ಕುಟುಂಬಕ್ಕೊಂದು ಉದ್ಯೋಗ ಕಡ್ಡಾಯ- ಏನಿದು ಯೋಗಿ ಸರ್ಕಾರದ ಪ್ಲ್ಯಾನ್?
ಯೋಗಿ ಆದಿತ್ಯನಾಥ್ ಸರ್ಕಾರ ಉತ್ತರ ಪ್ರದೇಶದಲ್ಲಿ ಅಭಿವೃದ್ಧಿಯ ಅಲೆಯನ್ನು ಎಬ್ಬಿಸಿದೆ. ಉತ್ತರ ಪ್ರದೇಶದ ಕುಟುಂಬ ಗುರುತಿನ ಚೀಟಿ ಎಂಬ ಹೊಸ ಯೋಜನೆಯನ್ನು ಪ್ರಾರಂಭಿಸುವುದಾಗಿ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ. ಈ ಯೋಜನೆಯಿಂದ ಉದ್ಯೋಗದಲ್ಲಿ ಪ್ರಯೋಜನವಾಗಲಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಕುಟುಂಬ ಗುರುತಿನ ಚೀಟಿ ಯೋಜನೆಯಡಿ ಪ್ರತಿ ಕುಟುಂಬದಲ್ಲಿ ಕನಿಷ್ಠ ಒಬ್ಬ ವ್ಯಕ್ತಿಗೆ ಉದ್ಯೋಗ ಸಿಗುವಂತೆ ಯೋಗಿ ಸರ್ಕಾರ ಖಚಿತಪಡಿಸುತ್ತದೆ. ಈ ಯೋಜನೆಯಲ್ಲಿ ಇದುವರೆಗೆ 78000 ಅರ್ಜಿಗಳು ಸಲ್ಲಿಕೆಯಾಗಿವೆ. ಅದರಲ್ಲಿ 33,000 ಅರ್ಜಿಗಳಿಗೆ ಅನುಮೋದನೆ ನೀಡಲಾಗಿದೆ. ಈ 33 ಸಾವಿರ ಕುಟುಂಬಗಳಿಗೆ ಗುರುತಿನ ಚೀಟಿ ನೀಡಲಾಗುವುದು.

ರಾಜ್ಯದಲ್ಲಿ ಅಭಿವೃದ್ಧಿಯ ಟ್ರೆಂಡ್ ಉಳಿಸಿಕೊಳ್ಳಲು ಯೋಗಿ ಸರ್ಕಾರ ಒಂದೊಂದೇ ಹೆಜ್ಜೆ ಇಡುತ್ತಿದೆ. ಈ ಗುರುತಿನ ಚೀಟಿ ಮೂಲಕ ಯಾವ ಕುಟುಂಬ ಆರ್ಥಿಕವಾಗಿ ಹಿಂದುಳಿದಿದೆ ಎಂಬುದನ್ನು ಗುರುತಿಸಬಹುದಾಗಿದೆ. ಯಾವ ಕುಟುಂಬಗಳಿಗೆ ಕೆಲಸದ ಕೊರತೆ ಇದೆ ಎಂಬುದನ್ನು ಸಹ ಗುರುತಿಸಬಹುದು.
ಈ ಗುರುತಿನ ಚೀಟಿಯ ಮೂಲಕ ಸರ್ಕಾರದ ಯಾವುದೇ ಯೋಜನೆಯ ಲಾಭ ಯಾವ ಕುಟುಂಬ ಪಡೆಯುತ್ತಿದೆ ಎಂಬುದನ್ನು ಗುರುತಿಸಬಹುದಾಗಿದೆ. ಯೋಗಿ ಆದಿತ್ಯನಾಥ್ ಈಗಾಗಲೇ ಯೋಜನೆಯನ್ನು ಪರಿಶೀಲಿಸಿದ್ದಾರೆ. ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯ ಲಾಭವನ್ನು 3.61 ಕೋಟಿ ಕುಟುಂಬಗಳು ಪಡೆಯುತ್ತಿವೆ ಎಂದು ಯೋಗಿ ಸರ್ಕಾರ ಹೇಳಿದೆ. ಅವರ ಎಲ್ಲಾ ಪಡಿತರ ಚೀಟಿಯ ಮಾಹಿತಿಯು ಈ ಕುಟುಂಬ ಗುರುತಿನ ಚೀಟಿಯಲ್ಲಿದೆ.
ರಾಜ್ಯದ ನಾಗರಿಕರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಲು ಮಾನವ ಸಂಪನ್ಮೂಲ ಪೋರ್ಟಲ್ ಅನ್ನು ಪ್ರಾರಂಭಿಸಲಾಗಿದೆ. ಇದಕ್ಕೆ 83 ಇಲಾಖೆಗಳನ್ನು ಸೇರಿಸಲಾಗಿದೆ. ಮತ್ತು ಇದು 14 ಲಕ್ಷ ಸರ್ಕಾರಿ ನೌಕರರ ದಾಖಲೆಗಳನ್ನು ಒದಗಿಸಿದೆ. ಈ ಪೋರ್ಟಲ್ ನಲ್ಲಿ ಸರ್ಕಾರಿ ನೌಕರರ ಎಲ್ಲಾ ಮಾಹಿತಿ ಲಭ್ಯವಾಗಲಿದೆ ಎನ್ನಲಾಗಿದೆ.

ಯುಪಿ ಅಭಿವೃದ್ಧಿ ಕಾರ್ಯಕ್ರಮ
ನರೇಂದ್ರ ಮೋದಿಯವರು ಪ್ರಧಾನಿಯಾಗಿ 9 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್ ಅವರು ಲಕ್ನೋದಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಅವರೊಂದಿಗೆ ಲಕ್ನೋದಲ್ಲಿ ಮಾಧ್ಯಮಗಳನ್ನು ಭೇಟಿ ಮಾಡಿದರು. ಈ ವೇಳೆ ಮಾತನಾಡಿದ ಅವರು, 'ಪ್ರಧಾನಿ ಮೋದಿಯವರಿಂದ ಸಾಕಷ್ಟು ಲಾಭ ಪಡೆದ ರಾಜ್ಯಗಳಲ್ಲಿ ಉತ್ತರ ಪ್ರದೇಶವೂ ಒಂದು. ಈ 9 ವರ್ಷಗಳ ನಂತರ ನಾವು ನವ ಭಾರತವನ್ನು ಕಾಣುತ್ತೇವೆ' ಎಂದು ಹೇಳಿದರು.
ಈ ನವ ಭಾರತಕ್ಕೆ ನಾಲ್ಕು ಸ್ತಂಭಗಳು ಮೂಲಭೂತವಾಗಿವೆ. ಈ ನಾಲ್ಕು ಆಧಾರಸ್ತಂಭಗಳು- ದೇಶದ ಗೌರವ, ಆಂತರಿಕ ಮತ್ತು ಬಾಹ್ಯ ಭದ್ರತೆ, ಬಡವರ ಕಲ್ಯಾಣ ಮತ್ತು ಮೂಲಸೌಕರ್ಯ ಅಭಿವೃದ್ಧಿ ಆಗಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ವಿಶ್ವದಲ್ಲಿ ಭಾರತದ ಬಗ್ಗೆ ಆಸಕ್ತಿ ಹೆಚ್ಚಾಗಿದೆ. ಭಾರತ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವನ್ನು ವಿಶ್ವದ ರಾಷ್ಟ್ರಗಳು ಸೂಕ್ಷ್ಮವಾಗಿ ಗಮನಿಸುತ್ತವೆ. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ನಮ್ಮ ದೇಶದ ಬಗ್ಗೆ ಕಾಳಜಿ ಮತ್ತು ಗೌರವ ಹೆಚ್ಚಾಗಿದೆ ಎಂದರು.
ಅದೇ ರೀತಿ ದೇಶದ ಗಡಿಗಳು ಕೂಡ ಸುರಕ್ಷಿತವಾಗಿವೆ. ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ರಾಜ್ಯಗಳು ಅಥವಾ ನಕ್ಸಲ್ ಮತ್ತು ಮಾವೋವಾದಿ ಹಿಂಸಾಚಾರದಿಂದ ಪ್ರಭಾವಿತವಾಗಿರುವ ಪ್ರದೇಶಗಳೆಲ್ಲವೂ ಸುರಕ್ಷಿತವಾಗಿದೆ. ಉಗ್ರವಾದ, ಪ್ರತ್ಯೇಕತಾವಾದ ಮತ್ತು ಭಯೋತ್ಪಾದನೆಯನ್ನು ಸರ್ಕಾರ ಯಶಸ್ವಿಯಾಗಿ ನಿಗ್ರಹಿಸಿದೆ. ಭದ್ರತೆಯ ವಿಷಯದಲ್ಲಿ ದೇಶದಲ್ಲಿ ಹೊಸ ವಿಶ್ವಾಸ ಮೂಡಿದೆ. ಮತ್ತೊಂದೆಡೆ ಭಾರತ ತನ್ನ 1.4 ಬಿಲಿಯನ್ ಜನರಿಗೆ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಿದೆ ಎಂದು ಹೇಳಿದರು.












Click it and Unblock the Notifications