ಎಕೆ-47 ಸಮೇತ ಕರ್ತವ್ಯನಿರತ ಭಾರತೀಯ ಯೋಧ ನಾಪತ್ತೆ
ಬಾರಾಮುಲ್ಲಾ (ಜಮ್ಮು ಮತ್ತು ಕಾಶ್ಮೀರ), ಜುಲೈ 06 : ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಗಂಟ್ ಮುಲ್ಲಾದಲ್ಲಿ ಕರ್ತವ್ಯನಿರತನಾಗಿದ್ದ ಭಾರತೀಯ ಯೋಧನೊಬ್ಬ ಗುರುವಾರ ನಾಪತ್ತೆಯಾಗಿದ್ದಾನೆ.
J&K: Territorial Army jawan Zahoor Thakur missing with a AK-47 from his camp in Baramulla's Gantmulla, Police has begun an investigation. pic.twitter.com/RMg928TNeF
— ANI (@ANI_news) July 6, 2017
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯ ನಿವಾಸಿ ಝಹಾರ್ ಠಾಕೂರ್ ಎನ್ನುವ ಯೋಧ ನಾಪತ್ತೆಯಾಗಿದ್ದಾರೆ. ಎಕೆ-47 ಗನ್ ಜತೆಗೆ ಕರ್ತವ್ಯ ನಿರತರಾಗಿದ್ದ ವೇಳೆಯೇ ಯೋಧ ನಾಪತ್ತೆಯಾಗಿದ್ದು, ನಾಪತ್ತೆ ಹಿಂದಿನ ಉದ್ದೇಶ ಏನು ಎಂಬುದು ಇನ್ನು ತಿಳಿದು ಬಂದಿಲ್ಲ.

ಭದ್ರತಾ ಪಡೆಗಳು ನಾಪತ್ತೆಯಾಗಿರುವ ಯೋಧನ ಹುಡುಕಾಟದಲ್ಲಿ ತೊಡಗಿವೆ. ಹಾಗೂ ಇಲ್ಲಿನ ಪೊಲೀಸ್ ಹಾಗೂ ಗುಪ್ತಚರ ಇಲಾಖೆ ಯೋಧನ ಪತ್ತೆಗೆ ಕಾರ್ಯಚರಣೆ ನಡೆಸಿದೆ.












Click it and Unblock the Notifications