ಸೈನಿಕರ ಸಾವಿಗೆ ಪ್ರತೀಕಾರ: ನಾಲ್ವರು ಭಯೋತ್ಪಾದಕರ ಹತ್ಯೆ
ಬಂಡೀಪೊರ, ಜೂನ್ 18: ಜಮ್ಮು ಕಾಶ್ಮೀರದ ಬಂಡಿಪೊರದಲ್ಲಿ ಭಾರತೀಯ ಸೈನಿಕರು ಮತ್ತು ಭಯೋತ್ಪಾದಕರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರರನ್ನು ಹೊಡೆದುಹಾಕುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ.
ಜೂನ್ 14 ರಂದು ಭಾರತೀಯ ಸೈನಿಕ ಔರಂಗಜೇಬ್ ಎಂಬುವವರ ಗುಂಡು ತುಂಬಿದ ಮೃತದೇಹ ಪತ್ತೆಯಾಗಿತ್ತು. ಅವರನ್ನು ಅಪಹರಿಸಿ, ಚಿತ್ರಹಿಂಸೆ ನೀಡಿ ಕೊಲ್ಲಲಾಗಿತ್ತು. ಈ ಘಟನೆಯ ನಂತರ ಮಾತನಾಡಿದ್ದ ಔರಂಗಜೇಬ್ ತಂದೆ, 'ನನ್ನ ಮಗನ ಸಾವಿಗೆ ಕಾರಣರಾದವರ ವಿರುದ್ದ 32 ಗಂಟೆಗಳೊಳಗೆ ಸೇಡು ತೀರಿಸಿಕೊಳ್ಳಿ' ಎಂದು ಆಕ್ರೋಶಭರಿತರಾಗಿ ಹೇಳಿದ್ದರು.

ಕೊನೆಗೂ ಭಾರತೀಯ ಸೇನೆ ಔರಂಗಜೇಬ್ ಸಾವಿಗೆ ಸೇಡು ತೀರಿಸಿಕೊಂಡಿದೆ. ಭಯೋತ್ಪಾದಕರನ್ನು ಹೊಡೆದುರುಳಿಸುವುದಕ್ಕೆ ಮತ್ತು ಗಡಿಯಲ್ಲಿ ಹಿಂಸೆ, ಅಮಾಯಕರ ಹತ್ಯೆಯನ್ನು ತಡೆಯುವುದಕ್ಕೆ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬಹುದೋ, ಕೈಗೊಳ್ಳಿ ಎಂದು ಈಗಾಗಲೇ ಗ್ರಹ ಸಚಿವಾಲಯ ಸೇನೆಗೆ ತಿಳಿಸಿತ್ತು.












Click it and Unblock the Notifications