ಪೋಷಕರ ಭೇಟಿಗೆ ಹೋಗುತ್ತಿದ್ದ ಪೊಲೀಸ್‌ ಉಗ್ರರ ಗುಂಡಿಗೆ ಬಲಿ: ಇಲಾಖೆಯಿಂದಲೇ ಮಾಹಿತಿ ಸೋರಿಕೆ?

ಶ್ರೀನಗರ, ಅಕ್ಟೋಬರ್ 29: ಜಮ್ಮು ಮತ್ತು ಕಾಶ್ಮೀರದ ಸಿಐಡಿ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಬ್ ಇನ್‌ಸ್ಪೆಕ್ಟರ್‌ನನ್ನು ಉಗ್ರರು ಪುಲ್ವಾಮಾ ಜಿಲ್ಲೆಯಲ್ಲಿ ಭಾನುವಾರ ಮಧ್ಯಾಹ್ನ ಅಪಹರಿಸಿ ಹತ್ಯೆ ಮಾಡಿದ್ದಾರೆ.

ಪೊಲೀಸ್ ಅಧಿಕಾರಿ ಇಮ್ತಿಯಾಜ್ ಅಹ್ಮದ್ ಮಿರ್ (30) ಮನೆಗೆ ತೆರಳುತ್ತಿದ್ದಾಗ ವಹಿಬಗ್‌ ಎಂಬಲ್ಲಿ ಉಗ್ರರು ಅವರ ವಾಹನವನ್ನು ಅಡ್ಡಗಟ್ಟಿದ್ದಾರೆ. ಬಳಿಕ ಸಮೀಪದ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಗುಂಡಿಕ್ಕಿ ಕೊಂದಿದ್ದಾರೆ. ರುಶ್ಮಿ ನಲ್ಲಾ ಪ್ರದೇಶದಲ್ಲಿ ಸಂಜೆ ವೇಳೆಗೆ ಗುಂಡೇಟಿನಿಂದ ರಕ್ತಸಿಕ್ತಗೊಂಡಿದ್ದ ಅವರ ಮೃತದೇಹ ಪತ್ತೆಯಾಗಿದೆ.

ಪುಲ್ವಾಮಾ ಜಿಲ್ಲೆಯ ಸೊಂತಾಬಗ್ ಎಂಬ ಹಳ್ಳಿಯಲ್ಲಿರುವ ತಮ್ಮ ಪೋಷಕರ ಭೇಟಿಗೆ ಅವರು ಹೊರಟಿದ್ದರು. ಕಳೆದ ಕೆಲವು ದಿನಗಳಿಂದ ಉಗ್ರರು ಅವರನ್ನು ಗುರಿಯಾಗಿರಿಸಿಕೊಂಡಿರುವುದು ತಿಳಿದಿತ್ತು. ಹೀಗಾಗಿ ತಾವು ಕೆಲಸ ಮಾಡುತ್ತಿದ್ದ ಸ್ಥಳದಿಂದ ಅಲ್ಲಿಗೆ ಹೋಗದಂತೆ ತಡೆಯಲು ಪ್ರಯತ್ನಿಸಿದ್ದಾಗಿ ಮಿರ್ ಅವರ ಜತೆಗಿದ್ದ ಮೇಲಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೆಲವು ವಾರಗಳ ಹಿಂದೆ ಪೊಲೀಸರಿಗೆ ಬೆದರಿಕೆ ಪತ್ರ ರವಾನಿಸಿದ್ದ ಜೈಶ್ ಎ ಮುಹಮ್ಮದ್ ಸಂಘಟನೆಯ ಉಗ್ರರು, ಕೆಲಸ ಬಿಡಬೇಕು ಇಲ್ಲವೇ ಸಾವನ್ನು ಎದುರಿಸಬೇಕು ಎಂದು ಎಚ್ಚರಿಕೆ ನೀಡಿದ್ದರು.

ಮಿರ್ ಮನೆಗೆ ತೆರಳುವ ವಿಚಾರ ಉಗ್ರರಿಗೆ ತಿಳಿದಿದ್ದು ಹೇಗೆ ಎಂಬ ಪ್ರಶ್ನೆ ಉದ್ಭವಿಸಿದ್ದು, ಇಲಾಖೆಯಲ್ಲಿಯೇ ಮಾಹಿತಿ ಸೋರಿಕೆಯಾಗಿರಬೇಕು ಎಂಬ ಅನುಮಾನ ವ್ಯಕ್ತವಾಗಿದೆ.

ಉಗ್ರರು ಕಂಡು ಹಿಡಿಯಲಾರರು!

ಉಗ್ರರು ಕಂಡು ಹಿಡಿಯಲಾರರು!

ಆದರೆ, ಉಗ್ರರ ಕಣ್ತಪ್ಪಿಸಲು ಮಿರ್, ತಮ್ಮ ಗಡ್ಡವನ್ನು ಸಂಪೂರ್ಣವಾಗಿ ತೆಗೆದಿದ್ದರು. ಅಲ್ಲದೆ ಇಲಾಖೆಯ ವಾಹನದ ಬದಲು ಖಾಸಗಿ ವಾಹನದಲ್ಲಿ ಹೊರಟಿದ್ದರು. 'ಈಗ ಉಗ್ರರು ನನ್ನನ್ನು ಕಂಡು ಹಿಡಿಯುವುದು ಸಾಧ್ಯವೇ ಇಲ್ಲ' ಎಂದು ತಮ್ಮ ಮೇಲಧಿಕಾರಿ ಬಳಿ ಹೇಳಿಕೊಂಡಿದ್ದರು. ಅಲ್ಲಿ ಆಡಿದ ಆ ಮಾತುಗಳೇ ಕೊನೆ. ಪೋಷಕರ ಜೊತೆ ಕೆಲ ಸಮಯ ಖುಷಿಯಿಂದ ಕಳೆಯಲು ಹೊರಟಿದ್ದ ಮಿರ್ ಅವರಿಗೆ ಆ ಅದೃಷ್ಟ ಇರಲಿಲ್ಲ.

Array

ಎಚ್ಚರಿಕೆಗೆ ಕಿವಿಗೊಡಲಿಲ್ಲ

'ಉಗ್ರರು ದಾಳಿ ಮಾಡುವ ಸಾಧ್ಯತೆ ಇರುವುದರಿಂದ ಹೋಗುವುದು ಬೇಡ ಎಂದು ಅವರಿಗೆ ಹಲವು ಬಾರಿ ಹೇಳಿದ್ದೆ. ಆದರೆ, ಅವರು ತಂದೆ ತಾಯಿಯನ್ನು ಭೇಟಿ ಮಾಡಲೇಬೇಕು ಎಂದು ನಿರ್ಧರಿಸಿದ್ದರು. ತುಂಬಾ ಸಮಯದಿಂದ ಅವರನ್ನು ನೋಡಿರದ ಕಾರಣ, ಹೋಗಲೇಬೇಕೆಂಬ ಆಸೆ ಅವರಲ್ಲಿತ್ತು' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏಕೈಕ ಮಗ

ಏಕೈಕ ಮಗ

ನಿವೃತ್ತ ಪೊಲೀಸ್ ಅಧಿಕಾರಿಯ ಏಕೈಕ ಮಗನಾಗಿದ್ದ ಮಿರ್, 2010ರಲ್ಲಿ ಸಬ್ ಇನ್‌ಸ್ಪೆಕ್ಟರ್ ಆಗಿದ್ದರು. ದಕ್ಷಿಣ ಕಾಶ್ಮೀರದ ಗಂಡೇರ್ಬಾಯಿ ಜಿಲ್ಲೆಯಲ್ಲಿ ಐದು ವರ್ಷ ಕೆಲಸ ಮಾಡಿದ್ದ ಅವರು, ಕಳೆದ ವರ್ಷ ಕುಲ್ಗಾಂ ಜಿಲ್ಲೆಗೆ ವರ್ಗವಾವಣೆಗೊಂಡಿದ್ದರು. ಮಾರ್ಚ್‌ನಲ್ಲಿ ಸಿಐಡಿ ಇಲಾಖೆಗೆ ಸೇರಿಕೊಂಡಿದ್ದರು.

Array

ಮಾಹಿತಿ ಸೋರಿಕೆಯಾಗಿದ್ದು ಹೇಗೆ?

ವಹಿಬುಗ್‌ನಲ್ಲಿ ಅವರನ್ನು ಅಪಹರಿಸಿ ಕೊಲ್ಲಲು ಕೆಲವು ಉಗ್ರರು ಕಾದು ಕುಳಿತಿದ್ದರು ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು, ಮಿರ್ ಅವರು ಊರಿನತ್ತ ಪ್ರಯಾಣಿಸುತ್ತಿರುವ ಮಾಹಿತಿ ಉಗ್ರರ ಗುಂಪಿಗೆ ಹೇಗೆ ಸೋರಿಕೆಯಾಯಿತು ಎಂಬುದನ್ನು ಪತ್ತೆಹಚ್ಚಲು ತನಿಖೆಯನ್ನು ತೀವ್ರಗೊಳಿಸಲಾಗಿದೆ.

ಮತ್ತೆ ಮತ್ತೆ ದಾಳಿ

ಕಾಶ್ಮೀರ ಕಣಿವೆಯಲ್ಲಿ ಹಲವು ದಿನಗಳಿಂದ ಉಗ್ರರು ಪೊಲೀಸರನ್ನು ಗುರಿಯನ್ನಾಗಿಸಿಕೊಂಡಿದ್ದಾರೆ. ಸೆಪ್ಟೆಂಬರ್ 21ರಂದು ಹಿಜ್ಬುಲ್ ಮುಜಾಹಿದ್ದೀನ್ ಸಂಗಟನೆಯ ಉಗ್ರರು ಮೂವರು ಪೊಲೀಸರನ್ನು ಅಪಹರಿಸಿ ಕೊಲೆ ಮಾಡಿದ್ದರು. ಇದರಿಂದ ಪೊಲೀಸ್ ಇಲಾಖೆಯಲ್ಲಿ ತೀವ್ರ ಕಳವಳ ಉಂಟಾಗಿತ್ತು.

Array

ಪಿಡಿಪಿ ಕಾರ್ಯಕರ್ತನ ಹತ್ಯೆ

ಭಾನುವಾರ ನಡೆದ ಇನ್ನೊಂದು ದಾಳಿಯಲ್ಲಿ ಶ್ರೀನಗರದ ಗ್ಯಾಂಗ್‌ಬಾಕ್ ಪ್ರದೇಶದಲ್ಲಿ ಉಗ್ರರು ರಾಜಕೀಯ ಪಕ್ಷ ಪಿಡಿಪಿಯ ಕಾರ್ಯಕರ್ತನೊಬ್ಬನನ್ನು ಹತ್ಯೆ ಮಾಡಿದ್ದಾರೆ. ಮೊಹಮ್ಮದ್ ಅಮಿನ್ ಭಟ್ ಎಂಬಾತನ ಮೇಲೆ ಅಪರಿಚಿತ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಅವರನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+