ಮೋದಿಗಾಗಿ ಯಾತ್ರೆ ಕೈಗೊಂಡ ಪತ್ನಿ
ಊಂಜಾ,ಗುಜರಾತ್, ಏ.11: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಲಿ ಎಂದು ಅವರ ಘೋಷಿತಾ ಪತ್ನಿ ಜಶೋದಾಬೆನ್ ಅವರು ಛಾರ್ ಧಮ್ ಯಾತ್ರೆ ಕೈಗೊಂಡಿದ್ದಾರೆ. ನನಗೂ ಒಬ್ಬ ಹೆಂಡತಿ ಇದ್ದಾಳೆ ಎಂದು ಮೋದಿ ಅವರು ನಾಮಪ್ತ್ರ ಸಲ್ಲಿಕೆ ವೇಳೆಯಲ್ಲಿ ಘೋಷಿಸುತ್ತಿದ್ದಂತೆ ಮಾಧ್ಯಮಗಳು ಮೋದಿ ಪತ್ನಿಗಾಗಿ ಹುಡುಕಾಟ ನಡೆಸಿದ್ದರು. ಕೊನೆಗೆ ಮೋದಿ ಪತ್ನಿ ಯಾತ್ರೆ ಕೈಗೊಂಡಿರುವ ವಿಷಯ ಇದೀಗ ಹೊರ ಬಿದ್ದಿದೆ.
ವಡೋದರಾದಲ್ಲಿ ಬುಧವಾರ ತಮ್ಮ ನಾಮಪತ್ರದೊಂದಿಗೆ ಸಲ್ಲಿಸಿದ ಅಫಿಡವಿಟ್ ನಲ್ಲಿ ಮೊದಲ ಬಾರಿಗೆ ಮೋದಿ ತಾವು ಮದುವೆಯಾಗಿರುವುದಾಗಿ ಒಪ್ಪಿಕೊಂಡ ನಂತರ, ಮೋದಿ ಮದ್ವೆ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಮಾಧ್ಯಮಗಳು ಜಶೋದಾಬೇನ್ ಬೆನ್ನು ಬಿದ್ದಿದ್ದವು. ಆದರೆ ಮೋದಿ ಪತ್ನಿಯ ಹೆಸರು ಬಹಿರಂಗಪಡಿಸುತ್ತಿದ್ದಂತೆ ಜಶೋದಾಬೇನ್ ನಾಪತ್ತೆಯಾಗಿದ್ದು, ಕುಟುಂಬದ ಸದಸ್ಯರು ಅವರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎನ್ನಲಾಗುತ್ತಿದೆ. ಇನ್ನು ಕೆಲವರು ಮಾಧ್ಯಮದಿಂದ ತಪ್ಪಿಸಿಕೊಳ್ಳಲು ಜಶೋದಾಬೇನ್ ಅವರನ್ನು 40 ಮಹಿಳೆಯರೊಂದಿಗೆ 'ಚಾರ್ ಧಾಮ್' ತೀರ್ಥಯಾತ್ರೆಗೆ ಕಳುಹಿಸಲಾಗಿದೆ ಎಂದು ಹೇಳುತ್ತಿದ್ದಾರೆ.

ನಾನು ಅವರಿಂದ(ಮೋದಿಯಿಂದ) ಏನನ್ನು ಬಯಸುವುದಿಲ್ಲ. ಆದರೆ ಅವರು ನನ್ನನ್ನು ಪತ್ನಿ ಎಂದು ಒಂದು ಸಲ ಒಪ್ಪಿಕೊಂಡರೆ ಸಾಕು ಎಂದು ಕೆಲಸದಿಂದ ನಿವೃತ್ತಿ ಹೊಂದುತ್ತಿರುವ ಸಂದರ್ಭದಲ್ಲಿ 62 ವರ್ಷದ ಜಶೋದಾಬೇನ್ ತಮ್ಮ ಸಹೋದ್ಯೋಗಿಗಳೊಂದಿಗೆ ಹೇಳಿಕೊಂಡಿದ್ದರು ಎನ್ನಲಾಗುತ್ತಿದೆ. ಅಲ್ಲದೆ ಇತ್ತೀಚಿಗೆ ಮೋದಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ ನಂತರ ಅವರು ಪ್ರಧಾನಿಯಾಗಲಿ ಎಂದು ಹಾರೈಸಿ ಕೆಲವು ತಿಂಗಳಿಂದ ಅನ್ನ ತಿನ್ನುವುದನ್ನು ಮತ್ತು ಚಪ್ಪಲಿ ಹಾಕುವುದನ್ನೇ ಬಿಟ್ಟಿದ್ದಾರೆ ಎಂದು ಅವರ ಹತ್ತಿರದ ಸಂಬಂಧಿಗಳು ಹೇಳುತ್ತಿದ್ದಾರೆ.
'ಅವಳ ಪ್ರಾರ್ಥನೆಯ ಫಲದಿಂದಲೋ ಏನೋ ಈಗ ಮೋದಿ ಬಹಿರಂಗವಾಗಿ ಜಶೋದಾಬೇನ್ ತಮ್ಮ ಪತ್ನಿ ಎಂದು ಒಪ್ಪಿಕೊಂಡಿದ್ದಾರೆ. ಇದರಿಂದ ನಮಗೆ ತುಂಬಾ ಸಂತೋಷವಾಗಿದೆ. ಈಗ ನಾವೇಲ್ಲರೂ ಸೇರಿ ಮೋದಿ ಪ್ರಧಾನಿಯಾಗಲಿ ಎಂದು ಪ್ರಾರ್ಥಿಸುತ್ತಿದ್ದೇವೆ' ಎಂದು ಜಶೋದಾಬೇನ್ ಅವರ ಕಿರಿಯ ಸಹೋದರ ಕಮಲೇಶ್ ಮೋದಿ ಹೇಳಿದ್ದಾರೆ. ಕಮಲೇಶ್ ಮೋದಿ ಅವರು ಉಂಜಾದಲ್ಲಿ ತರಕಾರಿ ಅಂಗಡಿ ನಡೆಸುತ್ತಿದ್ದಾರೆ.
45 ವರ್ಷಗಳ ಹಿಂದೆ ಮೋದಿ ಜಶೋದಾಬೇನ್ ಅವರನ್ನು ಬಿಟ್ಟು ಹೋದ ನಂತರ ತಮ್ಮ ಸಹೋದರಿ ಯಾವತ್ತು ಮರು ಮದುವೆಯ ಬಗ್ಗೆ ಯೋಚಿಸಲಿಲ್ಲ ಎಂದು ಕಮಲೇಶ್ ಮೋದಿ ತಿಳಿಸಿದ್ದಾರೆ.












Click it and Unblock the Notifications