ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿಯನ್ನು ಅಣಕವಾಡಿದ ಪತ್ರಕರ್ತೆಯನ್ನು ಜಾಲಾಡಿಸಿದ ಟ್ವಿಟ್ಟಿಗರು

|
Google Oneindia Kannada News

ಸಾಮಾಜಿಕ ಜಾಲತಾಣದ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆಯೇ, ಪರವಿರೋಧ ಚರ್ಚೆಗಳು ಯಥೇಚ್ಚವಾಗಿ ಹರಿದಾಡುತ್ತಿರುತ್ತವೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಅಣಕವಾಡಲು ಹೋದ, ಪತ್ರಕರ್ತೆಯೊಬ್ಬರನ್ನು ಟ್ವಿಟ್ಟಿಗರು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ಮೋದಿ ಸರಿಮಾಡಿದ್ದರೂ ತಪ್ಪು, ತಪ್ಪು ಮಾಡಿದ್ದರೂ ಸರಿ ಎಂದು ಸಮರ್ಥಿಸಿಕೊಳ್ಳುವ ಜನಸಾಮಾನ್ಯರ ಹಾಗೇ, ಮಾಧ್ಯಮ ಲೋಕವೂ ಡಿವೈಡ್ ಆಗಿರುವುದು ದುರಂತ. ಬಹುಷಃ ಸಾಂವಿಧಾನಿಕವಾಗಿ ಆಯ್ಕೆಯಾದ ಪ್ರಧಾನಿಯೊಬ್ಬರನ್ನು ಈ ಮಟ್ಟಿಗೆ ಟ್ರೋಲ್ ಮಾಡುವುದು ಅಥವಾ ಪರವಾಗಿ ನಿಲ್ಲುವುದು ಇತ್ತೀಚಿನ ದಿನಗಳಲ್ಲಿ ತೀರಾ ಹೆಚ್ಚೆಂದು ಹೇಳಬಹುದು.

ಅಜಾದ್ ಹಿಂದ್ ಸರ್ಕಾರದ ವಜ್ರ ಮಹೋತ್ಸವದಲ್ಲಿ ಮೋದಿ ಭಾಷಣ ಅಜಾದ್ ಹಿಂದ್ ಸರ್ಕಾರದ ವಜ್ರ ಮಹೋತ್ಸವದಲ್ಲಿ ಮೋದಿ ಭಾಷಣ

ಕಳೆದ ಭಾನುವಾರ (ಅ 21) ದೆಹಲಿಯ ಕೆಂಪುಕೋಟೆಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಆಜಾದ್ ಹಿಂದ್ ಸರಕಾರ ಸ್ಥಾಪನೆಯ 75ನೇ ವರ್ಷಾಚರಣೆಯ ಸಂಬಂಧ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಧ್ವಜಾರೋಹಣ ನಡೆಸಿದ ಪ್ರಧಾನಿ ಮೋದಿ, ನೆಹರೂ ಮತ್ತು ಗಾಂಧಿ ಕುಟುಂಬದ ವಿರುದ್ದ ವಾಗ್ದಾಳಿ ನಡೆಸಿದ್ದರು.

ನೇತಾಜಿಯವರ ಇಂಡಿಯನ್ ನ್ಯಾಷನಲ್ ಆರ್ಮಿಯ ಹಿರಿಯ ಸೇನಾನಿಯೊಬ್ಬರು 'ನೇತಾಜಿ ಟೋಪಿ'ಯನ್ನು (ಬೋಸ್ ಧರಿಸುತ್ತಿದ್ದ ಟೋಪಿ) ಮೋದಿಗೆ ವೇದಿಕೆಯಲ್ಲಿ ತೊಡಿಸಿದ್ದರು. ಕಾರ್ಯಕ್ರಮದುದ್ದಕ್ಕೂ ಮೋದಿ ಈ ಟೋಪಿಯನ್ನು ಧರಿಸಿದ್ದರು.

ಡಿಜಿಟಲೀಕರಣ: ಮೋದಿ ಸರ್ಕಾರದ ಬಹುದೊಡ್ಡ ಕೊಡುಗೆಡಿಜಿಟಲೀಕರಣ: ಮೋದಿ ಸರ್ಕಾರದ ಬಹುದೊಡ್ಡ ಕೊಡುಗೆ

ಇದಕ್ಕೆ ಎನ್ಡಿಟಿವಿಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ, ಪತ್ರಕರ್ತೆ ಮತ್ತು ಅಂಕಣಕಾರ್ತಿ ಶೋಭಾ ಡೇ, "ದಿಗ್ಗಜರ ಟ್ರೇಡ್ ಮಾರ್ಕ್ ಟೋಪಿಯನ್ನು ಧರಿಸಿದ ಕೂಡಲೇ, ನೀವು ನೇತಾಜಿ ಸುಭಾಷ್ ಚಂದ್ರ ಬೋಸ್ ಆಗುವುದಿಲ್ಲ" ಎಂದು ಟ್ವೀಟ್ ಮೂಲಕ ಅಣಕವಾಡಿದ್ದರು. ಅದಕ್ಕೆ ಟ್ವಿಟ್ಟಿಗರು, ಶೋಭಾ ಡೇಯನ್ನು ತಮ್ಮದೇ ರೀತಿಯಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಕೆಲವೊಂದು ಸ್ಯಾಂಪಲ್ ಹೀಗಿದೆ...

ಈಶಾನ್ಯ ಮತ್ತು ಪೂರ್ವ ಭಾರತದ ಅಭಿವೃದ್ದಿಯತ್ತ ಹೆಚ್ಚಿನ ಗಮನ

ಈಶಾನ್ಯ ಮತ್ತು ಪೂರ್ವ ಭಾರತದ ಅಭಿವೃದ್ದಿಯತ್ತ ಹೆಚ್ಚಿನ ಗಮನ

ನಮ್ಮ ಸರಕಾರ ಈಶಾನ್ಯ ಮತ್ತು ಪೂರ್ವ ಭಾರತದ ಅಭಿವೃದ್ದಿಯತ್ತ ಹೆಚ್ಚಿನ ಗಮನ ಹರಿಸುತ್ತಿದ್ದೇವೆ. ನೇತಾಜಿ ಕೂಡಾ ಆ ಭಾಗ ಅಭಿವೃದ್ದಿ ಹೊಂದಬೇಕು ಎನ್ನುವ ಕನಸನ್ನು ಕಂಡಿದ್ದರು. ಒಂದು ಕುಟುಂಬವನ್ನು ಮಾತ್ರ ವೈಭವೀಕರಿಸುವುದು ಸರಿಯಲ್ಲ. ಸರ್ದಾರ್ ಪಟೇಲ್, ಅಂಬೇಡ್ಕರ್, ನೇತಾಜಿಯವರಂತಹ ಸೇನಾನಿಗಳು ದೇಶಕ್ಕೆ ನೀಡಿದ ಕೊಡುಗೆ ಅಪಾರ ಎಂದು ಆ ಕಾರ್ಯಕ್ರಮದಲ್ಲಿ ಮೋದಿ ಹೇಳಿದ್ದರು.

ಪ್ರಧಾನಿ ಮೋದಿ ಹೆಸರನ್ನು ಉಲ್ಲೇಖಿಸದೇ ಲೇವಡಿ

ಪ್ರಧಾನಿ ಮೋದಿ ಹೆಸರನ್ನು ಉಲ್ಲೇಖಿಸದೇ ಲೇವಡಿ

ನೇತಾಜಿಯ ಟೋಪಿಯನ್ನು ಧರಿಸಿದರೆ, ನೀವೇನೂ ನೇತಾಜಿ ಆಗುವುದಿಲ್ಲ ಎಂದು ಪತ್ರಕರ್ತೆ ಶೋಭಾ ಡೇ, ಪ್ರಧಾನಿ ಮೋದಿ ಹೆಸರನ್ನು ಉಲ್ಲೇಖಿಸದೇ ಲೇವಡಿ ಮಾಡಿದ್ದರು. ಅದಕ್ಕೆ ಒಬ್ಬರ ಉತ್ತರ ಹೀಗಿದೆ, ಟೋಪಿ ಇರಲಿ ಬಿಡಲಿ, ಮೋದಿ ಜನರಿಂದ ಆಯ್ಕೆಯಾದ ಜನಪ್ರಿಯ ಪ್ರಧಾನಿ. ಈ ರೀತಿಯ ನಿಮ್ಮ ಟ್ವೀಟ್ ನಿಂದ ಮಹಿಳೆ ಎನ್ನುವ ಗೌರವವನ್ನು ನೀವು ಕಳೆದುಕೊಳ್ಳುತ್ತೀರಾ ಎನ್ನುವ ಟ್ವೀಟ್.

ಮೋದಿ ಮೌನ 'ಚುಡಾಯಿಸಿ' ಕವನ ಬರೆದ ರಾಹುಲ್ ಗಾಂಧಿ!ಮೋದಿ ಮೌನ 'ಚುಡಾಯಿಸಿ' ಕವನ ಬರೆದ ರಾಹುಲ್ ಗಾಂಧಿ!

ರಾಹುಲ್ ಗಾಂಧಿ ಬಾಪು ಆಗುವುದಕ್ಕೆ ಆಗುವುದಿಲ್ಲ

ರಾಹುಲ್ ಗಾಂಧಿ ಬಾಪು ಆಗುವುದಕ್ಕೆ ಆಗುವುದಿಲ್ಲ

ಗಾಂಧಿ ಹೆಸರನ್ನು ಕಳ್ಳತನ ಮಾಡಿದ ಕೂಡಲೇ ಯಾರೂ ಗಾಂಧಿಯಾಗುವುದಿಲ್ಲ. ಹಾಗೆಯೇ ರಾಹುಲ್ ಗಾಂಧಿ ಬಾಪು ಆಗುವುದಕ್ಕೆ ಆಗುವುದಿಲ್ಲ. ಪಪ್ಪು ಯಾವುತ್ತೂ ಪಾಸ್ ಆಗುವುದಿಲ್ಲ. ನಾವು ಯಾವತ್ತೂ (ರಾಹುಲ್ ಗಾಂಧಿ) ಅವರನ್ನು ಪಾಸ್ ಆಗಲು ಬಿಡುವುದಿಲ್ಲ ಎನ್ನುವ ಟ್ವೀಟ್.

ಕಚಡಾ ಲೇಖನವನ್ನು ಬರೆದರೆ ನೀವೇನೂ ಪತ್ರಕರ್ತರಾಗುವುದಿಲ್ಲ

ಕಚಡಾ ಲೇಖನವನ್ನು ಬರೆದರೆ ನೀವೇನೂ ಪತ್ರಕರ್ತರಾಗುವುದಿಲ್ಲ

ಮುಂಬೈನಲ್ಲಿ ವಾಸವಾಗಿ, ಮೂರನೇ ಪೇಜ್ ನಲ್ಲಿ ಕಾಣಿಸಿಕೊಂಡು, ಸೋಶಿಯಲ್ ಪಾರ್ಟಿಯಲ್ಲಿ ಕಾಣಿಸಿಕೊಂಡು, ಟಿವಿ ಚಾನೆಲ್ ನಲ್ಲಿ ಕಾಣಿಸಿಕೊಂಡು, ಅಸಂಬದ್ದ ಟ್ವೀಟ್ ಮಾಡಿ,ಕಚಡಾ ಲೇಖನವನ್ನು ಬರೆದರೆ ನೀವೇನೂ ಪತ್ರಕರ್ತರಾಗುವುದಿಲ್ಲ. ನೀವು ದೇಶಕ್ಕೆ ದೊಡ್ಡ ಹೊರೆ ಎನ್ನುವ ಟ್ವೀಟ್.

ಟ್ವಿಟ್ಟರ್‌ನಲ್ಲಿ ಪರಸ್ಪರರ ಮೇಲೆ ಯುದ್ಧ ಸಾರಿದ ಕಾಂಗ್ರೆಸ್-ಬಿಜೆಪಿ ಟ್ವಿಟ್ಟರ್‌ನಲ್ಲಿ ಪರಸ್ಪರರ ಮೇಲೆ ಯುದ್ಧ ಸಾರಿದ ಕಾಂಗ್ರೆಸ್-ಬಿಜೆಪಿ

ಯಾವ ಮುಖಂಡರಿಗೂ ನೇತಾಜಿ ಟೋಪಿ ಹಾಕುವ ತಾಕತ್ ಇಲ್ಲ

ಯಾವ ಮುಖಂಡರಿಗೂ ನೇತಾಜಿ ಟೋಪಿ ಹಾಕುವ ತಾಕತ್ ಇಲ್ಲ

ಕಾಂಗೆಸ್ಸಿನ ಯಾವ ಮುಖಂಡರಿಗೂ ನೇತಾಜಿ ಟೋಪಿ ಹಾಕುವ ಧೈರ್ಯವಿಲ್ಲ, ಯಾಕೆಂದರೆ ಅವರೆಲ್ಲಾ ಗಾಂಧಿ ಕುಟುಂಬದ ಜೀತದಾಳುಗಳು. ಶೋಭಾ ಡೇ ಅವರ ಟ್ವೀಟಿಗೆ ಸುಮಾರು ಒಂದು ಸಾವಿರಕ್ಕೂ ಹೆಚ್ಚು ರಿಪ್ಲೈ ಬಂದಿದೆ. ಈ ಟ್ವೀಟ್ 550ಕ್ಕೂ ಹೆಚ್ಚು ರಿಟ್ವೀಟ್ ಆಗಿದೆ.

English summary
Journalist Shobha De Tweet targeting Prime Minister NarendraModi, twitterite reply. Shobha tweeted, " Wearing an icon's trademark 'topi' does not make you a Netaji".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X