ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಥುರಾದಿಂದ ಮೋದಿ ಸರ್ಕಾರ್ ವರ್ಷಾಚರಣೆ ಶುರು

By Mahesh
|
Google Oneindia Kannada News

ಮಥುರಾ, ಮೇ.25: ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ.26ಕ್ಕೆ ಒಂದು ವರ್ಷವಾಗಲಿದೆ. ಈ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ 'ಜನ ಕಲ್ಯಾಣ ಪರ್ವ' ಹೆಸರಿನಲ್ಲಿ 200ಕ್ಕೂ ಅಧಿಕ ಸಮಾವೇಶಗಳನ್ನು ಬಿಜೆಪಿ ಆಯೋಜಿಸುತ್ತಿದೆ. ಮಥುರಾದಿಂದ ಬಿಜೆಪಿ ಸಂಭ್ರಮಾಚರಣೆ ಸೋಮವಾರದಿಂದಲೇ ಶುರುವಾಗಿದೆ.

ದೀನ್ ದಯಾಳ್ ಉಪಾಧ್ಯಾಯ್ ಅವರ ಜನ್ಮಸ್ಥಳ ಮಥುರಾದ ನಾಗ್ಲಾ ಚಂದ್ರಭಾನ್ ಗ್ರಾಮದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮೋದಿ ಅವರು ಮಾತನಾಡಲಿದ್ದಾರೆ.

ಮಥುರಾದಿಂದ ಅಧಿಕೃತವಾಗಿ ಚಾಲನೆ ಸಿಗಲಿರುವ ಜನ ಕಲ್ಯಾಣ ಪರ್ವ ಮುಂದೆ 200 ಸಮಾವೇಶ, 200 ಸುದ್ದಿಗೋಷ್ಠಿ, 5,000 ಸಾರ್ವಜನಿಕ ಸಭೆ, 500 ಪ್ರದರ್ಶನ ಮೇಳಗಳನ್ನು ಕಾಣಲಿದೆ.

ಮಥುರಾ ಸಮಾವೇಶ: ಮೋದಿ ಭೇಟಿ ಹಿನ್ನೆಲೆಯಲ್ಲಿ ಮಥುರಾದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಿದೆ. ಸುಮಾರು ಒಂದು ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ. 130 ದೇಶಗಳಲ್ಲಿ ಮೋದಿ ಭಾಷಣದ ನೇರ ಪ್ರಸಾರವಾಗಲಿದೆ. 022-4501 4501ಗೆ ಕರೆ ಮಾಡಿ ಮೋದಿ ಭಾಷಣ ಆಲಿಸಬಹುದು.

Jan Kalyan Parv : 200 rallies to mark 1 year of Modi government

ಘೋಷವಾಕ್ಯ: "ವರ್ಷ್‌ ಏಕ್‌, ಕಾಮ್‌ ಅನೇಕ್‌' (ವರ್ಷ ಒಂದು, ಕೆಲಸ ಹಲವು) ಮತ್ತು "ಮೋದಿ ಸರ್ಕಾರ್‌, ಕಾಮ್‌ ಲಗಾತಾರ್‌' (ಮೋದಿ ಸರ್ಕಾರ, ಕಾರ್ಯ ನಿರಂತರ) ಎಂಬ ಕಾರ್ಯಕ್ರಮದ ವೇಳೆ ದೀನ್‌ ದಯಾಳ್‌ ಉಪಾಧ್ಯಾಯ ಅವರ ಹೆಸರಿನಲ್ಲಿ ಹಲವು ಹೊಸ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸುವ ಸಾಧ್ಯತೆ ಇದೆ.

ಸರ್ಕಾರದ ಮೊದಲ ವರ್ಷಾಚರಣೆಗೆ ಬಿಜೆಪಿ ಈಗಾಗಲೇ "ವರ್ಷ್‌ ಏಕ್‌, ಕಾಮ್‌ ಅನೇಕ್‌' (ವರ್ಷ ಒಂದು, ಕೆಲಸ ಹಲವು) ಮತ್ತು "ಮೋದಿ ಸರ್ಕಾರ್‌, ಕಾಮ್‌ ಲಗಾತಾರ್‌' (ಮೋದಿ ಸರ್ಕಾರ, ಕಾರ್ಯ ನಿರಂತರ) ಎಂಬ ಘೋಷವಾಕ್ಯಗಳನ್ನು ಸಿದ್ಧಪಡಿಸಿದೆ.

ಸರ್ಕಾರ ಬಡವರ ವಿರೋಧಿ, ರೈತ ವಿರೋಧಿ ಎಂಬ ವಿಪಕ್ಷಗಳ ಆಪಾದನೆಗೆ ಉತ್ತರ ನೀಡಲು ಮೋದಿ ಸಜ್ಜಾಗಿದ್ದು, ಈ ಸಮಾವೇಶಗಳ ಸಂದರ್ಭದಲ್ಲಿ ಅನೇಕ ಜನಪರ ಯೋಜನೆಗಳನ್ನು ಘೋಷಿಸುವ ಸಾಧ್ಯತೆ ನಿಚ್ಚಳವಾಗಿದೆ.

ಕೇಂದ್ರ ಸಚಿವರು, ಮುಖ್ಯಮಂತ್ರಿ, ಸಚಿವರು, ಶಾಸಕರು ಸೇರಿದಂತೆ ತಳಮಟ್ಟದ ಕಾರ್ಯಕರ್ತರು ಎಲ್ಲರೂ ಉತ್ಸಾಹದಿಂದ ಪಾಲ್ಗೊಳ್ಳಲು ಸಜ್ಜಾಗಿದ್ದಾರೆ. 5000ಕ್ಕೂ ಜನಸಭೆ ಇದರಲ್ಲಿ ಮುಖ್ಯವಾಗಿದೆ ಎಂದು ಬಿಜೆಪಿ ಹಿರಿಯ ನಾಯಕ, ಕೇಂದ್ರ ಸಚಿವ ಅನಂತ್ ಕುಮಾರ್ ಹೇಳಿದ್ದಾರೆ. ಈ ಕಾರ್ಯಕ್ರಮದ ವಿಡಿಯೋ ಲಿಂಕ್ ಇಲ್ಲಿದೆ.

English summary
The BJP will celebrate Prime Minister Narendra Modi’s one year in office with a week-long campaign called “Jan Kalyan Parv” or “People’s Welfare Festival” aimed at countering a flood of charges that its policies are ‘pro-corporate’ and ‘anti-poor.’
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X