ಜಮ್ಮು-ಕಾಶ್ಮೀರದಲ್ಲಿ ಉಗ್ರರ ನಂಟು ಹೊಂದಿದ್ದ ಐವರು ಸರ್ಕಾರಿ ಅಧಿಕಾರಿಗಳು ವಜಾ
ಶ್ರೀನಗರ್, ಅಕ್ಟೋಬರ್ 15: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕತೆ ಹತ್ತಿಕ್ಕುವ ನಿಟ್ಟಿನಲ್ಲಿ ಶಿಸ್ತುಕ್ರಮವೊಂದನ್ನು ಜಾರಿಗೊಳಿಸಲಾಗಿದೆ. ಉಗ್ರರ ಜೊತೆಗೆ ನಂಟು ಹೊಂದಿದ್ದ ಐವರು ಸರ್ಕಾರಿ ಉದ್ಯೋಗಿಗಳನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
ನಾರ್ಕೋ-ಟೆರರ್ ಸಿಂಡಿಕೇಟ್ ಅನ್ನು ನಡೆಸುವುದು ಮತ್ತು ಭಯೋತ್ಪಾದಕ ದಾಳಿಗಳನ್ನು ನಡೆಸಲು ನಿಷೇಧಿತ ಸಂಘಟನೆಗಳಿಗೆ ಸಹಾಯ ಮಾಡಿದ ಐವರು ಸರ್ಕಾರಿ ನೌಕರರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಸಂವಿಧಾನದ ನಿಬಂಧನೆ 311(2)(C) ಅಡಿಯಲ್ಲಿ ಸರ್ಕಾರಿ ನೌಕರರನ್ನು ಸೇವೆಯಿಂದ ತೆಗೆದು ಹಾಕಲಾಗಿದೆ.
ಜಮ್ಮು ಮತ್ತು ಕಾಶ್ಮೀರ ಸರ್ಕಾರವು ವ್ಯವಸ್ಥೆಯೊಳಗಿನ ಭಯೋತ್ಪಾದಕ ಅಂಶಗಳನ್ನು ಪತ್ತೆಹಚ್ಚುವುದು ಮತ್ತು ಹೊರಹಾಕಲು ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತದೆ. ಈ ಹಿಂದಿನ ಆಡಳಿತದಲ್ಲಿ ಇಂತಹ ಹಲವಾರು ಭಯೋತ್ಪಾದಕ ಘಟಕಗಳಿಗೆ ಹಿಂಬಾಗಿಲ ಮೂಲಕ ಉದ್ಯೋಗಗಳನ್ನು ಒದಗಿಸಲಾಗಿತ್ತು ಎಂದು ದೂಷಿಸಲಾಗುತ್ತಿದೆ. ಹಾಗಿದ್ದರೆ ಭಯೋತ್ಪಾದಕ ಸಂಘಟನೆಗಳ ಜೊತೆಗೆ ಸಂಪರ್ಕ ಇಟ್ಟುಕೊಂಡಿದ್ದ ಹಾಗೂ ಸೇವೆಯಿಂದ ವಜಾಗೊಳಿಸುವ ಆ ಉದ್ಯೋಗಿಗಳು ಯಾರು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.
ಕಾನ್ಸ್ ಟೇಬಲ್ ತನ್ವೀರ್ ಸಲೀಂ ದಾರ್:
ಪೊಲೀಸ್ ಕಾನ್ಸ್ ಟೇಬಲ್ ಆಗಿರುವ ತನ್ವೀರ್ ಸಲೀಂ ದಾರ್ 1991ರಲ್ಲಿ ನೇಮಕಗೊಂಡನು. ಜುಲೈ 2002ರಲ್ಲಿ ತನ್ವೀರ್ ಬೆಟಾಲಿಯನ್ ಪ್ರಧಾನ ಕಛೇರಿಯಲ್ಲಿ 'ಆರ್ಮರ್' ಆಗಿ ತಮ್ಮ ಪೋಸ್ಟಿಂಗ್ ಅನ್ನು ನಿರ್ವಹಿಸಿದನು. ಭಯೋತ್ಪಾದಕರ ಬಂದೂಕುಗಳನ್ನು ವಿವೇಚನೆಯಿಂದ ಸರಿಪಡಿಸಲು ಮತ್ತು ಅವರಿಗೆ ಮದ್ದುಗುಂಡುಗಳನ್ನು ವ್ಯವಸ್ಥೆ ಮಾಡಲು ತನ್ವೀರ್ ಈ ಪೋಸ್ಟಿಂಗ್ ಅನ್ನು ನಿರ್ವಹಿಸುತ್ತಿದ್ದನು ಎಂದು ತನ್ವೀರ್ ಪ್ರಕರಣದ ತನಿಖೆಯಿಂದ ತಿಳಿದು ಬಂದಿದೆ.

ಶ್ರೀನಗರದ ಲಷ್ಕರ್-ಎ-ತೊಯ್ಬಾದ ಪ್ರಮುಖ ಭಯೋತ್ಪಾದಕ ಕಮಾಂಡರ್ ಮತ್ತು ಲಾಜಿಸ್ಟಿಕ್ಸ್ ಪೂರೈಕೆದಾರ ಎಂದು ಹೆಸರಾಗಿದ್ದಾನೆ. ಶ್ರೀನಗರದಲ್ಲಿ ನಡೆದ ಸರಣಿ ಭಯೋತ್ಪಾದನಾ ದಾಳಿಯಲ್ಲಿ ತನ್ವೀರ್ ಭಾಗಿಯಾಗಿದ್ದ ಮತ್ತು ಎಂಎಲ್‌ಸಿ ಜಾವೈದ್ ಶಲ್ಲಾ ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಂಬುದು ನಂತರದ ತನಿಖೆಯಿಂದ ಗೊತ್ತಾಗಿದೆ.
ಅಫಕ್ ಅಹ್ಮದ್ ವಾನಿ:
ಅಫಾಕ್ ಬಾರಾಮುಲ್ಲಾ ಸೆಂಟ್ರಲ್ ಕೋಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದನು.
ಇಫ್ತಿಕಾರ್ ಅಂದ್ರಾಬಿ:
ಇಫ್ತಿಕಾರ್ ಅನ್ನು ತೋಟದ ಮೇಲ್ವಿಚಾರಕರನ್ನಾಗಿ ನೇಮಿಸಲಾಯಿತು.
ಇರ್ಷಾದ್ ಅಹ್ಮದ್ ಖಾನ್:
ಇರ್ಷಾದ್ ಅವರನ್ನು 2010 ರಲ್ಲಿ ಜಲ ಶಕ್ತಿ ಇಲಾಖೆಯಲ್ಲಿ ಆರ್ಡರ್ಲಿಯಾಗಿ ನೇಮಿಸಲಾಯಿತು
ಅಬ್ದುಲ್ ಮೊಮಿನ್ ಪೀರ್:
ಅಬ್ದುಲ್ ಅವರನ್ನು 2014 ರಲ್ಲಿ PHE ಉಪವಿಭಾಗದಲ್ಲಿ ಸಹಾಯಕ ಲೈನ್‌ಮ್ಯಾನ್ ಆಗಿ ನೇಮಿಸಲಾಯಿತು.












Click it and Unblock the Notifications