Srinagar: ಅಪಾಯಕಾರಿ ಮಾದಕವಸ್ತು ಮಾರಾಟಗಾರನ ಬಂಧನ- ಆತನ ಬಳಿ ಸಿಕ್ಕಿದ್ದೇನು?
ಜಮ್ಮು ಮತ್ತು ಕಾಶ್ಮೀರದ ಪೂಂಛ್ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿ ಅಪಾಯಕಾರಿ ಮಾದಕವಸ್ತು ಮಾರಾಟಗಾರನನ್ನು ಬಂಧಿಸಿದ್ದು ಅಪಾರ ಪ್ರಮಾಣದ ಹೆರಾಯಿನ್, ನಗದು, ಮದ್ದು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಶ್ರೀನಗರ ಮಾರ್ಚ್ 2: ಅಪಾಯಕಾರಿ ಮಾದಕವಸ್ತು ಮಾರಾಟಗಾರನನ್ನು ಜಮ್ಮು ಮತ್ತು ಕಾಶ್ಮೀರದ ಪೂಂಛ್ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ. ಪ್ರಮುಖ ಮಾದಕವಸ್ತು ಮಾರಾಟಗಾರನ ಮನೆಯಿಂದ 7 ಕಿಲೋಗ್ರಾಂಗಳಷ್ಟು ಹೆರಾಯಿನ್, 2 ಕೋಟಿ ರೂಪಾಯಿ ನಗದು, ಬಂದೂಕುಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಪೂಂಛ್‌ನ ರಫಿ ಧನ ಅಲಿಯಾಸ್ ರಫಿ ಲಾಲಾ ಎಂಬ ಮಾದಕವಸ್ತು ವ್ಯಾಪಾರಿಯ ಮನೆಯಿಂದ ಭಾರೀ ಪ್ರಮಾಣದ ಹೆರಾಯಿನ್ ಮತ್ತು ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಚ್ಚಿನ ಅಪಾಯದ ಮಾದಕವಸ್ತು ಕಳ್ಳಸಾಗಣೆದಾರನಾಗಿ ಕಂಡುಬಂದ ರಫಿ ಧನ್‌ನನ್ನು ಸಾರ್ವಜನಿಕ ಸುರಕ್ಷತಾ ಕಾಯಿದೆ (ಪಿಎಸ್‌ಎ) ಯ ಪ್ರಕಾರ ಬಂಧಿಸಲಾಯಿತು. ಪೂಂಚ್‌ನಲ್ಲಿ ಈತ ಗಡಿ ನಿಯಂತ್ರಣ ರೇಖೆಯಿಂದ (ಎಲ್‌ಒಸಿ) ದೂರದಲ್ಲಿರುವ ನಿವಾಸವನ್ನು ಹೊಂದಿದ್ದಾರೆಂದು ತಿಳಿದು ಬಂದಿದೆ.
"ಇಂದು ಕೆಲವು ಮಾಹಿತಿಗಳ ಮೇರೆಗೆ ಇನ್‌ಸ್ಪೆಕ್ಟರ್ ಸುನೀಲ್ ಮತ್ತು ಸಿಆರ್‌ಪಿಎಫ್ ನೇತೃತ್ವದ ಪೂಂಚ್ ಪೊಲೀಸ್ ತಂಡವು ರಫಿ ಅವರ ಮನೆಯಲ್ಲಿ ಶೋಧ ನಡೆಸಿತು. ಶೋಧದ ಸಮಯದಲ್ಲಿ 7 ಕೆಜಿ ಹೆರಾಯಿನ್, ಸುಮಾರು 2 ಕೋಟಿ ರೂಪಾಯಿ ನಗದು ಮತ್ತು ಒಂದು ಮ್ಯಾಗಜೀನ್‌ನೊಂದಿಗೆ ಪಿಸ್ತೂಲ್, ಏಳು ಸುತ್ತಿನ ಎಸ್‌ಎಲ್‌ಆರ್ ಜೊತೆಗೆ ಹತ್ತು ಸುತ್ತುಗಳ ಎಸ್‌ಎಲ್‌ಆರ್ ವಶಪಡಿಸಿಕೊಳ್ಳಲಾಗಿದೆ,'' ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ಸಂಜೆಯವರೆಗೂ ಶೋಧಕಾರ್ಯ ಮುಂದುವರಿದಿದ್ದು, ಈ ಸಮಯದಲ್ಲಿ ಮ್ಯಾಜಿಸ್ಟ್ರೇಟ್ ಮತ್ತು ಪ್ರಮುಖ ನಿವಾಸಿಗಳು ಉಪಸ್ಥಿತರಿದ್ದರು.
"ಈ ಪ್ರಯತ್ನದಿಂದ ಪೂಂಛ್ ಪೋಲಿಸ್ ಮತ್ತು ಭದ್ರತಾ ಪಡೆಗಳು ಬೃಹತ್ ನಾರ್ಕೋ ಭಯೋತ್ಪಾದಕ ಘಟಕವನ್ನು ಭೇದಿಸಲು ಸಮರ್ಥವಾಗಿವೆ ಎಂದು ತೋರಿಸಿವೆ. ಮ್ಯಾಜಿಸ್ಟ್ರೇಟ್‌ಗಳು ಮತ್ತು ಪ್ರಮುಖ ನಾಗರಿಕರ ಸಮ್ಮುಖದಲ್ಲಿ ಇನ್ನೂ ಹುಡುಕಾಟಗಳು ನಡೆಯುತ್ತಿವೆ. ಪಂಜಾಬ್ ಮೂಲದ ಮಾದಕವಸ್ತು ಕಳ್ಳಸಾಗಣೆದಾರರೊಂದಿಗೆ ಈ ಮಾಡ್ಯೂಲ್‌ನ ನೆಕ್ಸಸ್ ತನಿಖೆ ನಡೆಸುತ್ತಿದೆ. ಈ ಕುರಿತು ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications