ಜಾರ್ಖಂಡ್: ಮೋಟರ್ ಸೈಕಲ್ ಕದ್ದ ಎಂದು ಹೊಡೆದು ಕೊಂದ ಜನ

ಜೇಮ್ಶೆಡ್ಪುರ, ಜೂನ್ 24: ಮೋಟರ್ ಸೈಕಲ್ ಕದ್ದಿದ್ದಾನೆ ಎಂದು ಆರೋಪಿಸಿ ವ್ಯಕ್ತಿಯನ್ನು ಜನರೇ ಹೊಡೆದು ಕೊಂದ ಬರ್ಬರ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.

ಶಾಮ್ಸ್ ತಬ್ರೇಝ್ ಎಂಬ 24 ವರ್ಷ ವಯಸ್ಸಿನ ಯುವಕನನ್ನು ಕೆಲವರು ಗಂಟೆಗಟ್ಟಲೆ ಹೊಡೆದು, ಹಿಂಸಿಸಿದ್ದರು ಕೆಲವು ಮೂಲಗಳ ಪ್ರಕಾರ 'ಜೈ ಶ್ರೀರಾಮ್', 'ಜೈ ಹನುಮಾನ್' ಎಂದು ಹೇಳುವಂತೆ ಅವನನ್ನು ಒತ್ತಾಯಿಸಲಾಗಿತ್ತು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಹ ಘಟನೆಗೆ ಸಾಕ್ಷ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ.

Jharkhand: Man beaten by mobs dies, sources say he has made to chant Jai Shri Ram

ಯುವಕನನ್ನು ಥಳಿಸಿದ ಘಟನೆ ಕಳೆದ ಮಂಗಳವಾರ ನಡೆದಿದ್ದು, ಆತನನ್ನು ಬುಧವಾರ ಪೊಲೀಸ್ ವಶಕ್ಕೆ ನೀಡಲಾಗಿತ್ತು. ಆದರೆ ಆತನ ಚಿಕಿತ್ಸೆಗೆ ಪೊಲೀಸರು ಸಹಕಾರ ನೀಡದ ಕಾರಣ ಗಂಭೀರವಾಗಿ ಗಾಯಗೊಂಡು, ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದ ತಬ್ರೇಜ್ ಶನಿವಾರ ಸಾವಿಗೀಡಾಗಿದ್ದ.

ಆತ ಸಾವಿಗೀಡಾಗಿದ್ದಾನೆಂದು ಘೋಷಿಸಿದರೂ ಅದನ್ನು ಒಪ್ಪಲು ಕುಟುಂಬಸ್ಥರು ಸಿದ್ಧರಿರಲಲಿಲ್ಲ. ಆತನ್ನು ಜೆಮ್ಶೆಡ್ಪುರದ ಟಾಟಾ ಮೈನ್ ಆಸ್ಪತ್ರೆಗೆ ದಾಖಲಿಸಲು ಕೊಂಡೊಯ್ಯಲಾಗಿತ್ತು. ಆದರೆ ಆತ ಸತ್ತಿದ್ದಾನೆಂದು ಅಲ್ಲಿನ ವೈದ್ಯರೂ ಘೋಷಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+