ಕಾಶ್ಮೀರ: ಅಪಹೃತ ಪೊಲೀಸ್ ಕುಟುಂಬಸ್ಥರನ್ನು ಬಿಡುಗಡೆ ಮಾಡಿದ ಉಗ್ರರು
ಶೋಪಿಯಾನ್, ಸೆಪ್ಟೆಂಬರ್ 01: ದಕ್ಷಿಣ ಕಾಶ್ಮೀರದಲ್ಲಿ ಐವರು ಪೊಲೀಸ್ ಕುಟುಂಬಸ್ಥರನ್ನು ಉಗ್ರರು ಬಂಧಿಸಿದ ಪ್ರಕರಣ ಸುಖಾಂತ್ಯ ಕಂಡಿದೆ.
NIA(ರಾಷ್ಟ್ರೀಯ ತನಿಖಾದಳ) ಅಧಿಕಾರಿಗಳು ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮೋಸ್ಟ್ ವಾಂಟೆಂಡ್ ಭಯೋತ್ಪಾದಕ ಸಯ್ಯದ್ ಸಲಾಲುದ್ದಿ ನ ಮಗ ಶಕೀಲ್ ನನ್ನು ಬಂಧಿಸಿದ್ದದರು. ಇದಕ್ಕೆ ಪ್ರತೀಕಾರ ಎಂಬಂತೆ ಭಯೋತ್ಪಾದಕರು ಐವರು ಪೊಲೀಸ್ ಕುಟುಂಬಸ್ಥರನ್ನು ಅಪಹರಿಸಿದ್ದರು.

ಶುಕ್ರವಾರ ರಾತ್ರಿ ಐವರನ್ನೂ ಬಿಡುಗಡೆ ಮಾಡಲಾಗಿದ್ದು ಪ್ರಕರಣ ಸುಖಾಂತ್ಯ ಕಂಡಿದೆ. ಶೋಪಿಯಾನ್, ಕುಲ್ಗಾಂ, ಅನಂತನಾಗ್, ಅವಂತಿಪೊರ ಎಂಬಲ್ಲಿಂದ ಪೊಲೀಸ್ ಕುಟುಂಬಸ್ಥರನ್ನೇ ಆಯ್ದು ಅಪಹರಿಸಲಾಗಿತ್ತು.
ಆಗಸ್ಟ್ 29 ರಂದು ಶೋಪಿಯಾನ್ ನಲ್ಲಿ ನಡೆದ ಉಗ್ರ ದಾಳಿಯಲ್ಲಿ ನಾಲ್ವರು ಪೊಲೀಸರು ಹುತಾತ್ಮರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಯನ್ನು ಹತ್ತಿಕ್ಕಲು ಭಾರತ ಗಂಭೀರ ಕ್ರಮಗಳನ್ನು ಕೈಗೊಂಡಿದ್ದು, ಈ ವರ್ಷ ಸಾಕಷ್ಟು ಭಯೋತ್ಪಾದಕರನ್ನು ಸದೆಬಡಯಲಾಗಿದೆ.
ಇದರಿಂದ ಉಗ್ರ ಚಟುವಟಿಕೆಗಳಿಗೆ ಧಕ್ಕೆಯಾಗುತ್ತಿರುವುದರಿದ ಇದೀಗ ಉಗ್ರರ ಕಣ್ಣು ಕಾಶ್ಮೀರಿ ಪೊಲೀಸರ ಮೇಲೆ ಬಿದ್ದಿದೆ. ಆ.29ರಂದು ನಾಲ್ವರು ಪೊಲೀಸರನ್ನು ಬಲಿತೆಗೆದುಕೊಂಡ ಭಯೋತ್ಪಾದಕ ಕೃತ್ಯದ ಹೊಣೆಯನ್ನು ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆ ಹೊತ್ತುಕೊಂಡಿತ್ತು.












Click it and Unblock the Notifications