Jharkhand Election 2024: ಚುನಾವಣಾ ತಯಾರಿಯ ನಡುವೆಯೇ ಮೋದಿಗೆ ಹೇಮಂತ್ ಸೊರೆನ್ ಪತ್ರ
ಜಾರ್ಖಂಡ್ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಈ ನಡುವೆ ಎರಡು ಆಡಳಿತ ವಿರೋಧಿ ಪಕ್ಷಗಳು ಪ್ರಚಾರವನ್ನು ಪ್ರಾರಂಭಿಸಿವೆ. ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ನಂತರ ಹೇಮಂತ್ ಸೊರೇನ್ ಮತ್ತೆ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ್ದಾರೆ. ಈ ಬಾರಿ ರಾಜ್ಯದ ಅಭಿವೃದ್ಧಿ ಹಣವನ್ನು ಕೇಂದ್ರ ತಡೆ ಹಿಡಿದಿದೆ ಎಂದು ಅವರು ಆರೋಪಿಸುತ್ತಿದ್ದಾರೆ. ಅಲ್ಲದೆ ಚುನಾವಣಾ ತಯಾರಿಯ ನಡುವೆಯೇ ಪ್ರಧಾನಿ ಮೋದಿಗೆ ಹೇಮಂತ್ ಸೊರೆನ್ ಪತ್ರ ಬರೆದಿದ್ದಾರೆ.
ಹೇಮಂತ್ ಸೊರೆನ್ ಅವರ ಆರೋಪಕ್ಕೂ ಮುನ್ನ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೇಂದ್ರದ ವಿರುದ್ಧ ಆರೋಪ ಮಾಡಿದ್ದರು. ಮೋದಿ ಸರ್ಕಾರ ರಾಜ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಹಣವನ್ನು ತಡೆಹಿಡಿದಿದೆ ಎಂದು ದೂರಿದ್ದರು. ಈ ವೇಳೆ ಪಕ್ಕದ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಕೂಡ ಇದೇ ಆರೋಪ ಮಾಡಿದ್ದಾರೆ.

2022ರಿಂದ ಮೋದಿ ಸರ್ಕಾರ 1,36,042 ಕೋಟಿ ರೂ.ಗಳನ್ನು ತಡೆಹಿಡಿದಿದೆ ಎಂದು ಹೇಮಂತ್ ಸೊರೆನ್ ಆರೋಪಿಸಿದ್ದಾರೆ. ಆ ಹಣದಿಂದ ರಾಜ್ಯದ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಹೀಗಾಗಿ ಹೇಮಂತ್ ಸೊರೆನ್ ಅವರು ಸೆಪ್ಟೆಂಬರ್ 23 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಆ ಪತ್ರದ ಪ್ರತಿಯನ್ನು ಅವರು (ಸೆಪ್ಟೆಂಬರ್ 25) ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಹೇಮಂತ್ ಸೊರೇನ್ ಅವರು ಹಣವಿಲ್ಲದೆ ರಾಜ್ಯದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಬಜೆಟ್‌ನಲ್ಲಿ ಹಲವು ರಾಜ್ಯಗಳಿಗೆ ಅಪಾರ ಪ್ರಮಾಣದ ಅನುದಾನ ನೀಡಿದ್ದರೂ ಜಾರ್ಖಂಡ್‌ಗೆ ಹಣ ನೀಡಿಲ್ಲ ಎಂದು ಆರೋಪಿಸಿದ್ದಾರೆ. ಅಲ್ಲಿನ ಜನರು ತುಂಬಾ ಹಿಂದುಳಿದಿದ್ದಾರೆ, ಆದರೂ ರಾಜ್ಯಕ್ಕೆ ಯಾವುದೇ ಹಣಕಾಸಿನ ಹಂಚಿಕೆ ಮಾಡಿಲ್ಲ ಎಂದು ಹೇಮಂತ್ ಸೊರೆನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ ಬಿಜೆಪಿ ಹೇಮಂತ್ ಸೋರೆನ್ ಅವರನ್ನು ದೇಶದ್ರೋಹಿ ಎಂದು ಟಾರ್ಗೆಟ್ ಮಾಡಿದೆ. ಬಿಜೆಪಿ ನಾಯಕ ಹಿಮಂತ ಬಿಸ್ವಾ ಶರ್ಮಾ ಜಾರ್ಖಂಡ್‌ನಲ್ಲಿ ಪ್ರಚಾರ ನಡೆಸಿ ಎನ್‌ಆರ್‌ಸಿಯನ್ನು ಪರಿಚಯಿಸುವುದಾಗಿ ಘೋಷಿಸಿದರು. ಈ ಬಾರಿ ಜಾರ್ಖಂಡ್‌ನ ಜನರು ಬಿಜೆಪಿಯನ್ನು ನಂಬುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಬಿಜೆಪಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಪ್ರಚಾರದ ವೇಳೆ ಭರವಸೆ ನೀಡುತ್ತಿದ್ದಾರೆ.
ರಾಜ್ಯದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗಿದ್ದು, ಬಿಜೆಪಿ ಅಧಿಕಾರಕ್ಕೆ ಬಂದರೆ ಸರ್ಕಾರಿ ಮಟ್ಟದಲ್ಲಿ ಖಾಲಿ ಇರುವ ಲಕ್ಷಾಂತರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂಬ ಭರವಸೆಯನ್ನು ನೀಡಿದೆ ಬಿಜೆಪಿ. ಅಲ್ಲದೆ ರಾಜ್ಯದಲ್ಲಿ ನುಸುಳುಕೋರರನ್ನು ಹೊರಹಾಕುವ ಮೂಲಕ ಸ್ಥಳೀಯರನ್ನು ರಕ್ಷಿಸಿ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು ಎಂದು ಬಿಜೆರಪಿ ನಾಐಕರು ಪ್ರಚಾರದ ವೇಳೆ ಭರವಸೆ ನೀಡುತ್ತಿದ್ದಾರೆ.
ಪರಿವರ್ತನ್ ಯಾತ್ರೆ ಮೂಲಕ ರಾಜ್ಯದಲ್ಲಿ ಮತದಾರರನ್ನು ಸೆಳೆಯುವ ಪ್ರಯತ್ನದಲ್ಲಿ ಬಿಜೆಪಿ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಸಾಕಷ್ಟು ಪ್ರಯತ್ನ ನಡೆಸಿದೆ. ಹೇಮಂತ್ ಸೊರೆನ್ ಸರ್ಕಾರ ಉದ್ಯೋಗ ಸೃಷ್ಟಿಯಲ್ಲಿ ಹಿಂದೇಟು ಹಾಕುತ್ತಿದೆ. ಅಲ್ಲದೆ ಪ್ರಸ್ತುತ ಈ ಸರ್ಕಾರ ಜಾರ್ಖಂಡ್ ನಿವಾಸಿಗಳ ಭದ್ರತೆ, ಅವರ ಭೂಮಿ ಮತ್ತು ಅವರ ಹಕ್ಕುಗಳಿಗೆ ಅಪಾಯವನ್ನುಂಟುಮಾಡುತ್ತಿದೆ.
ಹೀಗಾಗಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅಕ್ರಮ ವಲಸಿಗರನ್ನು ಗುರುತಿಸಿ ಗಡಿಪಾರು ಮಾಡಲು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಸೇರಿದಂತೆ ನುಸುಳುಕೋರರ ವಿರುದ್ಧ ನಿರ್ಣಾಯಕ ಕ್ರಮ ಕೈಗೊಳ್ಳಲಿದೆ ಎಂದು ಬಿಜೆಪಿ ನಾಯಕರು ಮತದಾರರಿಗೆ ಭರವಸೆ ನೀಡುತ್ತಿದ್ದಾರೆ.












Click it and Unblock the Notifications