500, 1000 ರು. ನೋಟು ನಿಷೇಧ ಸರ್ಕಾರದ್ದು, ಆರ್ ಬಿಐನದ್ದಲ್ಲ!

Posted By: Chethan
Subscribe to Oneindia Kannada

ನವದೆಹಲಿ, ಜ. 10: ಕೇಂದ್ರ ಸರ್ಕಾರವು ಈವರೆಗೆ ಹೇಳುತ್ತಿದ್ದಂತೆ, ಐದು ನೂರು ಹಾಗೂ ಸಾವಿರ ಮುಖಬೆಲೆಯ ನೋಟುಗಳು ಅಮಾನ್ಯ ಮಾಡುವ ನಿರ್ಧಾರ ಆರ್ ಬಿಐನದ್ದೇ ಎಂಬ ವಿಚಾರಕ್ಕೆ ತದ್ವಿರುದ್ಧವಾದ ವಿವರಣೆಯನ್ನು ಖುದ್ದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿ ಐ) ಹೇಳಿರುವುದು ಅಚ್ಚರಿಗೆ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ, ಇದೇ ತಿಂಗಳ 20ರಂದು ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್, ಸಮಿತಿಯ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ. ಆ ವೇಳೆ, ಅವರಿಂದ ಮತ್ತಷ್ಟು ಕುತೂಹಲಕಾರಿ ವಿಚಾರಗಳು ಹೊರಬೀಳಬಹುದೆಂದು ನಿರೀಕ್ಷಿಸಲಾಗಿದೆ.

It was central governmet's suggestion to demonetise the notes: RBI

ಅಪನಗದೀಕರಣ ಪ್ರಕ್ರಿಯೆಯ ವಿಚಾರಣೆ ನಡೆಸುತ್ತಿರುವ ಸಂಸದೀಯ ಸಮಿತಿಯಾದ ಸಾರ್ವಜನಿಕ ಲೆಕ್ಕ ಸಮಿತಿಗೆ (ಪಿಎಸಿ) ಆರ್ ಬಿಐ ಕಳೆದ ತಿಂಗಳ 22ರಂದು ನೋಟು ನಿಷೇಧದ ಬಗ್ಗೆ ಏಳು ಪುಟಗಳ ವಿವರಣೆಯನ್ನು ನೀಡಿದೆ.

ಅದರಂತೆ, 2016ರ ನವೆಂಬರ್ 7ರಂದು ಕೇಂದ್ರ ಸರ್ಕಾರವು ನೋಟು ನಿಷೇಧದ ಪ್ರಸ್ತಾವನೆಯನ್ನು ಮುಂದಿಟ್ಟಿತ್ತು. ದೇಶಕ್ಕೆ ಪಿಡುಗಾಗಿ ಪರಿಣಮಿಸಿರುವ ಖೋಟಾ ನೋಟು, ಉಗ್ರರಿಗೆ ಸಿಗುತ್ತಿರುವ ಆರ್ಥಿಕ ಬೆಂಬಲ ಹಾಗೂ ಕಪ್ಪು ಹಣದ ನಿರ್ಮೂಲನೆ ದೊಡ್ಡ ಮುಖಬೆಲೆಯ ನೋಟುಗಳ ನಿಷೇಧವೇ ಬ್ರಹ್ಮಾಸ್ತ್ರ ಎಂದಿತ್ತು. ಹಾಗಾಗಿ, 500 ಹಾಗೂ 1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಬೇಕೆಂದು ಆರ್ ಬಿಐಗೆ ಕೇಂದ್ರ ಸರ್ಕಾರವೇ ಸಲಹೆ ನೀಡಿತ್ತು ಎಂದು ಆರ್ ಬಿಐ ತಿಳಿಸಿದೆ.

ತನ್ನ ಈ ಆಲೋಚನೆಗೆ ಸಮರ್ಥನೆಯನ್ನೂ ನೀಡಿದ್ದ ಕೇಂದ್ರ ಸರ್ಕಾರ, ನೋಟು ನಿಷೇಧದಿಂದ ಕಪ್ಪು ಹಣವು ನಿಯಂತ್ರಣಗೊಂಡು ದೇಶದ ಅಭಿವೃದ್ಧಿಗೆ ಪೂರಕವಾದ ಆರ್ಥಿಕ ವಾತಾವರಣ ಸೃಷ್ಟಿಯಾಗುತ್ತದೆ ಎಂದು ತಿಳಿಸಿತ್ತು ಎಂದು ಆರ್ ಬಿಐ ಹೇಳಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In its submission to a Parliamentary panel late last month, the RBI, agreeing with the Government’s rationale behind the move, has made it clear that it was the Government which “advised” it to do so. ಕೇಂದ್ರ ಸರ್ಕಾರವು ಈವರೆಗೆ ಹೇಳುತ್ತಿದ್ದಂತೆ, ಐದು ನೂರು ಹಾಗೂ ಸಾವಿರ ಮುಖಬೆಲೆಯ ನೋಟುಗಳು ಅಮಾನ್ಯ ಮಾಡುವ ನಿರ್ಧಾರ ಆರ್ ಬಿಐನದ್ದೇ ಎಂಬ ವಿಚಾರಕ್ಕೆ ತದ್ವಿರುದ್ಧವಾದ ವಿವರಣೆಯನ್ನು ಖುದ್ದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿ ಐ) ಹೇಳಿದೆ.
Please Wait while comments are loading...