ಪತ್ರಕರ್ತ ರವೀಶ್ ಕುಮಾರ್‌ಗೆ ರಾಮೊನ್ ಮ್ಯಾಗ್ಸೆಸ್ಸೆ ಪ್ರಶಸ್ತಿ
ನವದೆಹಲಿ, ಆಗಸ್ಟ್ 02: 'ಏಷ್ಯಾದ ನೊಬೆಲ್' ಎಂದೇ ಕರೆಯಲ್ಪಡುವ ರಾಮೊನ್ ಮ್ಯಾಗ್ಸೆಸ್ಸೆ ಪ್ರಶಸ್ತಿಗೆ ಭಾರತದ ಪತ್ರಕರ್ತ, ಎನ್ಡಿಟಿವಿಯ ರವೀಶ್ ಕುಮಾರ್ ಆಯ್ಕೆಯಾಗಿದ್ದಾರೆ.
ರವೀಶ್ ಕುಮಾರ್ ಜೊತೆಗೆ ಇನ್ನು ನಾಲ್ವರು ಸಾಧಕರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ. ಮ್ಯಾನ್ಮಾರ್ ದೇಶದ ಕೊ ಸ್ವೇ ವಿನ್, ಥೈಲ್ಯಾಂಡಿನ ಅಂಖನಾ ನೀಲಪೈಜಿತ್, ಫಿಲಿಫೈನ್ಸಿನ ರೇಮುಂಡು ಕಾಯಾಬ್ಯಾಬ್, ದಕ್ಷಿಣ ಕೊರಿಯಾದ ಕಿಮ್ ಜೊಂಗ್ ಕಿ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
"ಸಿದ್ಧಾಂತವುಳ್ಳ ಪತ್ರಿಕೋದ್ಯಮ, ವೃತ್ತಿಪರತೆ, ನಿಷ್ಪಕ್ಷಪಾತವಾದ ನಿರೂಪಣೆ ಮುಂತಾದ ಅಂಶಗಳನ್ನು ಪರಿಗಣಿಸಿ ರವೀಶ್ ರನ್ನು ಆಯ್ಕೆ ಮಾಡಲಾಗಿದೆ. ಪ್ರೈಂ ಟೈಮಿನಲ್ಲಿ ಜನ ಸಾಮಾನ್ಯರ ನೈಜ ಬದುಕಿನ ಚಿತ್ರಣವನ್ನು ಮುಂದಿಟ್ಟು ದನಿಯಾಗಿದ್ದಾರೆ. ಜನ ಸಾಮಾನ್ಯರಿಗೆ ಮಾಧ್ಯಮದ ಮೂಲಕ ಆಗಬಹುದಾದ ನೆರವು ಇದೇ ಆಗಿದೆ" ಎಂದು ಮ್ಯಾಗ್ಸೆಸೆ ಸಂಸ್ಥೆ ಹೇಳಿದೆ.

1996ರಿಂದ ನ್ಯೂಡೆಲ್ಲಿ ಟೆಲಿವಿಷನ್ ಜೊತೆ ಕಾರ್ಯ ನಿರ್ವಹಿಸುತ್ತಿರುವ ರವೀಶ್ ಅವರು ಬಿಹಾರದ ಜಿತ್ವಾರ್ ಪುರ್ ಮೂಲದವರು. ದೆಹಲಿ ವಿಶ್ವವಿದ್ಯಾಲಯದಿಂದ ಇತಿಹಾಸ, ಸಾರ್ವಜನಿಕ ವ್ಯವಹಾರ ವಿಷಯದಲ್ಲಿ ಪದವಿ ಪಡೆದಿದ್ದಾರೆ.
ರಾಮೊನ್ ಮ್ಯಾಗ್ಸೆಸ್ಸೆ ಪ್ರಶಸ್ತಿ: 1957ರಲ್ಲಿ ನ್ಯೂಯಾರ್ಕ್ ನಗರದಲ್ಲಿರುವ ರಾಕ್ಫೆಲ್ಲರ್ ಬ್ರದರ್ಸ್ ಫಂಡ್ ಸ್ಥಾಪಿಸಿದ ಪ್ರಶಸ್ತಿ ಇದಾಗಿದೆ. ಫಿಲಿಪ್ಪೀನ್ಸ್ ದೇಶದ ಸರಕಾರದ ಅನುಮತಿಯೊಂದಿಗೆ ಈ ಪ್ರಶಸ್ತಿಗೆ ರಾಮೋನ್ ಮ್ಯಾಗ್ಸೆಸ್ಸೆ ಇವರ ಹೆಸರನ್ನಿಡಲಾಗಿದೆ. ಫಿಲಿಪೈನ್ಸ್ ದೇಶದ ಹಿಂದಿನ ರಾಷ್ಟ್ರಾಧ್ಯಕ್ಷರಾಗಿದ್ದ ಮ್ಯಾಗ್ಸೆಸ್ಸೆಯವರ ಗಣತಂತ್ರ ವ್ಯವಸ್ಥೆಯಲ್ಲಿನ ಕಟ್ಟುನಿಟ್ಟಿನ ಸರ್ಕಾರಿ ಆಡಳಿತ, ಹೆದರಿಕೆಯಿಲ್ಲದ ಸಾಮಾನ್ಯ ಜನರ ಸೇವೆ, ಧೇಯೋದ್ದೇಶಿತ ಯೋಜನೆಗಳು ಹೇಗೆ ಜನರಿಗೆ ಉದಾಹರಣೆಯಾಗಬಲ್ಲದು ಎಂಬುದನ್ನು ಎತ್ತಿ ಹಿಡಿಯುವ ಉದ್ದೇಶ ಹೊಂದಲಾಗಿದೆ.
These are the five recipients of Asia’s premier prize and highest honor, the 2019 Ramon Magsaysay Awardees. #RamonMagsaysayAward pic.twitter.com/HrLG1qVt6L
— Ramon Magsaysay Award (@MagsaysayAward) August 2, 2019
ಸರ್ಕಾರಿ ಸೇವೆ, ಜನ ಸೇವೆ, ಸಂಘೀಯ ನಾಯಕತ್ವ, ಪತ್ರಿಕೋದ್ಯಮ, ಸಾಹಿತ್ಯ ಮತ್ತು ಕಲೆ, ಶಾಂತಿ ಮತ್ತು ಅಂತಾರಾಷ್ಟ್ರೀಯ ತಿಳುವಳಿಕೆ, ಬೆಳೆಯುತ್ತಿರುವ ನಾಯಕತ್ವ ಹೀಗೆ ವಿವಿಧ ರಂಗಗಳ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತದೆ.
-
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ 3 ಜಾಗ ನಿಗದಿ: ಡಿಸಿಎಂ ಡಿ.ಕೆ ಶಿವಕುಮಾರ್ ಅಪ್ಡೇಟ್ಸ್












Click it and Unblock the Notifications