ಕಲ್ಲು ತೂರಾಟ ನಡೆಸುವವರನ್ನು ಥ್ರಿಲಿಂಗ್ ಆಗಿ ಹಿಡಿದ ಕಾಶ್ಮೀರಿ ಪೊಲೀಸರು

ಶ್ರೀನಗರ, ಸೆಪ್ಟೆಂಬರ್ 08: ಜಮ್ಮು-ಕಾಶ್ಮೀರದಲ್ಲಿ ಇರುವ ಸಮಸ್ಯೆಗಳು ಸಾಲದು ಎಂಬಂತೆ ಹುಟ್ಟಿಕೊಂಡವರು ಈ ಕಲ್ಲೆಸೆಯುವವರು. ಕಲ್ಲು ತೂರಾಟದ ಸಮಸ್ಯೆ ಕಾಶ್ಮೀರಿ ಪೊಲೀಸರಿಗೆ ದೊಡ್ಡ ಸವಾಲೆನ್ನಿಸಿತ್ತು.

ಕಲ್ಲು ತೂರಾಟ ಮಾಡುವವರು ಯಾರು ಎಂಬುದೇ ತಿಳಿಯದೆ ಪೊಲೀಸರು ಪರಿತಪಿಸುತ್ತಿದ್ದಾಗ ಹೊಳೆದ ಹೊಸ ಐಡಿಯಾವೊಂದು ಸಫಲವಾಗಿದೆ. ಎಂಟು ವರ್ಷಗಳ ಹಿಂದೆ ಮಾಡಿದ್ದ ಇದೇ ಐಡಿಯಾವನ್ನು ಮತ್ತೊಮ್ಮೆ ಜಾರಿಗೆ ತಂದು ಕಲ್ಲು ತೂರಾಟ ನಡೆಸುವವರು ಪೊಲೀಸರು ಹಿಡಿದಿದ್ದಾರೆ. ಈಗಾಗಲೇ ನಾಲ್ವರನ್ನು ಬಂಧಿಸಲಾಗಿದ್ದು, ಇನ್ನು ಮೇಲೆ ಕಲ್ಲು ತೂರಾಟ ನಡೆಸುವವರು ತಮ್ಮ ಜೊತೆಯಲ್ಲೇ ಪೊಲಿಸರಿರಬಹುದು ಎಂಬ ಭಯಕ್ಕಾದರೂ ಈ ಕೆಲಸ ಮಾಡದೆ ಇರಬಹುದು ಎಂಬುದು ಪೊಲೀಸರ ಭರವಸೆ.

JK police used a strategy to catch stone pelters

ಮುಸುಕು ಧರಿಸಿ ಕಲ್ಲು ತೂರಾಟ ಮಾಡಿ ಪೊಲಿಸರಿಗೇ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ ಕಿಡಿಗೇಡಿಗಳನ್ನು ಅವರದೇ ಹಾದಿಯಲ್ಲಿ ನಡೆದು ಹಿಡಿದುಹಾಕಿದ್ದಾರೆ ಪೊಲಿಸರು. ಕಲ್ಲು ತೂರಾಟ ಮಾಡುವವರಂತೆ ಪೊಲೀಸರೂ ಮುಸುಕು ಧರಿಸಿ, ಸಮವಸ್ತ್ರ ಧರಿಸದೆ ಜನಸಾಮಾನ್ಯರ ನಡುವಲ್ಲಿ ಸೇರಿಕೊಂಡಿದ್ದಾರೆ. ಎಂದಿನಂತೇ ಕಲ್ಲು ತೂರಾಟ ಆರಂಭಿಸಿದ ಕಿಡಿಗೇಡಿಗಳೊಂದಿಗೆ ಮುಸುಕು ಧರಿಸಿದ ಪೊಲೀಸರೂ ಸೇರಿಕೊಂಡು, ಯಾರೆಲ್ಲ ಕಲ್ಲು ತೂರಾಟ ನಡೆದ್ದಾರೆ ಎಂಬುದನ್ನು ಹುಡುಕಿ ಅವರನ್ನೆಲ್ಲ ಹಿಡಿದಿದ್ದಾರೆ. ಕಲ್ಲುತೂರಾಟವನ್ನು ಪ್ರತಿದಿನದ ಹವ್ಯಾಸ ಎಂದುಕೊಂಡಿದ್ದವರಿಗೆ ಪೊಲೀಸರ ಈ ಅನಿರೀಕ್ಷಿತ ಉಪಾಯದಿಂದ ಶಾಕ್ ಆಗಿದೆ!

ಇಲ್ಲಿನ ಜಾಮಾ ಮಸೀದಿಯಲ್ಲಿ ನಮಾಜ್ ಮುಗಿಸಿ ಕಲ್ಲು ತೂರಾಟ ನಡೆಸುತ್ತಿದ್ದವರನ್ನು ಪೊಲಿಸರು ಹಿಡಿದ ಪರಿ ಇದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+