ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

JNU: ಸುಪ್ರೀಂ ಅಂಗಳಕ್ಕೆ ವಿವಾದ, ರಾಷ್ಟ್ರಪತಿಗೂ ಮನವಿ

|
Google Oneindia Kannada News

ನವದೆಹಲಿ, ಫೆಬ್ರವರಿ, 18: ಗುರುವಾರ ಸಹ ದೇಶಾದ್ಯಂತ ಜವಾಹರಲಾಲ್ ನೆಹರು ವಿವಿ ಗಲಾಟೆಯ ಮುಂದುವರಿದ ಭಾಗಗಳೇ ಕಂಡುಬಂದವು. ಪರ-ವಿರೋಧದ ಪ್ರತಿಭಟನೆಗಳು, ದೆಹಲಿ ಪೊಲೀಸರ ಹೇಳಿಕೆ, ಕನ್ಹಯ್ಯ ಕುಮಾರ್ ಜಾಮೀನು ಅರ್ಜಿ ಸುಪ್ರೀಂ ಅಂಗಳಕ್ಕೆ, ಶುಕ್ರವಾರ ವಿಚಾರಣೆ,, ಇದು ಗುರುವಾರದ ಅಪ್ ಡೇಟ್ಸ್.

ಬಂಧನದಲ್ಲಿರುವ ಜೆಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ ಕುಮಾರ್ ಜಾಮೀನು ಕೋರಿ ಅರ್ಜಿ ಸಲಿಸಿದ್ದು, ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಶುಕ್ರವಾರ ನಡೆಸಲಿದೆ. ನನ್ನ ಮೇಲೆ ಸೆರೆಮನೆಯೊಳಗೇ ದಾಳಿ ನಡೆಯುವ ಸಾಧ್ಯತೆ ಇರುವುದರಿಂದ ಪ್ರಾಣಕ್ಕೆ ರಕ್ಷಣೆ ಒದಗಿಸಬೇಕು ಎಂದು ಕನ್ಹಯ ಕುಮಾರ್ ಸುಪ್ರೀಂಕೋರ್ಟಿಗೆ ಮನವಿ ಮಾಡಿದ್ದಾರೆ.[JNU ವೃತ್ತಾಂತ: ಗುಪ್ತಚರ ಇಲಾಖೆಯ ಸ್ಫೋಟಕ ಮಾಹಿತಿ]

ಇನ್ನೊಂದೆಡೆ ರಾಹುಲ್ ಗಾಂಧಿ ನೇತೃತ್ವದ ನಿಯೋಗ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ದೇಶದಲ್ಲಿ ಶಾಂತಿ ಭಂಗ ಸಂದರ್ಭಗಳು ಹೆಚ್ಚಿವೆ ಎಂದು ಆತಂಕ ವ್ಯಕ್ತಪಡಿಸಿ ಮನವಿ ಸಲ್ಲಿಸಿದೆ. ಮಾಧ್ಯಮಗಳ ವರದಿ ಮತ್ತು ದೊರೆತಿರುವ ವಿಡಿಯೋ ಪ್ರತಿಗಳನ್ನು ಆಧರಿಸಿ ಆರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಇಡೀ ದಿನದ ಬೆಳವಣಿಗೆ ಮುಂದಿದೆ..

ಬಂದ ಕೇಜ್ರಿವಾಲ್

ಬಂದ ಕೇಜ್ರಿವಾಲ್

ರಾಷ್ಟ್ರಪತಿಯನ್ನು ಭೇಟಿ ಮಾಡಿ ಘಟನಾವಳಿಗಳ ಬಗ್ಗೆ ಪ್ರಣಬ್ ಮುಖರ್ಜಿ ಅವರ ಜೊತೆಗೆ ಚರ್ಚಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ 'ರಾಷ್ಟ್ರವಿರೋಧಿ ಘೋಷಣೆಗಳನ್ನು ಕೂಗಿದ 4-5 ಜನರನ್ನು ಬಂಧಿಸಲು ಈ ಸರ್ಕಾರಕ್ಕೆ ಸಾಧ್ಯವಿಲ್ಲ ಎಂದಾದರೆ, ಪಠಾಣ್​ಕೋಟ್ ದಾಳಿಗಳನ್ನು ನಡೆಸಿದವರನ್ನು ಅವರು ಹೇಗೆ ಹಿಡಿಯುತ್ತಾರೆ?' ಎಂದು ಪ್ರಶ್ನೆ ಮಾಡಿದರು.

ವಿದ್ಯಾರ್ಥಿಗಳ ಬೆಂಬಲ

ವಿದ್ಯಾರ್ಥಿಗಳ ಬೆಂಬಲ

ಕನ್ಹಯ್ಯ ಅವರಿಗೆ ಬೆಂಬಲ ವ್ಯಕ್ತಪಡಿಸಿ ಜೆಎನ್​ಯುು ವಿದ್ಯಾರ್ಥಿಗಳು ಶಾಂತಿಯ ದ್ಯೋತಕವಾಗಿ ಹೂಗಳನ್ನು ಹಿಡಿದುಕೊಂಡು ಮಂಡಿ ಹೌಸ್​ನಿಂದ ಜಂತರ್ ಮಂತರ್​ಮೆರವಣಿಗೆ ನಡೆಸಲಿದ್ದಾರೆ. ಚೆನ್ನೈ, ಕೋಲ್ಕತ, ಕಾಶ್ಮೀರದಲ್ಲೂ ವಿದ್ಯಾರ್ಥಿಗಳ ಪರವಾಗಿ ಪ್ರತಿಭಟನೆಗಳು ನಡೆದಿವೆ.

ರಾಷ್ಟ್ರಪತಿ ಭೇಟಿ ಮಾಡಿದ ರಾಹುಲ್

ರಾಷ್ಟ್ರಪತಿ ಭೇಟಿ ಮಾಡಿದ ರಾಹುಲ್

ಇತ್ತ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರೆ, ಮತ್ತೊಂದೆಡೆ ಜೆಎನ್ ಯು ವಿದ್ಯಾರ್ಥಿಗಳನ್ನು ದೇಶದ್ರೋಹ ಆರೋಪದ ಮೇಲೆ ಬಂಧಿಸಿರುವುದನ್ನು ಪ್ರತಿಭಟಿಸಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದ ನಿಯೋಗ ಗುರುವಾರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿ ಮಾಡಿತು.

ದೇಶದ ವಿರುದ್ಧ ಮಾತನಾಡುವುದು ಸಲ್ಲ

ದೇಶದ ವಿರುದ್ಧ ಮಾತನಾಡುವುದು ಸಲ್ಲ

ದೇಶಪ್ರೇಮ ನನ್ನ ರಕ್ತದಲ್ಲಿದೆ. ಈ ದೇಶಕ್ಕಾಗಿ ನನ್ನ ಕುಟುಂಬದವರು ಪ್ರಾಣತ್ಯಾಗ ಮಾಡಿದ್ದನ್ನು ಕಂಡಿದ್ದೇನೆ. ಒಂದು ವೇಳೆ ಯಾರಾದರು ದೇಶದ ವಿರುದ್ಧ ಮಾತನಾಡಿದರೆ ಅಂತಹವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕು. ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯ ಕಸಿದುಕೊಳ್ಳುವಂತೆ ಇಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

 ಸುಪ್ರೀಂಕೋರ್ಟ್ ಎಚ್ಚರಿಕೆ

ಸುಪ್ರೀಂಕೋರ್ಟ್ ಎಚ್ಚರಿಕೆ

ಜೆಎನ್ ಯು ವಿವಾದಕ್ಕೆ ಸಂಬಂಧಿಸಿದಂತೆ ಪಟಿಯಾಲ ಹೌಸ್ ನ್ಯಾಯಾಲಯದಲ್ಲಿ ನಡೆದ ಘಟನಾವಳಿಗಳು ಮತ್ತು ಸಂಬಂಧಿತ ಬೆಳವಣಿಗೆ ನಮ್ಮ ಗಮನಕ್ಕೆ ಬಂದಿದೆ. ಯಾರ ಭದ್ರತೆಗೂ ಲೋಪವಾಗಬಾರದು ಎಂದು ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ.

 ಕುಮಾರ್ ಪಾಲಕರಿಗೆ ಭದ್ರತೆ

ಕುಮಾರ್ ಪಾಲಕರಿಗೆ ಭದ್ರತೆ

ಧನಕ್ಕೊಳಗಾಗಿರುವ ಜೆಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಪೋಷಕರಿಗೆ ಬಿಹಾರ ಸರ್ಕಾರ ಪೊಲೀಸ್ ಭದ್ರತೆ ಒದಗಿಸಿದೆ. ಫೆ.17 ರಂದು ದೆಹಲಿ ನ್ಯಾಯಾಲಯದಲ್ಲಿ ಕನ್ಹಯ್ಯ ಕುಮಾರ್ ಮೇಲೆ ಹಲ್ಲೆ ನಡೆದ ನಂತರ ಬಿಹಾರದ ಬೆಗುಸರೈನಲ್ಲಿರುವ ಆತನ ಪೋಷಕರಿಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಎಫ್ ಐಆರ್ ನಲ್ಲಿ ಏನಿದೆ?

ಎಫ್ ಐಆರ್ ನಲ್ಲಿ ಏನಿದೆ?

ಘಟನೆ ನಡೆದ ದಿನ ಪೊಲೀಸರು ಸ್ಥ:ದಲ್ಲೇ ಇದ್ದರು. ಆದರೆ ಫೆ.9ರಂದು ಪ್ರಸಾರವಾದ ಹಿಂದಿ ಸುದ್ದಿ ವಾಹಿನಿಯೊಂದರ ವಿಡಿಯೋ ಕ್ಲಿಪ್ ಅನ್ನು ದೆಹಲಿ ಪೊಲೀಸರು ಕನ್ಹಯ್ಯನ ಕುಮಾರ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿದ್ದಾರೆ.

English summary
Claiming threat to his life in Tihar Jail, JNUSU President Kanhaiya Kumar, arrested on sedition charges, today directly approached the Supreme Court for bail which it will hear tomorrow. In the petition, filed through advocate Anindita Pujari, Kumar, who was attacked yesterday in the Patiala House court complex by a group of lawyers, claimed his innocence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X