Joshimath land collapse: ಕಳೆದ 6 ವಾರಗಳಲ್ಲಿ 800ಕ್ಕೂ ಹೆಚ್ಚು ಕಟ್ಟಡಗಳು ಬಿರುಕು
ಜೋಶಿಮಠದ ನಿವಾಸಿಗಳಲ್ಲಿ ದಿನದಿಂದ ದಿನಕ್ಕೆ ಜೀವದ ಆತಂಕ ಹೆಚ್ಚಾಗುತ್ತಲೇ ಇದೆ. ಜೋಶಿಮಠದ ದುರಂತ ಸುತ್ತಲ ಪ್ರದೇಶದಲ್ಲಿ ವಾಸಿಸುವ ಜನರಲ್ಲೂ ಬೆದರಿಕೆಯನ್ನೊಡ್ಡಿದೆ. ಯಾಕೆಂದರೆ ಡಿಸೆಂಬರ್ ಮೊದಲ ವಾರದಲ್ಲಿ ಸುಮಾರು 150 ಮನೆಗಳು ಜೋಶಿಮಠದಲ್ಲಿ ಬಿರುಕು ಬಿಟ್ಟಿದ್ದವು. ಆದರೀಗ ಬಿರುಕು ಬಿಟ್ಟಿರುವ ಮನೆಗಳ ಸಂಖ್ಯೆ 849ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದಾಗಿ ನಿತ್ಯ ಜೀವವನ್ನು ಅಂಗೈಯಲ್ಲಿಡಿದುಕೊಂಡು ಜನ ಜೀವನ ದೂಡುವಂತಾಗಿದೆ. ತಮ್ಮ ಕನಸಿನ ಮನೆಗಳು ನೆಲಕ್ಕಚ್ಚುತ್ತಿರುವುದನ್ನು ಕಂಡು ಜನ ಮರುಕ ವ್ಯಕ್ತಪಡಿಸುತ್ತಿದ್ದಾರೆ. ಈ ದುರಂತಕ್ಕೆ ಸರ್ಕಾರದ ಯೋಜನೆಗಳೇ ಕಾರಣ ಎಂದು ದೂರುತ್ತಿದ್ದಾರೆ.
ಅಕ್ಟೋಬರ್ 2021 ರಲ್ಲಿ ಜೋಶಿಮಠದ ಗಾಂಧಿ ನಗರ ಪ್ರದೇಶದಲ್ಲಿ 14ರಿಂದ 15 ಮನೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡ ಮೊದಲ ಪ್ರಕರಣ ವರದಿಯಾಗಿತ್ತು. ಜನವರಿ 4, 2023 ರಂದು, ಪರಿಸ್ಥಿತಿ ಹದಗೆಟ್ಟಾಗ ಚಮೋಲಿ ಜಿಲ್ಲಾಡಳಿತ ಜೋಶಿಮಠ ಬಿಕ್ಕಟ್ಟಿನ ಕುರಿತು ಮೊದಲ ಬಾರಿಗೆ ಬುಲೆಟಿನ್ ಅನ್ನು ಬಿಡುಗಡೆ ಮಾಡಿತು. ಅದರ ಪ್ರಕಾರ, ಬಿರುಕುಗಳನ್ನು ಹೊಂದಿರುವ ಮನೆಗಳ ಸಂಖ್ಯೆ 561 ರಷ್ಟಿದೆ.

800ಕ್ಕೂ ಹೆಚ್ಚು ಕಟ್ಟಡಗಳು ಬಿರುಕು
ಆದರೀಗ ಮನೆ ಹೋಟೆಲ್ ಸೇರಿದಂತೆ 800ಕ್ಕೂ ಹೆಚ್ಚು ಕಟ್ಟಡಗಳು ಬಿರುಕು ಬಿಟ್ಟಿವೆ. ಮಂಗಳವಾರದ ಇತ್ತೀಚಿನ ಬುಲೆಟಿನ್ ಪ್ರಕಾರ, ಅಸುರಕ್ಷಿತ ವಲಯದಲ್ಲಿರುವ ಮನೆಗಳ ಸಂಖ್ಯೆ 167 ಇವೆ. ಈ ಸಂಖ್ಯೆ ಜನವರಿ 10 ರಂದು 86 ಆಗಿತ್ತು.
ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಸಿಬಿಆರ್‌ಐ) ಅಸುರಕ್ಷಿತವೆಂದು ಘೋಷಿಸಿದ ನಂತರ ಜನವರಿ 10 ರಂದು ಜೋಶಿಮಠದಲ್ಲಿ ಮಲಾರಿ ಇನ್ ಮತ್ತು ಮೌಂಟ್ ವ್ಯೂ ಎಂಬ ಅಸುರಕ್ಷಿತ ಘೋಷಿತ ಹೋಟೆಲ್‌ಗಳನ್ನು ನೆಲಸಮಗೊಳಿಸಲು ಅಧಿಕಾರಿಗಳು ಪ್ರಯತ್ನಿಸಿದರು. ಆದರೆ ಪರಿಹಾರ ನೀಡದೇ ಯಾವುದೇ ಕಟ್ಟಡಗಳ ತೆರವಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಸ್ಥಳೀಯರು ಪಟ್ಟು ಹಿಡಿದಿದ್ದಾರೆ. ಜೊತೆಗೆ ಸರ್ಕಾರದ ಯೋಜನೆಗಳನ್ನು ತಕ್ಷಣ ನಿಲ್ಲಿಸುವಂತೆ ಒತ್ತಾಯ ಹೇರಿದ್ದಾರೆ.
ಈ ಪ್ರದೇಶದಲ್ಲಿ ರಾಷ್ಟ್ರೀಯ ಥರ್ಮಲ್ ಪವರ್ ಕಾರ್ಪೊರೇಷನ್ (ಎನ್‌ಟಿಪಿಸಿ) ಯೋಜನೆಗಳನ್ನು ಮುಚ್ಚಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಇದು ಅವರ ಪ್ರಕಾರ ಭೂಮಿ ಕುಸಿತಕ್ಕೆ ಕಾರಣವಾಗಿದೆ. ಹೀಗಾಗಿ ಜೋಶಿಮಠ ಬಚಾವೋ ಸಂಘರ್ಷ ಸಮಿತಿ (ಜೆಬಿಎಸ್‌ಎಸ್) ಕೂಡ ಗಣರಾಜ್ಯೋತ್ಸವದಂದು (ಜನವರಿ 26) ಪಟ್ಟಣದಾದ್ಯಂತ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದೆ.

ಭೂಮಿ ಕುಸಿತಕ್ಕೆ ಬಿರುಕು ಬಿಟ್ಟ ಮನೆಗಳು
ಅಧಿಕಾರಿಗಳ ಪ್ರಕಾರ, ಭೂಮಿ ಕುಸಿತದಿಂದಾಗಿ ಇನ್ನೂ ಎರಡು ಹೋಟೆಲ್‌ಗಳು ಒಂದಕ್ಕೊಂದು ವಾಲಲು ಪ್ರಾರಂಭಿಸಿವೆ. ಹೋಟೆಲ್ ಕಾಮೆಟ್ ಮತ್ತು ಸ್ನೋ ಕ್ರೆಸ್ಟ್ ಹೋಟೆಲ್‌ಗಳಲ್ಲಿ ಬಿರುಕುಗಳು ವಿಸ್ತರಿಸಿವೆ.
ವಾರ್ಡ್ ವಾರು ರವಿಗ್ರಾಮದಲ್ಲಿ ಗರಿಷ್ಠ 161 ಮನೆಗಳು ಬಿರುಕು ಬಿಟ್ಟಿದ್ದು, ಗಾಂಧಿನಗರದಲ್ಲಿ 154 ಮನೆಗಳು ಬಿರುಕು ಬಿಟ್ಟಿವೆ. ಸಿಂಧರ್, ಗಾಂಧಿನಗರ, ಮನೋಹರ್ ಬಾಗ್ ಮತ್ತು ಸುನಿಲ್ ವಾರ್ಡ್‌ಗಳಲ್ಲಿ ಹೆಚ್ಚಿನ ಮನೆಗಳು ಅಪಾಯಕಾರಿ ವಲಯಕ್ಕೆ ಸೇರಿವೆ. ಹೀಗಾಗಿ ಹೆಚ್ಚು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರದ ವೇಳೆಗೆ 250 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಜನವರಿ 4 ರಂದು ಪರಿಹಾರ ಶಿಬಿರಗಳಿಗೆ ಸ್ಥಳಾಂತರಗೊಂಡ ಕುಟುಂಬಗಳ ಸಂಖ್ಯೆ ಕೇವಲ 29 ಆಗಿದೆ. ಅಧಿಕಾರಿಗಳ ಪ್ರಕಾರ, ವಸತಿ ಗೃಹಗಳು ಮತ್ತು ಹೋಟೆಲ್‌ಗಳು ಮಾತ್ರವಲ್ಲದೆ ಸರ್ಕಾರಿ ಸ್ವಾಮ್ಯದ ಕಟ್ಟಡಗಳು ಸಹ ಭೂಮಿ ಕುಸಿತಕ್ಕೆ ಬಿರುಕು ಬಿಟ್ಟಿವೆ.

2,190 ಸಂತ್ರಸ್ತರಿಗೆ ವಸತಿ
ಚಮೋಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಹಿಮಾಂಶು ಖುರಾನಾ ಮಾತನಾಡಿ, ಜೋಶಿಮಠ್ ಪಟ್ಟಣದ ವ್ಯಾಪ್ತಿಯ ನಿವಾಸಿಗಳಿಗೆ ತಾತ್ಕಾಲಿಕ ಪರಿಹಾರ ಶಿಬಿರಗಳಾಗಿ 83 ಸ್ಥಳಗಳಲ್ಲಿ 615 ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ 2,190 ಸಂತ್ರಸ್ತರಿಗೆ ವಸತಿ ಕಲ್ಪಿಸಲಾಗಿದೆ ಮತ್ತು 20 ಕಟ್ಟಡಗಳ 491 ಕೊಠಡಿಗಳನ್ನು ತಾತ್ಕಾಲಿಕ ಪರಿಹಾರ ಶಿಬಿರಗಳಾಗಿ ಆಯ್ಕೆ ಮಾಡಲಾಗಿದೆ. 2,205 ಜನರಿಗೆ ವಸತಿ ಕಲ್ಪಿಸಬಹುದಾದ ಪುರಸಭೆಯ ಪ್ರದೇಶದ ಹೊರಗೆ ವ್ಯವಸ್ಥೆ ಮಾಡಲಾಗಿದೆ.
"ಜಿಲ್ಲಾಡಳಿತ ತಂಡಗಳು ನನ್ನ ಹೋಟೆಲ್ ಮಲಾರಿ ಇನ್‌ನ ಮೇಲಿನ ಮಹಡಿಯನ್ನು ಭಾನುವಾರ ಕೆಡವಿದ್ದಾರೆ ಮತ್ತು ಅವರು ಮಂಗಳವಾರ ಇತರ ಮಹಡಿಗಳನ್ನು ಕೆಡವಲು ಕೆಲಸ ಮಾಡುತ್ತಿದ್ದಾರೆ" ಎಂದು ಹೋಟೆಲ್ ಮಾಲೀಕ ಠಾಕೂರ್ ಸಿಂಗ್ ರಾಣಾ ಹೇಳಿದ್ದಾರೆ.
ಅಧಿಕಾರಿಗಳ ಪ್ರಕಾರ, ಚಮೋಲಿ ಜಿಲ್ಲಾಡಳಿತವು ಸಂತ್ರಸ್ತ 396 ಕುಟುಂಬಗಳಿಗೆ ₹ 3.77 ಕೋಟಿ ಪರಿಹಾರ ಪ್ಯಾಕೇಜ್ ಅನ್ನು ವಿತರಿಸಿದೆ. ಪರಿಹಾರ ಕ್ರಮಗಳ ಅಡಿಯಲ್ಲಿ, 284 ಆಹಾರ ಕಿಟ್‌ಗಳು, 360 ಹೊದಿಕೆಗಳು ಮತ್ತು 842 ಲೀಟರ್ ಹಾಲು, 55 ಹೀಟರ್ / ಬ್ಲೋವರ್‌ಗಳು, 36 ದೈನಂದಿನ ಬಳಕೆಯ ಕಿಟ್‌ಗಳು ಮತ್ತು 642 ಇತರ ವಸ್ತುಗಳನ್ನು ಸಂತ್ರಸ್ತ ಜನರಿಗೆ ಪರಿಹಾರ ಸಾಮಗ್ರಿಯಾಗಿ ವಿತರಿಸಲಾಗಿದೆ.

'ಎನ್‌ಟಿಪಿಸಿ ಗೋ ಬ್ಯಾಕ್'
ಹಲವಾರು ನಿವಾಸಿಗಳು ಮತ್ತು ಕಾರ್ಯಕರ್ತರು ರಾಷ್ಟ್ರೀಯ ಥರ್ಮಲ್ ಪವರ್ ಕಾರ್ಪೊರೇಷನ್ ಪ್ರದೇಶದಲ್ಲಿ ಸರ್ಕಾರ ತನ್ನ ಚಟುವಟಿಕೆಗಳನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿದ್ದಾರೆ. ಈ ಯೋಜನೆಯು ಪ್ರದೇಶದಲ್ಲಿ ಕುಸಿತಕ್ಕೆ ಕಾರಣವಾಗಿದೆ ಎಂದು ಸ್ತಳೀಯರು ಆರೋಪಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಉತ್ತರಾಖಂಡದ ಚಮೋಲಿ ಜಿಲ್ಲೆಯ ಪ್ರಮುಖ ಮಾರುಕಟ್ಟೆಗಳಲ್ಲಿನ ಹಲವಾರು ಸಣ್ಣ ಮತ್ತು ದೊಡ್ಡ ಅಂಗಡಿಗಳಿಂದ ವಸತಿ ಪ್ರಾಪರ್ಟಿಗಳು, ವಾಹನಗಳು ಮತ್ತು ಜಾಹೀರಾತು ಫಲಕಗಳವರೆಗೆ "ಎನ್‌ಟಿಪಿಸಿ ಗೋ ಬ್ಯಾಕ್" ಎಂಬ ಘೋಷಣೆಯೊಂದಿಗೆ ಪೋಸ್ಟರ್‌ಗಳು ಪಟ್ಟಣದಾದ್ಯಂತ ಅಂಟಿಸಲಾಗಿದೆ. 520 ಮೆಗಾವ್ಯಾಟ್ ತಪೋವನ ವಿಷ್ಣುಗಢ ಜಲವಿದ್ಯುತ್ ಯೋಜನೆಗಾಗಿ 12 ಕಿ.ಮೀ ಸುರಂಗವನ್ನು ಅಗೆಯುವುದು ಈ ಪ್ರದೇಶದಲ್ಲಿ ಕುಸಿತವನ್ನು ಉಲ್ಬಣಗೊಳಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications