ಅತ್ಯಾಚಾರ: ರಾಜಸ್ಥಾನದ ಕಾಂಗ್ರೆಸ್ ಸಚಿವ ಅರೆಸ್ಟ್

ಕೆಲಸ ಕೊಡಿಸುವುದಾಗಿ ಪುಸಲಾಯಿಸಿ ಸೆಪ್ಟೆಂಬರ್ 11ರಂದು ಸಚಿವ ಬಾಬುಲಾಲ್ ತಮ್ಮ ಅಧಿಕೃತ ನಿವಾಸಕ್ಕೆ ಕರೆಸಿಕೊಂಡು ಅತ್ಯಾಚಾರವೆಸಗಿದ್ದರು. ಜತೆಗೆ ತಮ್ಮ ಮೇಲೆ ಹಲ್ಲೆಯನ್ನೂ ನಡೆಸಿದ್ದರು ಎಂದು 35 ವರ್ಷದ ಮಹಿಳೆಯೊಬ್ಬರು ಸೆ. 17ರಂದು ಸೊಡಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಸಿದ್ದರು. ಅ. 8ರಂದು ಭಾರತ ಸರಕಾರದ ಸೂಚನೆಯಂತೆ ಪ್ರಕರಣ ಸಿಬಿಐಗೆ ವರ್ಗಾವಣೆಗೊಂಡಿತು.
ಮಹಿಳೆಯ ಹೇಳಿಕೆ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಅಧಿಕಾರಿಗಳು ನಾಗರ್ ಅವರನ್ನು ನಿನ್ನೆ ವಿಚಾರಣೆಗೊಳಪಡಿಸಿದರು. ಆ ವೇಳೆ, ಮಾಜಿ ಸಚಿವ ನಾಗರ್ ಸಮಂಜಸ ಉತ್ತರ ನೀಡದ ಹಿನ್ನೆಲೆಯಲ್ಲಿ ಸಿಬಿಐ ಅವರನ್ನು ತಕ್ಷಣ ತನ್ನ ಕಸ್ಟಡಿಗೆ ತೆಗೆದುಕೊಂಡು, ಬಂಧಿಸಿದ್ದಾರೆ.
ಆತ್ಯಾಚಾರದ ಆರೋಪ ಕೇಳಿಬರುತ್ತಿದ್ದಂತೆ ಕಳೆದ ತಿಂಗಳು ಪಕ್ಷದಿಂದ ನಾಗರ್ ಅವರನ್ನು ಕಾಂಗ್ರೆಸ್ ಅಮಾನತು ಮಾಡಿತ್ತು. ಖಾದಿ ಮತ್ತು ಗ್ರಾಮೀಣ ಕೈಗಾರಿಕೆ ಸಚಿವ ಸ್ಥಾನಕ್ಕೆ ನಾಗರ್ ರಾಜೀನಾಮೆ ನೀಡಿದ್ದರು.
ಈ ಹಿಂದೆಯೂ ಇಬ್ಬರು ಶಾಸಕರ ಉಚ್ಚಾಟನೆ:
ಕುಖ್ಯಾತ ಭನ್ವರಿ ದೇವಿ ಕೈಂಗಿಕ ಕಿರುಕುಳ ಮತ್ತು ಹತ್ಯೆ ಪ್ರಕರಣದಲ್ಲಿ 2011ರ ಡಿಸೆಂಬರ್ ನಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಶಾಸಕರಾದ ಮಲ್ಖಾನ್ ಸಿಂಗ್ ಮತ್ತು ಮಹಿಪಾಲ್ ಮದೇರನಾ ಅವರನ್ನು ಸಹ ಕಾಂಗ್ರೆಸ್ ಪಕ್ಷವು ಉಚ್ಛಾಟಿಸಿತ್ತು.












Click it and Unblock the Notifications