದಾಕೆ ಭಾರತಿ ಮಂಡಲ್ ಎಲ್ಲೂ ಹೇಳಿಕೆ ನೀಡಿಲ್ಲ.

ಮನೆಯಲ್ಲಿ ಏನು ನಡೆದಿಲ್ಲ ಹೇಮರಾಜ್ ಹಾಲು ತರಲು ಹೋಗಿದ್ದಾನೆ ಎಂದು ನೂಪುರ್ ಅವರು ಭಾರತಿಗೆ ಹೇಳಿದ್ದಾರೆ. ಸಾಕ್ಷ್ಯಾಧಾರ ಕಾಯಿದೆ ಸೆಕ್ಷನ್ 8 ರ ಪ್ರಕಾರ ಹೇಳಿಕೆ ದ್ವಂದ್ವತೆ, ಘಟನೆ ಬಗ್ಗೆ ಮುಚ್ಚಿಟ್ಟಿದ್ದು ಆರೋಪಿಗಳಿಗೆ ಶಿಕ್ಷೆ ಒದಗಿಸುವಂತೆ ಮಾಡಿದೆ.

ಕೊಲೆ ನಂತರದ ನಡೆದಿದ್ದು

ಕೊಲೆ ನಂತರದ ನಡೆದಿದ್ದು

ಹೇಮರಾಜ್ ಕೊಠಡಿಯ ಮೂಲಕ ತೆರಳಿ, ಮನೆಯ ಅತ್ಯಂತ ಹೊರಭಾಗದಲ್ಲಿರುವ ಗ್ರಿಲ್ ಡೋರ್ ಅನ್ನು ಒಳಗಿನಿಂದಲೇ ಲಾಕ್ ಮಾಡುತ್ತಾರೆ. ನಂತರ ಮಧ್ಯದಲ್ಲಿರುವ ಗ್ರಿಲ್ ಡೋರ್ ಅನ್ನು ಹೊರಗಿನಿಂದ ಲಾಕ್ ಮಾಡುತ್ತಾರೆ. ಇದನ್ನೆ ಭಾರತಿಗೆ ನೂಪುರ್ ಮರುದಿನ ಹೇಳಿದ್ದು..ಆರುಷಿಯ ಕೋಣೆಯ ಎದುರುಭಾಗದಲ್ಲಿನ ಅಟ್ಟದಲ್ಲಿ ಗಾಲ್ಫ್ ದಂಡವನ್ನು ಅಡಗಿಸಿಡಲಾಗುತ್ತದೆ.

ಬ್ಯಾಲೆಂಟೈನ್ ಬಾಟಲಿಯಲ್ಲಿದ್ದ ವಿಸ್ಕಿಯನ್ನು ರಾಜೇಶ್ ನೀರು ಬೆರೆಸದೇ ಕುಡಿಯುತ್ತಾನೆ. ಮುಂಜಾವಿನಲ್ಲೇ ಫ್ಲ್ಯಾಟ್ನಿಂದ ಹೊರಗೆ ಬಂದು, ಕತ್ತು ಕೊಯ್ದ ಸಲಕರಣೆ, ರಕ್ತಸಿಕ್ತ ವಸ್ತುಗಳನ್ನು ಕೊಂಡುಹೋಗಿ ನಾಶಪಡಿಸುತ್ತಾನೆ. ಮತ್ತೆ ಮನೆಗೆ ಬಂದು, ಕೆಲಸದಾಳು ಭಾರತಿ ಬರುವುದನ್ನೇ ಕಾಯುತ್ತಿರುತ್ತಾನೆ.

 ಹೇಮರಾಜ್ ಮೃತದೇಹವ

ಹೇಮರಾಜ್ ಮೃತದೇಹವ

ಹೆತ್ತವರಿಬ್ಬರೂ ಆರುಷಿಯ ನಾಡಿಬಡಿತ ಪರೀಕ್ಷಿಸುತ್ತಾರೆ. ಆಕೆ ಬಹುತೇಕ ಸತ್ತಿದ್ದಾಳೆ ಎಂಬುದು ಗೊತ್ತಾಗುತ್ತದೆ. ಹೇಮರಾಜ್ ಮೃತದೇಹವನ್ನು ಬೆಡ್ ಶೀಟಿನಲ್ಲಿ ಸುತ್ತಿ, ಮೆಟ್ಟಿಲಿನ ಮೂಲಕ ಟೆರೇಸ್ ಗೆ ಹೊತ್ತೊಯ್ಯುತ್ತಾರೆ. ಟೆರೇಸ್ ನ ಮೂಲೆಗೆ ಎಳೆದೊಯ್ದು, ಶಸ್ತ್ರಚಿಕಿತ್ಸೆಯ ವೇಳೆ ಬಳಸುವ ಸಣ್ಣ ಹರಿತವಾದ ಉಪಕರಣದಿಂದ ಹೇಮರಾಜ್ ಕುತ್ತಿಗೆಯನ್ನು ಕುಯ್ಯುತ್ತಾರೆ. ಹೇಮರಾಜ್ನ ಶವ ನೆರೆಮನೆಯವರಿಗೆ ಕಾಣದಂತೆ ಅಡ್ಡಕ್ಕೆ ಬೆಡ್ಶೀಟನ್ನು ಕರ್ಟನ್ನಂತೆ ಅಳವಡಿಸುತ್ತಾರೆ. ಒಳಗಿನಿಂದ ಟೆರೇಸ್ ಬಾಗಿಲನ್ನು ಲಾಕ್ ಮಾಡುತ್ತಾರೆ.

ಘಟನೆ ವೇಳೆ ಚೆಲ್ಲಾಪಿಲ್ಲಿಯಾದ ವಸ್ತುಗಳನ್ನೆಲ್ಲ ಮತ್ತೆ ಸರಿಯಾಗಿ ಜೋಡಿಸುತ್ತಾರೆ. ಆರುಷಿಯ ಕತ್ತನ್ನೂ ಅದೇ ಸಲಕರಣೆಯಿಂದ ಕುಯ್ಯುತ್ತಾರೆ. ಹೇಮರಾಜ್ ಮತ್ತು ಆರುಷಿಯನ್ನು ಒಂದೇ ರೀತಿ ಕೊಲೆ ಮಾಡಲಾಗಿದೆ ಎಂಬುದು ದೃಢವಾಗಬೇಕೆಂದು ಹೀಗೆ ಮಾಡುತ್ತಾರೆ.

ಯಾವ ಕುರುಹೂ ಉಳಿಯದಂತೆ

ಯಾವ ಕುರುಹೂ ಉಳಿಯದಂತೆ

ಆರುಷಿಯ ಗುಪ್ತಾಂಗಗಳನ್ನು ನೂಪುರ್ ಸ್ವಚ್ಛಗೊಳಿಸಿ, ಮತ್ತೆ ಬಟ್ಟೆಯನ್ನು ತೊಡಿಸುತ್ತಾರೆ. ಅಪರಾಧ ನಡೆದ ಸ್ಥಳದಲ್ಲಿ ಯಾವ ಕುರುಹೂ ಉಳಿಯದಂತೆ ಉಳಿದೆಲ್ಲ ವಸ್ತುಗಳನ್ನೂ ಸ್ವಚ್ಛಗೊಳಿಸಲಾಗುತ್ತದೆ. ಹೀಗಾಗಿ ಹೊರಗಿನವರು ಬಂದು ಆರುಷಿ ಬಟ್ಟೆ ಬದಲಾಯಿಸಲು ಸಾಧ್ಯವಿಲ್ಲ, ಕೊಲೆ ಮಾಡಿ ಓಡಿ ಹೋಗದೆ ಡ್ರಿಂಕ್ಸ್ ಕುಡಿಯುವುದು, ಹೇಮರಾಜ್ ಶವ ಮೇಲಕ್ಕೆ ಸಾಗಿಸುವುದು ಅಸಾಧ್ಯ ಎಂದು ಸಿಬಿಐ ವಾದ

ಟೆರೇಸ್ ಬಗ್ಗೆ ಕಥೆ

ಟೆರೇಸ್ ಬಗ್ಗೆ ಕಥೆ

ಸಿಆರ್ ಪಿಸಿ ಸೆಕ್ಷನ್ 313 ಅಡಿಯಲ್ಲಿ ದಾಖಲಾಗಿರುವ ಆರೋಪಿಗಳ ಹೇಳಿಕೆ ಅನ್ವಯ ಘಟನೆ ನಡೆದ ದಿನಕ್ಕೂ 8-10 ದಿನ ಮುಂಚಿತವಾಗಿ ಟೆರೇಸ್ ಮೇಲೆ ನೀರಿನ ಟ್ಯಾಂಕ್ ಕಾಯಲು ಹೇಮರಾಜ್ ಟೆರೇಸ್ ಗೆ ಬರುತ್ತಿದ್ದ. ಅವನ ಬಳಿ ಬಾಗಿಲ ಕೀ ಇರುತ್ತಿತ್ತು. ಹೀಗಾಗಿ ಆತನ ಶವ ಮೇಲೆ ಸಿಕ್ಕಿದೆ. ಆದರೆ, ಹೊರಗಿನವರು ಮನೆಯೊಳಗಿಂದ ಬಂದು ಬಾಗಿಲು ಹಾಕಲು ಹೇಗೆ ಸಾಧ್ಯ.

ಕೊಲೆಗೆ ಬಳಸಲಾದ ಆಯುಧ ರಾಜೇಶ್ ತಲ್ವಾರ್ ಗೆ ಸೇರಿದ್ದು ಎಂದು ಸಾಬೀತಾಗಿದೆ. ನೋಯ್ಡಾ ಗಾಲ್ಫ್ ಕ್ಲಬ್ ಸದಸ್ಯರಾಗಿದ್ದಾರೆ. ಡೆಂಟಿಸ್ಟ್ ಬಳಸುವ scalpel ಬೆರೆ ಕಡೆ ಸುಲಭಕ್ಕೆ ಸಿಗುವುದಿಲ್ಲ.

ಇಬ್ಬರೂ ಅಪರಾಧಿಗಳು

ಇಬ್ಬರೂ ಅಪರಾಧಿಗಳು

ಆರೋಪಿಗಳಿಬ್ಬರು ಸಮಾನ ಉದ್ದೇಶದಿಂದ ಈ ಕೃತ್ಯದಲ್ಲಿ ಭಾಗಿಯಾಗಿದ್ದು ಇಬ್ಬರೂ ಸಾಕ್ಷಿ ನಾಶ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ಆದರೆ, ಇದು ಪೂರ್ವನಿಯೋಜಿತ ಕೊಲೆಯಲ್ಲ, ಇದು ಅಮಾನುಷ ಹತ್ಯೆ ಅಲ್ಲ ಎಂದು ಸಿಬಿಐ ತಂಡವೇ ಹೇಳಿಕೆ ನೀಡಿದೆ.
ಘಟನೆ ನಡೆದ ದಿನದಂದು ರಾಜೇಶ್ ಇದ್ದ ಪರಿಸ್ಥಿತಿ ಕುಡಿದಿದ್ದರೆ ಇಲ್ಲವೇ ಎಂಬುದರ ಬಗ್ಗೆ ಸಾಕ್ಷಿ ಸಿಕ್ಕಿಲ್ಲ. ತಪ್ಪಿತಸ್ಥರಿಗೆ ಗಲ್ಲುಶಿಕ್ಷೆ ವಿಧಿಸಿ ಎಂದು ಮನವಿ ಸಲ್ಲಿಸಿರುವ ಸಿಬಿಐ ತನ್ನ ವಾದ ಪುಷ್ಟಿಕರಿಸಲು ಸೂಕ್ತ ಸಾಕ್ಷಿ ಒದಗಿಸುವಲ್ಲಿ ವಿಫಲವಾಗಿತ್ತು.

English summary
Of course there is no direct evidence but CBI has placed a "clinching wealth of circumstances" from which the guilt of Rajesh Talwar and his wife Nupur has been made out for murdering their daughter Aarushi and domestic help Hemraj, judge Shyam Lal said while outlining 26 reasons for sentencing the couple to rigorous life imprisonment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X