ಲಂಕಾಸುರನಿಗೆ ಜೈ ಎಂದ ತಮಿಳರು: ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ದಿನವೇ ಟ್ರೆಂಡ್ ಆದ ರಾವಣ!

ಜೈ ಶ್ರೀರಾಮ್.. ಜೈ ಶ್ರೀರಾಮ್.. ಜೈ ಶ್ರೀರಾಮ್.. ರಾಜಾರಾಮ್.. ಹಿಂಗೆ ಎಲ್ಲೇ ಕೇಳಿ, ಬರೀ ರಾಮನಾಮ ಜಪವೇ ಕಿವಿಗೆ ಬೀಳುತ್ತಿದೆ. ಶ್ರೀರಾಮನ ಭಕ್ತರು ಇಂದು ಸಂಭ್ರಮಿಸಿದ್ದು ತಮ್ಮ ನೆಚ್ಚಿನ ದೇವರಿಗೆ ಜಗತ್ತಿನಾದ್ಯಂತ ನಮಿಸಿದ್ದಾರೆ. ಆದ್ರೆ ಹೀಗಿದ್ದಾಗಲೇ ತಮಿಳುನಾಡು ಜನರು ಮಾತ್ರ ರಾವಣನ ಧ್ಯಾನ ಮಾಡುತ್ತಿದ್ದಾರೆ. ಹೀಗಾಗಿ ಲಂಕಾಸುರ ರಾವಣ ಎಲ್ಲೆಲ್ಲೂ ಟ್ರೆಂಡ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎದ್ದಿದೆ.

ಸುಮಾರು 500 ವರ್ಷಗಳ ಬಳಿಕ ಶತಕೋಟಿ ಹಿಂದೂಗಳ ಕನಸು ನೆರವೇರಿದೆ. ಅದರಲ್ಲೂ ಅಯೋಧ್ಯೆ ಭೂಮಿಯಲ್ಲಿ ಶ್ರೀರಾಮನ ಭವ್ಯ ಮಂದಿರ ನಿರ್ಮಾಣ ಮಾಡಬೇಕು ಎನ್ನುವ, ಕೋಟಿ ಕೋಟಿ ಭಕ್ತರ ಕನಸು ಇಂದು ಈಡೇರಿದೆ. ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರು, ಈ ಮಹತ್ವದ ಕಾರ್ಯಕ್ರಮದ ಭಾಗವಾಗಿದ್ದಾರೆ. ಹೀಗಿದ್ದಾಗ ತಮಿಳುನಾಡಿನ ಜನ ಮಾತ್ರ ಶ್ರೀರಾಮನ ಶತ್ರು, ಲಂಕಾಸುರ ರಾವಣನ ಧ್ಯಾನ ಮಾಡುತ್ತಿದ್ದಾರೆ. ಈ ಮೂಲಕ ರಾವಣ ಹೆಸರು ಫುಲ್ ಟ್ರೆಂಡ್ ಆಗಿದೆ.

JaiRavanaFromTamilnadu Is On Trend At Ram Mandir Inauguration Day

ರಾಮನ ಜೊತೆ ರಾವಣನೂ ಟ್ರೆಂಡ್!

ಎಲ್ಲಿ ಕೇಳಿದರೂ ಶ್ರೀರಾಮನ ಹೆಸರೇ ಕಿವಿಗೆ ಬೀಳುತ್ತಿದೆ. ಈ ವೇಳೆ, ಇಡೀ ದೇಶಕ್ಕೆ ದೇಶವೇ ರಾಮನ ಹೆಸರಲ್ಲಿ ಮಿಂದು ಹೋಗಿದೆ. 'ರಾಮ ಬಂದರೆ ದೀಪಾವಳಿ' ಅಂತಾ ಇಂದು ದೀಪ ಬೆಳಗಿಸಿ ಸಂಭ್ರಮಿಸಲು ಜನ ಕೂಡ ಸಿದ್ಧತೆ ನಡೆಸಿದ್ದಾರೆ. ಅಯೋಧ್ಯೆಯಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಕಣ್ತುಂಬಿಕೊಳ್ಳಲು ಜನ ಕಾದಿದ್ದರು. ಇದೀಗ ಅದೆಲ್ಲವೂ ಅದ್ಧೂರಿಯಾಗಿ ನಡೆದು ಹೋಗಿದೆ. ಆದರೆ ಇದೇ ಸಮಯದಲ್ಲಿ ತಮಿಳುನಾಡು ಜನರು ಮಾತ್ರ ಲಂಕಾಸುರ ರಾವಣನ ಸ್ಮರಣೆ ಮಾಡುತ್ತಿದ್ದಾರೆ. ಯಾಕೆ ಗೊತ್ತೆ?

'ತಮಿಳರ ಹೆಮ್ಮೆ ರಾವಣ!'

ಅಷ್ಕಕ್ಕೂ ತಮಿಳುನಾಡಿಗೂ & ರಾವಣನಿಗೂ ಅತಿ ಹತ್ತಿರದ ಸಂಬಂಧವು ಇದೆ ರಾವಣನು ತಮಿಳುನಾಡು ಭೂ ಭಾಗವನ್ನೂ ಆಳಿದ್ದ ಎನ್ನುವ ವಾದ ಕೂಡ ಇದೆ. ಹೀಗಿದ್ದಾಗ ಇದೇ ತಮಿಳುನಾಡು ಈಗ ಶ್ರೀರಾಮ ಮಂದಿರ ಉದ್ಘಾಟನೆ ದಿನವೇ ರಾವಣನ ಸ್ಮರಣೆ ಮಾಡ್ತಿದೆ. ಇಷ್ಟೇ ಅಲ್ಲದೆ, ದ್ರಾವಿಡ ಪರ ಹೋರಾಟಗಳನ್ನು ಕೂಡ ಸ್ಮರಣೆ ಮಾಡುತ್ತಾ ಟ್ವೀಟ್‌ಗಳನ್ನು ಮಾಡುತ್ತಿದ್ದಾರೆ ತಮಿಳುನಾಡಿನ ಜನ.

ರಾವಣನ ಜೊತೆ ಪೆರಿಯಾರ್, ಅಂಬೇಡ್ಕರ್ ಸ್ಮರಣೆ!

ಇನ್ನು ದ್ರಾವಿಡ ಚಳುವಳಿಯ ತವರು ಎಂದೇ ಕರೆಯುವ ತಮಿಳುನಾಡಿನಲ್ಲಿ ಪೆರಿಯಾರ್ & ಡಾ.ಬಿಆರ್. ಅಂಬೇಡ್ಕರ್ ಅವರನ್ನೂ ಜನರು ಸ್ಮರಿಸುತ್ತಿದ್ದಾರೆ. ಈ ಮೂಲಕ, ಶ್ರೀರಾಮ ಮಂದಿರ ಉದ್ಘಾಟನೆ ದಿನ ಹೊಸ ಚರ್ಚೆ ಶುರುವಾಗಿದೆ. ಇನ್ನು ಈ ಟ್ವೀಟ್‌ಗಳಿಗೆ ಇದೀಗ, ಪರ & ವಿರೋಧದ ಮಾತುಗಳು ಕೂಡ ಕೇಳಿಬರುತ್ತಿವೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.

ಜಗತ್ತಿನಾದ್ಯಂತ ಭಕ್ತರಿಂದ ಶ್ರೀರಾಮ ಸ್ಮರಣೆ

ಭಾರತ ಮಾತ್ರವಲ್ಲದೆ ಜಗತ್ತಿನ ವಿವಿಧೆಡೆ ಕೂಡ ಶ್ರೀರಾಮನ ಜಪ ಮಾಡುತ್ತಿದ್ದಾರೆ ಭಕ್ತರು. ಹಲವು ದಿನದಿಂದ ಅಮೆರಿಕದಲ್ಲಿ ವಿಶೇಷ ಕಾರ್ಯಕ್ರಮ ಹಾಗೂ ಕಾರ್ ರ್‍ಯಾಲಿಗಳನ್ನು ಭಕ್ತರು ಆಯೋಜನೆ ಮಾಡಿದ್ದರು. ಈ ಮೂಲಕ ಶ್ರೀರಾಮ ಮಂದಿರ ಉದ್ಘಾಟನೆಯ ಸಂಭ್ರಮವನ್ನು ಆರಂಭಿಸಿದ್ದರು. ಇದೀಗ ಭರ್ಜರಿಯಾಗಿ ಶ್ರೀರಾಮ ದೇಗುಲ ಉದ್ಘಾಟನೆ ಆಗಿದ್ದು, ಇದೇ ವೇಳೆ ವಿಶಿಷ್ಟವಾಗಿ ಗೌರವ ಸಲ್ಲಿಸಿದ್ದಾರೆ ಶ್ರೀರಾಮನ ಭಕ್ತರು. ಅಮೆರಿಕದ ದೇಗುಲದಲ್ಲಿ ಶ್ರೀರಾಮನ ಜಪ ಮಾಡಿದ್ದಾರೆ ಭಕ್ತರು.

ಒಟ್ನಲ್ಲಿ ಜಗತ್ತಿನಾದ್ಯಂತ ಈಗ ಶ್ರೀರಾಮ ನಾಮವೇ ಕೇಳಿಬರುತ್ತಿದೆ. ಅದ್ರಲ್ಲೂ ಅಯೋಧ್ಯೆಯ ಭೂಮಿಯಲ್ಲಿ ಹಬ್ಬವೇ ಶುರುವಾಗಿದೆ. ಪ್ರಧಾನಿ ಮೋದಿ ಕೂಡ ಈ ಸಂಭ್ರಮದ ಭಾಗವಾಗಿ ಶ್ರೀರಾಮನಿಗೆ ನಮಿಸಿದ್ದಾರೆ. ಮತ್ತೊಂದು ಕಡೆ ಇದೇ ಸಮಯದಲ್ಲಿ ಹೊಸ ಚರ್ಚೆ ಕೂಡ ಶುರುವಾಗಿದ್ದು, ತಮಿಳುನಾಡಿನ ಜನ ರಾವಣನ ಧ್ಯಾನ ಮಾಡುತ್ತಿದ್ದಾರೆ. 'ಹಾಗೇ ನಮ್ಮ ಹೆಮ್ಮೆ ರಾವಣ' ಎಂದು ತಮಿಳುನಾಡು ಜನಗಳು ಹೇಳುತ್ತಿರುವುದು ಇದೀಗ ಟ್ವಿಟ್ಟರ್‌ನಲ್ಲಿ ಹೊಸ ಟ್ರೆಂಡ್ ಹುಟ್ಟುಹಾಕಿದೆ. ಹೀಗಾಗಿ ಇದೆಲ್ಲಾ ಎಲ್ಲಿಗೆ ಬಂದು ನಿಲ್ಲುತ್ತೆ? ಅನ್ನೋದನ್ನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+