Jharkhand Election 2024: ಜಾರ್ಖಂಡ್‌ನಲ್ಲಿ ಬಿಜೆಪಿ ಪ್ರಾಬಲ್ಯ ಕಂಡು ನಿದ್ದೆ ಕಳೆದುಕೊಂಡ ಪ್ರತಿಪಕ್ಷಗಳು
ಜಾರ್ಖಂಡ್‌ನಲ್ಲಿ ಮುಂಬರುವ ಚುನಾವಣೆಯ ಸಿದ್ಧತೆಗಳು ಭರದಿಂದ ಸಾಗಿವೆ. ಹೇಮಂತ್ ಸೋರೆನ್ ನೇತೃತ್ವದ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಸರ್ಕಾರದ ವಿರುದ್ಧ ಆಕ್ರಮಣಕಾರಿ ಅಭಿಯಾನದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ರಾಜಕೀಯ ದಿಗ್ಗಜರನ್ನು ಸಜ್ಜುಗೊಳಿಸುತ್ತಿದೆ. ಇದರಿಂದಾಗಿ ಪ್ರತಿಪಕ್ಷಗಳು ನಿದ್ದೆ ಕಳೆದುಕೊಂಡಿವೆ.
ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಂತಹ ಅನುಭವಿ ರಾಷ್ಟ್ರೀಯ ನಾಯಕರು ಚುನಾವಣಾ ನೇತೃತ್ವವನ್ನು ವಹಿಸಿದ್ದಾರೆ. ಹೌದು.. ಜಾರ್ಖಂಡ್‌ನಲ್ಲಿ ನಡೆಯಲಿರುವ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ದೊಡ್ಡ ಶಕ್ತಿ ಎಂದರೆ ಅದರ ಪಾಳೆಯದಲ್ಲಿ ರಾಜ್ಯದ ಅನೇಕ ಹಿರಿಯ ನಾಯಕರು ಇದ್ದಾರೆ.

ಇತ್ತೀಚೆಗಷ್ಟೇ ಬಿಜೆಪಿ ಸೇರಿದ ಬಾಬುಲಾಲ್ ಮರಾಂಡಿ, ಅಮರ್ ಬೌರಿ, ಅರ್ಜುನ್ ಮುಂಡಾ, ವಿದ್ಯುತ್ ಬರನ್ ಮಹತೋ, ದೀಪಕ್ ಪ್ರಕಾಶ್, ಮನೀಶ್ ಜೈಸ್ವಾಲ್, ಧುಲ್ಲು ಮಹತೋ ಮತ್ತು ಚಂಪೈ ಸೊರೆನ್ ಅವರಂತಹ ಅನೇಕ ಹಿರಿಯ ಮತ್ತು ಪ್ರಭಾವಿ ನಾಯಕರು ಚುನಾವಣಾ ತಯಾರಿಯಲ್ಲಿ ನಿರತರಾಗಿದ್ದಾರೆ.
ಜಾರ್ಖಂಡ್‌ನಲ್ಲಿ ತನ್ನ ಪ್ರಭಾವವನ್ನು ಬಲಪಡಿಸಲು, JMM ಸರ್ಕಾರದ ನ್ಯೂನತೆಗಳನ್ನು ಬಹಿರಂಗಗೊಳಿಸುತ್ತಾ ಬಿಜೆಪಿ ತನ್ನ ಬೆಂಬಲಿಗರನ್ನು ಸಂಘಟಿಸಲು ಮತ್ತು ಮುಂಬರುವ ಚುನಾವಣೆಗಳಿಗೆ ಸಿದ್ಧತೆಯನ್ನು ನಡೆಸಿದೆ. ಜೆಎಂಎಂ ಮೇಲೆ ಅಭಿವೃದ್ಧಿ ಕುಂಠಿತ ಹಾಗೂ ಭ್ರಷ್ಟಾಚಾರದ ಆರೋಪಗಳನ್ನು ಮಾಡಲಾಗುತ್ತಿದೆ. ಈ ನ್ಯೂನತೆಗಳನ್ನು ಸಾರ್ವಜನಿಕರ ಮುಂದೆ ಎತ್ತಿ ತೋರಿಸಲು ಬಿಜೆಪಿ ಪರಿವರ್ತನ ಸಂಕಲ್ಪ ಯಾತ್ರೆಯಂತಹ ಚುನಾವಣಾ ಪ್ರಚಾರಗಳನ್ನು ಬಿಜೆಪಿ ಪ್ರಾರಂಭಿಸಿದೆ.

ಹೇಮಂತ್ ಸೊರೆನ್ ಆಡಳಿತ ಒಂದು ಕಾಲದಲ್ಲಿ ಬುಡಕಟ್ಟು-ಕೇಂದ್ರಿತ ಸರ್ಕಾರ ಎಂದು ಪ್ರಚಾರದ ಭರವಸೆಗಳೊಂದಿಗೆ, ಈಗ ದುರಾಡಳಿತ ಮತ್ತು ಅಸಮರ್ಥತೆಯಲ್ಲಿ ಮುಳುಗಿದೆ. ಆರ್ಥಿಕ ಬದಲಾವಣೆಯ ಭರವಸೆಗಳ ಹೊರತಾಗಿಯೂ, ಹೇಮಂತ್ ಸೊರೆನ್ ಸರ್ಕಾರವು ನಿರೀಕ್ಷೆಗಿಂತ ಕಡಿಮೆ ಅಭಿವೃದ್ಧಿ ಮಾಡಿದೆ, ಜೆಎಂಎಂ ತನ್ನ ಭರವಸೆಗಳನ್ನು ಈಡೇರಿಸಲು ವಿಫಲವಾಗಿದೆ ಎಂದು ಬಿಜೆಪಿಯ ಹಿರಿಯ ನಾಯಕ ಬಾಬುಲಾಲ್ ಮರಾಂಡಿ ಸೇರಿದಂತೆ ಹಲವು ಬಿಜೆಪಿ ನಾಐಕರು ಟೀಕಿಸಲು ಆರಂಭಿಸಿದ್ದಾರೆ. ಅಲ್ಲದೆ ಜೆಎಂಎಂ ಸರ್ಕಾರದ ನಿರುದ್ಯೋಗ ಮತ್ತು ಮೂಲಸೌಕರ್ಯದಂತಹ ಸಮಸ್ಯೆಗಳನ್ನು ಪ್ರಚಾರದಲ್ಲಿ ಎತ್ತಿ ತೋರಿಸಲಾಗುತ್ತಿದೆ.
ಬಿಜೆಪಿಯ ರಣತಂತ್ರದ ಹೆಜ್ಜೆಗಳು
ಅಲ್ಲದೆ ತಳಮಟ್ಟದಲ್ಲಿ ತನ್ನ ಪ್ರಬಲ ಅಸ್ತಿತ್ವವನ್ನು ನಿರ್ಮಿಸಲು ಬಿಜೆಪಿ ಸ್ಥಳೀಯ ಸಮುದಾಯಗಳೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಮತದಾರರನ್ನು ನೇರವಾಗಿ ಸಂಪರ್ಕಿಸಲು ಪಕ್ಷದ ಕಾರ್ಯಕರ್ತರು ವಿವಿಧ ಜಿಲ್ಲೆಗಳಲ್ಲಿ ರ್ಯಾಲಿ ಮತ್ತು ಸಭೆಗಳನ್ನು ಆಯೋಜಿಸುತ್ತಿದ್ದಾರೆ.
ಯಾವ ಪ್ರದೇಶದಲ್ಲಿ ಜೆಎಂಎಂ ಪ್ರಾಬಲ್ಯವನ್ನು ಹೊಂದಿದಿಯೋ ಅಲ್ಲೆಲ್ಲಾ ಪ್ರಬಲ ಬೆಂಬಲ ನೆಲೆಯನ್ನು ನಿರ್ಮಿಸುವ ಗುರಿಯನ್ನು ಬಿಜೆಪಿ ಹೊಂದಿದೆ. ಇದಲ್ಲದೆ ಬಿಜೆಪಿ ತನ್ನ ಸಂದೇಶವನ್ನು ಹರಡಲು ಮತ್ತು ಜೆಎಂಎಂ ಅನ್ನು ಎದುರಿಸಲು ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸಿಕೊಳ್ಳುತ್ತಿದೆ.
ಡಿಜಿಟಲ್ ವಿಧಾನಗಳನ್ನು ಬಳಸುವ ಮೂಲಕ ಬಿಜೆಪಿ ಹೆಚ್ಚು ಜನರನ್ನು ತಲುಪಲು ಮತ್ತು ಹೆಚ್ಚಿನ ಬೆಂಬಲಿಗರನ್ನು ಪ್ರೇರೇಪಿಸಲು ಆಶಿಸುತ್ತಿದೆ. ಪಕ್ಷದ ಆನ್‌ಲೈನ್ ಪ್ರಚಾರಗಳು ಅದರ ಸಾಧನೆಗಳನ್ನು ಎತ್ತಿ ತೋರಿಸುವುದರ ಮೇಲೆ ಮತ್ತು ಪ್ರಸ್ತುತ ಸರ್ಕಾರದ ವೈಫಲ್ಯಗಳನ್ನು ಟೀಕಿಸುವುದರ ಮೇಲೆ ಕೇಂದ್ರೀಕರಿಸುತ್ತವೆ. ಹೀಗಾಗಿ ಜಾರ್ಖಂಡ್‌ನಲ್ಲಿ ಹೇಮಂತ್ ಸೋರೆನ್ ಅವರ ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದು ಬಹುದೊಡ್ಡ ಸವಾಲಾಗಿದೆ.












Click it and Unblock the Notifications