ಅಮ್ಮನ ತೋಳಲ್ಲೇ ಕಂದಮ್ಮನನ್ನು ಸಾಯಿಸಿದ ಜಾರ್ಖಂಡ್ ಆಸ್ಪತ್ರೆ!

Posted By:
Subscribe to Oneindia Kannada

ಗುಲ್ಮಾ(ಜಾರ್ಖಂಡ್), ಆಗಸ್ಟ್ 19: ಅಮ್ಮನ ತೋಳಿನಲ್ಲೇ ಮಗು ಅಸಹಾಯಕವಾಗಿ ಸಾಯುವ ಸ್ಥಿತಿಗಿಂತ ಘೋರ ಇನ್ನೇನೂ ಇಲ್ಲ. ಆದರೆ ಅಂಥದೊಂದು ಸನ್ನಿವೇಶವನ್ನು ಆಸ್ಪತ್ರೆಯೇ ಸೃಷ್ಟಿಟಿಸಿದ ಘಟನೆ ಜಾರ್ಖಂಡ್ ನ ಗುಲ್ಮಾ ಎಂಬಲ್ಲಿ ನಿನ್ನೆ(ಆಗಸ್ಟ್ 18) ನಡೆದಿದೆ.

ತನ್ನ ಮೂರು ವರ್ಷದ ಮಗುವನ್ನು ಅನಾರೋಗ್ಯದ ಕಾರಣ ಆಸ್ಪತ್ರೆಗೆ ಕರೆತಂದಿದ್ದ ವಿಧವೆಯೊಬ್ಬರು, ಚಿಕಿತ್ಸೆಯ ನಂತರ ಹಿಂತಿರುಗಿ ಹೋಗುವಾಗ ಅಂಬುಲೆನ್ಸ್ ಕಳಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ. ಆದರೆ ಮಗುವಿಗೆ ಅನಾರೋಗ್ಯ ಎಂಬುದು ಗೊತ್ತಿದ್ದರೂ ಆಸ್ಪತ್ರೆ ಸಿಬ್ಬಂದಿ ಅಂಬುಲೆನ್ಸ್ ಕಳಿಸಿಕೊಡುವುದಕ್ಕೆ ನಿರಾಕರಿಸಿದ್ದಾರೆ. ಅಸಹಾಯಕ, ಬಡ ವಿಧವೆ ತಮ್ಮ ಮನೆಗೆ ಆಸ್ಪತ್ರೆಯಿಂದಿರುವ 40 ಕಿ.ಮೀ.ದೂರವನ್ನು ಕಾಲ್ನಡಿಗೆಯಲ್ಲೇ ತಲುಪಲು ನಡೆದೇ ಹೊರಟಿದ್ದಾರೆ.

Jharkhand: Neglegence of hospital staff, 3 year old baby dies in mother's lap!

ಅಮ್ಮನ ತೋಳಿನಲ್ಲಿ ಮಲಗಿದ್ದ ಮಗು ಮನೆ ಸೇರುವ ಮೊದಲೇ ಅಸುನೀಗಿದ್ದು, ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷ್ಯದಿಂದಲೇ ಇಂದು ಇಂಥ ಹಲವು ಸಾವು ಸಂಭವಿಸುತ್ತಿರುವುದು ಆತಂಕಕಾರಿ ವಿಷಯ ಎನ್ನಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A three-year-old toddler died in his mother's lap while he was being taken to home on foot after being treated at the Sadar hospital in Jharkhand's Gumla district.The shocking incident took place on Aug 19th.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ