ಐತಿಹಾಸಿಕ ರೈತ ಪ್ರತಿಭಟನೆ ವೇಳೆ ಟ್ವಿಟ್ಟರ್‌ ಮೇಲೆ ಭಾರತದಿಂದ ಒತ್ತಡ: ಉದ್ಯೋಗಿಗಳ ಮನೆ ಮೇಲೆ ದಾಳಿ!

ನವದೆಹಲಿ, ಜೂನ್. 13: ಮೂರು ವಿವಾದಿತ ಕೃಷಿ ಕಾನೂನುಗಳ ವಿರುದ್ಧ ನಡೆಸುತ್ತಿದ್ದ ರೈತರ ಪ್ರತಿಭಟನೆಯ ವೇಳೆ "ದೇಶದಲ್ಲಿ ಟ್ವಿಟ್ಟರ್ ಬಂದ್ ಮಾಡುತ್ತೇವೆ.. ನಿಮ್ಮ ಉದ್ಯೋಗಿಗಳ ಮನೆಗಳ ಮೇಲೆ ದಾಳಿ ಮಾಡುತ್ತೇವೆ.. ನಿಮ್ಮ ಕಚೇರಿಗಳನ್ನು ಮುಚ್ಚುತ್ತೇವೆ.." ಎಂದು ಭಾರತದಿಂದ ಒತ್ತಡವಿತ್ತು ಎಂದು ಟ್ವಿಟರ್ ಸಹ ಸಂಸ್ಥಾಪ ಜಾಕ್ ಡಾರ್ಸಿ ಗಂಭೀರ ಆರೋಪ ಮಾಡಿದ್ದಾರೆ.

ರೈತರ ಪ್ರತಿಭಟನೆಗಳು ಮತ್ತು ಪ್ರತಿಭಟನೆಗೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಟೀಕೆಗಳನ್ನು ವ್ಯಕ್ತಪಡಿಸುವವರಿಗೆ ಸಂಬಂಧಿಸಿದ ಟ್ವಿಟರ್‌ ಖಾತೆಗಳನ್ನು ನಿರ್ಬಂಧಿಸಲು ಭಾರತದಿಂದ ಹಲವಾರು ವಿನಂತಿಗಳು ಬಂದಿದ್ದವು ಎಂದು ಹೇಳಿದ್ದಾರೆ. ಜಾಕ್ ಡಾರ್ಸಿ ಅವರ ಆರೋಪಕ್ಕೆ ಸರ್ಕಾರ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Jack Dorseys claim on pressure from India during farmers protest

ಆದರೆ, ಕಾಂಗ್ರೆಸ್‌ನ ವಿಭಾಗಗಳಾದ ಯೂತ್ ಕಾಂಗ್ರೆಸ್ ಮತ್ತು ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ, ಟ್ವಿಟರ್ ಸಹ ಸಂಸ್ಥಾಪ ಜಾಕ್ ಡಾರ್ಸಿ ಯೂಟ್ಯೂಬ್ ಚಾನೆಲ್ ಬ್ರೇಕಿಂಗ್ ಪಾಯಿಂಟ್ಸ್‌ಗೆ ನೀಡಿದ ಸಂದರ್ಶನದ ತುಣುಕುಗಳನ್ನು ಹಂಚಿಕೊಂಡಿದ್ದಾರೆ. ಹಲವು ಹೋರಾಟಗಾರರು,ಸಾಮಾಜಿಕ ಕಾರ್ಯಕರ್ತರು ಇದನ್ನು ಹಂಚಿಕೊಂಡಿದ್ದಾರೆ.

ಸಂದರ್ಶನದ ಸಮಯದಲ್ಲಿ, ವಿದೇಶಿ ಸರ್ಕಾರಗಳಿಂದ ಯಾವುದೇ ಒತ್ತಡವನ್ನು ಎದುರಿಸಿದ್ದೀರಾ ಎಂಬ ಪ್ರಶ್ನೆಗೆ ಇತ್ತರಿಸಿರುವ ಜಾಕ್ ಡಾರ್ಸಿ, " ಹೌದು, ಉದಾಹರಣೆಗೆ ಭಾರತದಲ್ಲಿ ರೈತರ ಪ್ರತಿಭಟನೆ ವೇಳೆ ಹಲವಾರು ವಿನಂತಿಗಳನ್ನು ಸ್ವೀಕರಿಸಿ ದೇಶಗಳಲ್ಲಿ ಒಂದಾಗಿದೆ. ನಿರ್ದಿಷ್ಟವಾಗಿ ಸರ್ಕಾರವನ್ನು ಟೀಕಿಸುವ ಪತ್ರಕರ್ತರು, ರೈತರ ಪ್ರತಿಭಟನೆಯ ಟ್ವೀಟ್‌ಗಳನ್ನು ಮುಚ್ಚಲು (ಬ್ಲಾಕ್) ಮಾಡಲು ಭಾರತ ಸರ್ಕಾರ ಟ್ವಿಟರ್‌ಗೆ ತಿಳಿಸಿದೆ" ಎಂದು ಹೇಳಿದ್ದಾರೆ.

Jack Dorseys claim on pressure from India during farmers protest

ಮುಂದುವರಿದು, "ಇದನ್ನು ಅನುಸರಿಸದಿದ್ದರೆ ಭಾರತದಲ್ಲಿ ಟ್ವಿಟರ್ ಅನ್ನು ಮುಚ್ಚುವುದಾಗಿ ಬೆದರಿಕೆ ಹಾಕಿದರು. ಟ್ವಿಟರ್ ಉದ್ಯೋಗಿಗಳ ಮನೆಗಳ ಮೇಲೆ ದಾಳಿ ಮಾಡುತ್ತೇವೆ ಎಂದರು, ದಾಳಿಯನ್ನು ಮಾಡಿದರು. ಮತ್ತೆ ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ!" ಎಂದು ಜಾಕ್ ಡಾರ್ಸೆ ಭಾರತದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ನವೆಂಬರ್ 2020 ರಿಂದ ದೇಶದಲ್ಲಿ ನಡೆದ ಐತಿಹಾಸಿಕ ರೈತ ಪ್ರತಿಭಟನೆಯಲ್ಲಿ ಸಾವಿರಾರು ರೈತರು ದೆಹಲಿ ಗಡಿ ಬಿಂದುಗಳಲ್ಲಿ ಧರಣಿ ಮಾಡಿದ್ದರು, ಇದರಲ್ಲಿ 750ಕ್ಕೂ ಹೆಚ್ಚು ರೈತರು ತಮ್ಮ ಜೀವ ಕಳೆದುಕೊಂಡರು. ಇದಾದ ನಂತರ ನವೆಂಬರ್ 2021 ರಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದರು.

ಪ್ರತಿಭಟನಾ ನಿರತ ರೈತರ ಮನವೊಲಿಸುವಲ್ಲಿ ವಿಫಲವಾಗಿರುವುದನ್ನು ಒಪ್ಪಿಕೊಂಡ ಪ್ರಧಾನಿ ನರೇಂದ್ರ ಮೋದಿ, ತಮ್ಮ ಪ್ರತಿಭಟನೆಯನ್ನು ಕೊನೆಗೊಳಿಸುವಂತೆ ರೈತರಿಗೆ ಮನವಿ ಮಾಡಿದರು. ತರುವಾಯ, ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ, ಮೂರು ಕಾನೂನುಗಳನ್ನು ಹಿಂತೆಗೆದುಕೊಳ್ಳಲಾಯಿತು.

ಜಾಕ್ ಡಾರ್ಸಿ ಪ್ರಕಾರ, ಟರ್ಕಿಯು ಭಾರತದಂತೆಯೇ ವರ್ತಿಸಿತು. ಟರ್ಕಿ ಸರ್ಕಾರ ಕೂಡ ಟ್ವಿಟರ್ ಅನ್ನು ಮುಚ್ಚುವುದಾಗಿ ಬೆದರಿಕೆ ಹಾಕಿತು, ಅದು ಆಗಾಗ್ಗೆ ಸರ್ಕಾರದೊಂದಿಗೆ ನ್ಯಾಯಾಲಯದ ಕದನಗಳಲ್ಲಿ ತೊಡಗಿಸಿಕೊಂಡಿದೆ ಮತ್ತು ಗೆದ್ದಿದೆ ಎಂದು ಹೇಳಿದ್ದಾರೆ.

ಯೂಟ್ಯೂಬ್ ಚಾನೆಲ್ ಬ್ರೇಕಿಂಗ್ ಪಾಯಿಂಟ್ಸ್‌ಗೆ ನೀಡಿದ ಸಂದರ್ಶನದಲ್ಲಿ ಜಾಕ್ ಡಾರ್ಸೆ ಅವರ ಹೇಳಿಕೆಯು ಗಮನ ಸೆಳೆದಿದೆ. ಅವರ ಆರೋಪಕ್ಕೆ ಸರ್ಕಾರ ಇನ್ನೂ ಪ್ರತಿಕ್ರಿಯಿಸದಿದ್ದರೂ, ಅಮ್ ಆದ್ಮಿ ಪಾರ್ಟಿ ಸೇರಿದಂತೆ ಹಲವಾರು ಟ್ವಿಟರ್ ಖಾತೆಗಳು ಅವರ ಹೇಳಿಕೆಯ ಕ್ಲಿಪ್ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡು ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+