• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡ್ಯಾನಿಶ್ ಆಲಿ ರಾಜೀನಾಮೆ ಹಿಂದಿನ ಪಕ್ಕಾ 'ಪ್ಲ್ಯಾನ್ಡ್' ರಾಜಕೀಯವೇ ಬೇರೆ

|

ದೇವೇಗೌಡರ ಆಪ್ತ ವಲಯದಲ್ಲಿದ್ದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಅಲಿ, ಜೆಡಿಎಸ್ ತೊರೆದು ಬಹುಜನ ಸಮಾಜಪಕ್ಷ ಸೇರ್ಪಡೆಯಾಗಿರುವುದು ಏಕಾಏಕಿ ಬೆಳವಣಿಗೆಯಲ್ಲ ಎನ್ನುವ ಸುದ್ದಿ ಹರಿದಾಡುತ್ತಿದೆ.

ಸಮ್ಮಿಶ್ರ ಸರಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ನಂತರ ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗಿದ್ದ ಆಲಿ, ಸಮನ್ವಯ ಸಮಿತಿಯ ಸದಸ್ಯರೂ ಆಗಿದ್ದರು. ಜೆಡಿಎಸ್ ಮತ್ತು ಕಾಂಗ್ರೆಸ್ಸಿನ ರಾಜ್ಯಾಧ್ಯಕ್ಷರಿಗೂ ಸಮಿತಿಯಲ್ಲಿ ಸ್ಥಾನ ಸಿಗದೇ ಇದ್ದರೂ ಡ್ಯಾನಿಶ್ ಆಲಿ ಸಮಿತಿಯ ಸದಸ್ಯರಾಗಿದ್ದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್-ಬಿಎಸ್ಪಿ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡಿತ್ತು. ದೇವೇಗೌಡರು ಮತ್ತು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ನಡುವೆ ದೆಹಲಿಯಲ್ಲಿ ಸೀಟು ಹೊಂದಾಣಿಕೆ ಸಂಬಂಧ "ಅಂದು" ನಡೆದಿದ್ದ ಮಾತುಕತೆಯ ಆಧಾರದ ಮೇಲೆಯೇ ಡ್ಯಾನಿಶ್ ಆಲಿ ರಾಜೀನಾಮೆ ನೀಡಿದ್ದು ಎನ್ನುವ ಮಾಹಿತಿ ಲಭ್ಯವಾಗಿದೆ.

ಬಿಗ್ ಬ್ರೇಕಿಂಗ್: ಜೆಡಿಎಸ್‌ಗೆ ಕೈಕೊಟ್ಟು ದಿಢೀರ್ ಬಿಎಸ್ಪಿ ಸೇರಿದ ಡ್ಯಾನಿಶ್ ಅಲಿ

ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ದೇವೇಗೌಡ್ರು ರಾಜ್ಯ ರಾಜಕಾರಣದೆಡೆಗೆ ಹೆಚ್ಚು ಗಮನ ಹರಿಸುತ್ತಿರುವುದರಿಂದ ಪಕ್ಷದ ರಾಷ್ಟ್ರೀಯ ಚಟುವಟಿಕೆಗಳಲ್ಲಿ ಡ್ಯಾನಿಶ್ ಅಲಿ ಅವರೇ ಹೆಚ್ಚು ಸಕ್ರಿಯರಾಗಿರುತ್ತಿದ್ದರು. ಅರುಣಾಚಲ ಪ್ರದೇಶದಲ್ಲೂ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿರುವುದರಿಂದ, ಅಲ್ಲೂ ಗ್ರೌಂಡ್ ವರ್ಕ್ ಅನ್ನು ಡ್ಯಾನಿಶ್ ಆಲಿ ಮಾಡಿದ್ದರು. ಡ್ಯಾನಿಶ್ ಆಲಿ ರಾಜೀನಾಮೆ ಹಿಂದಿನ ಪಕ್ಕಾ 'ಪ್ಲ್ಯಾನ್ಡ್' ರಾಜಕೀಯವೇ ಬೇರೆ

ಕೊಳ್ಳೇಗಾಲ ಕ್ಷೇತ್ರದಿಂದ ಬಿಎಸ್ಪಿಯ ಎನ್ ಮಹೇಶ್ ಜಯಗಳಿಸಿ, ಸರಕಾರದಲ್ಲಿ ಮಂತ್ರಿಯೂ ಆಗಿದ್ದರು

ಕೊಳ್ಳೇಗಾಲ ಕ್ಷೇತ್ರದಿಂದ ಬಿಎಸ್ಪಿಯ ಎನ್ ಮಹೇಶ್ ಜಯಗಳಿಸಿ, ಸರಕಾರದಲ್ಲಿ ಮಂತ್ರಿಯೂ ಆಗಿದ್ದರು

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿತ್ತು. ಕೊಳ್ಳೇಗಾಲ ಕ್ಷೇತ್ರದಿಂದ ಬಿಎಸ್ಪಿಯ ಎನ್ ಮಹೇಶ್ ಜಯಗಳಿಸಿ, ಕುಮಾರಸ್ವಾಮಿ ಸರಕಾರದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಖಾತೆಯ ಮಂತ್ರಿಯೂ ಆಗಿದ್ದರು. ಆನಂತರ ಮಹೇಶ್ ರಾಜೀನಾಮೆ ನೀಡಿದ್ದರು. ಮುಂದಿನ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸಲು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿರುವುದಾಗಿ ಮಹೇಶ್ ಹೇಳಿದ್ದರು.

ಬೆಂಗಳೂರು ದಕ್ಷಿಣ ಯಾರಿಗೂ ಬೇಡ: ತಲೆಮೇಲೆ 'ಕೈ'ಹೊತ್ತು ಕೂತ ಕಾಂಗ್ರೆಸ್?

ದೇವೇಗೌಡ್ರು ಮತ್ತು ಮಾಯಾವತಿ ನಡುವಿನ ಮಾತುಕತೆ

ದೇವೇಗೌಡ್ರು ಮತ್ತು ಮಾಯಾವತಿ ನಡುವಿನ ಮಾತುಕತೆ

ಕಳೆದ ಅಸೆಂಬ್ಲಿ ಚುನಾವಣೆಯ ವೇಳೆ ಮೈತ್ರಿ ಸಂಬಂಧ ದೇವೇಗೌಡ್ರು ಮತ್ತು ಮಾಯಾವತಿ ನಡುವಿನ ಮಾತುಕತೆಯ ಪ್ರಕಾರ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದ ಯಾವುದಾದರೂ ಒಂದು ಸ್ಥಾನವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡಬೇಕು ಎನ್ನುವ ಒಪ್ಪಂದವಾಗಿತ್ತು. ಆದರೆ, ಜೆಡಿಎಸ್ ಪಕ್ಷಕ್ಕೆ ಅಲ್ಲಿ ನೆಲೆ ಇಲ್ಲದೇ ಇರುವುದರಿಂದ, ಜೆಡಿಎಸ್ ಚಿಹ್ನೆಯ ಬದಲಾಗಿ ಬಿಎಸ್ಪಿ ಅಭ್ಯರ್ಥಿಯಾಗಿ ಟಿಕೆಟ್ ಕೊಡುವುದಕ್ಕೆ ಮಾಯಾವತಿ ಒಪ್ಪಿಕೊಂಡಿದ್ದರು.

ದೇವೇಗೌಡರು ಯಾರ ಹೆಸರನ್ನು ಸೂಚಿಸುತ್ತಾರೋ ಅವರಿಗೆ ಬಿಎಸ್ಪಿ ಟಿಕೆಟ್

ದೇವೇಗೌಡರು ಯಾರ ಹೆಸರನ್ನು ಸೂಚಿಸುತ್ತಾರೋ ಅವರಿಗೆ ಬಿಎಸ್ಪಿ ಟಿಕೆಟ್

ದೇವೇಗೌಡರು ಯಾರ ಹೆಸರನ್ನು ಸೂಚಿಸುತ್ತಾರೋ ಅವರಿಗೆ ಬಿಎಸ್ಪಿ ಟಿಕೆಟ್ ನೀಡುವ ಭರವಸೆಯನ್ನು ಮಾಯಾವತಿ ಅಂದು ಗೌಡ್ರಿಗೆ ನೀಡಿದ್ದರು. ಅದರಂತೆಯೇ, ಡ್ಯಾನಿಶ್ ಆಲಿ ಜೆಡಿಎಸ್ ಪಕ್ಷಕ್ಕೆ ಈಗ ರಾಜೀನಾಮೆ ನೀಡಿದ್ದು. ದೇವೇಗೌಡರ ಆಶೀರ್ವಾದವನ್ನು ಪಡೆದುಕೊಂಡೇ, ಬಿಎಸ್ಪಿ ಸೇರುವುದಾಗಿ ಡ್ಯಾನಿಶ್ ಆಲಿ ಹೇಳಿದ್ದಾರೆ. ಇದೆಲ್ಲವೂ, ಸುಮಾರು ಒಂದು ವರ್ಷದ ಹಿಂದೆಯೇ ಮಾಡಿಕೊಂಡಿರುವ ಒಪ್ಪಂದ ಎನ್ನುವ ಮಾತು ಚಾಲ್ತಿಯಲ್ಲಿದೆ.

ಎಸ್ಪಿ ಮತ್ತು ಬಿಎಸ್ಪಿ ಈಗಾಗಲೇ ಸೀಟು ಹೊಂದಾಣಿಕೆ ಮಾಡಿಕೊಂಡಿದೆ

ಎಸ್ಪಿ ಮತ್ತು ಬಿಎಸ್ಪಿ ಈಗಾಗಲೇ ಸೀಟು ಹೊಂದಾಣಿಕೆ ಮಾಡಿಕೊಂಡಿದೆ

ಜೆಡಿಎಸ್ ಪಕ್ಷದ ಹೆಸರಿನಲ್ಲಿ ಸೀಟು ಬಿಟ್ಟುಕೊಟ್ಟರೆ ಸುಮ್ಮನೆ ಒಂದು ಸೀಟು ಕಳೆದುಕೊಳ್ಳುವ ಭೀತಿ ಇರುವುದರಿಂದ ಡ್ಯಾನಿಶ್, ಬಿಎಸ್ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಎಸ್ಪಿ ಮತ್ತು ಬಿಎಸ್ಪಿ ಈಗಾಗಲೇ ಸೀಟು ಹೊಂದಾಣಿಕೆ ಮಾಡಿಕೊಂಡಿದ್ದು ಇಬ್ಬರೂ ತಲಾ 37ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದಾರೆ. ಹೀಗಿರುವಾಗ, ಅದರಲ್ಲೂ ಒಂದು ಸೀಟ್ ಅನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟು ಕೊಟ್ಟರೆ ಹಿನ್ನಡೆಯಾಗಲಿದೆ ಎನ್ನುವ ಕಾರಣಕ್ಕಾಗಿ ಈ ಒಪ್ಪಂದ. ಮೂಲಗಳ ಪ್ರಕಾರ, ಡ್ಯಾನಿಶ್ ಆಲಿ ಮೀರಠ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಯಿದೆ.

ನನ್ನ ಜನ್ಮಭೂಮಿ, ನನ್ನ ಕರ್ಮಭೂಮಿ

ನನ್ನ ಜನ್ಮಭೂಮಿ, ನನ್ನ ಕರ್ಮಭೂಮಿ

ಉತ್ತರಪ್ರದೇಶದಲ್ಲಿ ಜೆಡಿಎಸ್ ಪ್ರಬಲ ನೆಲೆ ಹೊಂದಿಲ್ಲ. ನನ್ನ ಎಲ್ಲ ಪ್ರಯತ್ನಗಳ ಹೊರತಾಗಿಯೂ ನನ್ನ ಜನ್ಮಭೂಮಿ, ನನ್ನ ಕರ್ಮಭೂಮಿಯಲ್ಲಿ ಜೆಡಿಎಸ್ ಅನ್ನು ಮೇಲೆತ್ತಲು ಸಾಧ್ಯವಾಗಲಿಲ್ಲ. ಇಂದಿನ ಸಂದರ್ಭದಲ್ಲಿ ಸಂವಿಧಾನಕ್ಕೆ ಬೆದರಿಕೆ ಇದೆ. ಹೀಗಾಗಿ ನಮ್ಮ ಶಕ್ತಿಯನ್ನು ಪ್ರಬಲ ನಾಯಕತ್ವದೊಂದಿಗೆ ಬಳಸಿಕೊಳ್ಳುವುದು ಅಗತ್ಯವಾಗಿದೆ ಎಂದು ಡ್ಯಾನಿಶ್ ಅಲಿ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Danish Ali, the well-known General Secretary of the Janata Dal Secular has quit the party and joined Mayawati's Bahujan Samaj Party. It is expected that he will contest the Lok Sabha elections from Uttar Pradesh on a BSP ticket.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more