Modi Budget: ಮೋದಿಗೆ ಅಗ್ನಿ ಪರೀಕ್ಷೆ: ಸರ್ಕಾರಕ್ಕೆ ತಲೆ ನೋವಾಗುತ್ತಿದೆ ನಿತೀಶ್ ಕುಮಾರ್ ಬೇಡಿಕೆ
ಈಗ ಭಾರತದ ಬಹು ಜನರ ಚಿತ್ತ ಕೇಂದ್ರದ ಬಜೆಟ್ ಮೇಲೆ ನಿಂತಿದೆ. ಈ ಬಾರಿಯ ಬಜೆಟ್‌ನಲ್ಲಿ ಏನೆಲ್ಲಾ ಸಡಿಲಿಕೆಗಳು ಇರುವ ಸಾಧ್ಯತೆ ಇದೆ ಎಂಬ ಬಗ್ಗೆ ಈಗ ಚರ್ಚೆಗಳು ಆರಂಭವಾಗಿವೆ. ಈ ಬೆನ್ನಲ್ಲೆ ಹಲವು ರಾಜ್ಯಗಳು ಸಹ ಈ ಬಜೆಟ್‌ನ್ನು ಬೆರಗು ಗಣ್ಣಿನಿಂದ ನೋಡುತ್ತಾ ನಿಂತಿವೆ. ಸಾಮಾನ್ಯವಾಗಿ ದೇಶದ ಹಲವು ರಾಜ್ಯದ ಬಜೆಟ್ ಮಂಡನೆಯ ಬಳಿಕ ಕೇಂದ್ರದಲ್ಲಿ ಬಜೆಟ್ ಮಂಡಿಸಲಾಗುತ್ತದೆ. ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಈ ಬಾರಿ ಮಂಡಿಸಲಿರುವ ಬಜೆಟ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಚನೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಿರುವ ಜೆಡಿಯು ಹಾಗೂ ಟಿಡಿಪಿ ಪಕ್ಷಗಳ ಬೇಡಿಕೆಗೂ ಬಜೆಟ್‌ನಲ್ಲಿ ಮನ್ನಣೆ ಸಿಗುವ ಸಾಧ್ಯತೆ ಇದೆ. ಬಿಹಾರ ವಿಶೇಷ ರಾಜ್ಯದ ಸ್ಥಾನ ಮಾನವನ್ನು ನೀಡುವಂತೆ ಬೇಡಿಕೆ ಇಟ್ಟಿದೆ. ಇದು ಕೇಂದ್ರದ ಮೋದಿ ಸರ್ಕಾರ ಯಾವಾಗಲೂ ನಿರ್ಲಕ್ಷಿಸುತ್ತಿರುವ ವಿಷಯವಾಗಿದೆ. ಈ ಬಾರಿ ನಿತೀಶ್ ಕುಮಾರ್ ಆಸೆ ಫಲಿಸುತ್ತದಾ ಕಾದು ನೋಡಬೇಕಿದೆ.

ಜೆಡಿಯು ನಾಯಕ ಮತ್ತು ಬಿಹಾರ ಸರ್ಕಾರದ ಸಚಿವ ವಿಜಯ್ ಚೌಧರಿ ಅವರು ಬಿಹಾರಕ್ಕೆ ವಿಶೇಷ ಪ್ಯಾಕೇಜ್ ಅಗತ್ಯವಿದೆ ಎಂದು ತಿಳಿಸಿದ್ದಾರೆ. ಐತಿಹಾಸಿಕ ಅಥವಾ ಭೌಗೋಳಿಕ ಕಾರಣಗಳಿಂದಾಗಿ ನಮಗೆ ಸಂಪನ್ಮೂಲಗಳ ಕೊರತೆಯಿದೆ. ಇಲ್ಲಿ ಗಣಿಗಳಾಗಲಿ, ಕಡಲತೀರಗಳು ಇಲ್ಲ. ಇದರ ಹೊರತಾಗಿಯೂ, ನಾವು ಇತರ ರಾಜ್ಯಗಳಿಗಿಂತ ಹೆಚ್ಚಿನ ವೇಗದಲ್ಲಿ ಪ್ರಗತಿ ಸಾಧಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಪ್ರಮಾಣ ವಚನಕ್ಕೂ ಮುನ್ನವೇ ಬೇಡಿಕೆ
ಮೋದಿ ನೇತೃತ್ವದ ಸರ್ಕಾರ ಇನ್ನು ಪ್ರಮಾಣ ವಚನವನ್ನೇ ಸ್ವೀಕರಿಸರಲಿಲ್ಲ. ಅದಾಗಲೇ ಜೆಡಿಯು ನಾಯಕ ನಿತೀಶ್ ಕುಮಾರ್ ತಮ್ಮ ಬೇಡಿಕೆಯನ್ನು ಒಂದು ಕಾರ್ಯಕ್ರಮದಲ್ಲಿ ಇಟ್ಟಿದ್ದರು. ಪ್ರಮಾಣ ವಚನ ಕಾರ್ಯಕ್ರಮಕ್ಕೂ ಮುನ್ನವೇ ನಡೆದ ಎನ್‌ಡಿಎ ಮೈತ್ರಿ ಕೂಟದ ಸಭೆಯಲ್ಲಿ ನಿತೀಶ್ ತಮ್ಮ ರಾಜ್ಯದ ಪ್ರಸ್ತಾವನೆಯನ್ನು ಮೋದಿ ಮುಂದೆ ಇಟ್ಟಿದ್ದರು. ಅಲ್ಲದೆ ನೀವು ಬೇರೆ ಯಾವುದರ ಬಗ್ಗೆಯೂ ಚಿಂತಿಸುವ ಅಗತ್ಯವಿಲ್ಲ ಪ್ರಧಾನಿ ಹುದ್ದೆ ನಿಮ್ಮದು ಎಂದು ತಿಳಿಸಿದ್ದರು.

ಕೇಂದ್ರ ಬಜೆಟ್‌ಗೂ ಮುನ್ನವೇ ಮೋದಿ ಸರ್ಕಾರಕ್ಕೆ ನಿತೀಶ್ ಕುಮಾರ್ ಇಟ್ಟಿರುವ ಬೇಡಿಕೆ ಹೊಸ ತಲೆ ನೋವನ್ನು ತಂದಿರುವುದರಲ್ಲಿ ಎರಡು ಮಾತಿಲ್ಲ. ಜೆಡಿಯು ನಿಜವಾಗಿಯೂ ಕಿಂಗ್‌ಮೇಕರ್ ಆಗಿದ್ದರೆ ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಮತ್ತು ರಾಜ್ಯಕ್ಕೂ ಸ್ಥಾನಮಾನ ನೀಡಬೇಕು ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ. ಮೋದಿ ಸರ್ಕಾರ ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡುವುದೇ? ಇಲ್ಲವೇ ಎಂಬುದೇ ಕುತೂಹಲ ಮೂಡಿಸಿದೆ.
ಟಿಡಿಪಿಗೆ ಬಂಪರ್?
ಇನ್ನು ಇನ್ನೊಂದು ಮೈತ್ರಿ ಪಕ್ಷ ಟಿಡಿಪಿಗೂ ಈ ಬಾರಿಯ ಬಜೆಟ್‌ನಲ್ಲಿ ಬಂಪರ್ ಹೊಡೆಯುವ ಸಾಧ್ಯತೆ ಇದೆ. ಇದೀಗ ಕೇಂದ್ರ ಸರ್ಕಾರ ಆಂಧ್ರ ಪ್ರದೇಶಕ್ಕೆ 60 ಸಾವಿರ ಕೋಟಿ ರೂ. ಹಣ ನೀಡುವ ಸಾಧ್ಯತೆ ಇದೆ. ಈ ಹಣದ ಸಹಾಯದಿಂದ ಆಂಧ್ರಪ್ರದೇಶವನ್ನು ತೈಲ ಸಂಸ್ಕರಣಾಗಾರ ಮತ್ತು ಪೆಟ್ರೋಕೆಮಿಕಲ್ ಹಬ್ ಆಗಿ ಅಭಿವೃದ್ಧಿಪಡಿಸಲು ನಾಯ್ಡು ಸರ್ಕಾರ ಪ್ಲ್ಯಾನ್ ಮಾಡಿಕೊಂಡಿದೆ.












Click it and Unblock the Notifications