ಫೆ. 15ಕ್ಕೆ ಇಸ್ರೊದಿಂದ 104 ಉಪಗ್ರಹಗಳ ಮೆಗಾ ಉಡಾವಣೆ

Subscribe to Oneindia Kannada

ನವದೆಹಲಿ, ಜನವರಿ 31: ಫೆಬ್ರವರಿ 15ರಂದು ಇತಿಹಾಸ ಸೃಷ್ಟಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಜ್ಜಾಗಿದೆ. ಒಂದೇ ಏಟಿಗೆ 104 ಉಪಗ್ರಹಗಳನ್ನು ಉಡಾಯಿಸಲಿದ್ದು ಯಾವ ದೇಶವೂ ಮಾಡದ ಐತಿಹಾಸಿಕ ಸಾಧನೆ ಮಾಡಲಿದೆ.

ಫೆಬ್ರವರಿ 15ರಂದು ಶ್ರೀಹರಿಕೋಟಾದ ಉಪಗ್ರಹ ಉಡಾವಣಾ ಕೇಂದ್ರದಿಂದ 104 ಉಪಗ್ರಹಗಳನ್ನು ಹೊತ್ತ ಪಿಎಸ್ಎಲ್'ವಿ - ಸಿ37 ನಭಕ್ಕೆ ಹಾರಲಿದೆ. ಇದರಲ್ಲಿ ಅಮೆರಿಕಾ, ಜರ್ಮನಿ ಮೊದಲಾದ ದೇಶಗಳ ಉಪಗ್ರಹಗಳು ಇರಲಿವೆ. 101 ವಿದೇಶಿ ಉಪಗ್ರಹಗಳಾಗಿದ್ದು ಮೂರು ಭಾರತದ ಉಪಗ್ರಹಗಳಾಗಿವೆ.[ಇಸ್ರೋ ಅಧ್ಯಕ್ಷ ಕನ್ನಡಿಗ ಕಿರಣ್ ಕುಮಾರ್ ವ್ಯಕ್ತಿಚಿತ್ರ]

ISRO will create a new history with the launch of 104 satellites on Feb 15

ಒಟ್ಟು ಉಡಾವಣೆಯ ತೂಕ 1350 ಕೆಜಿ ಇರಲಿದ್ದು, ಇದರಲ್ಲಿ ಉಪಗ್ರಹಗಳ ತೂಕ 500-600 ಕೆಜಿ ಇರಲಿದೆ. ಹೆಚ್ಚಿನ ಉಪಗ್ರಹಗಳು ಕಡಿಮೆ ತೂಕ ಹೊಂದಿರುವ ನ್ಯಾನೋ ಉಪಗ್ರಹಗಳಾಗಿವೆ.

ಭಾರತದ ಮೂರು ಉಪಗ್ರಹಗಳಲ್ಲಿ ಭುಮಿಯ ಚಿತ್ರ ರವಾನಿಸುವ ಅತ್ಯಾಧುನಿಕ ಕ್ಯಾಮೆರಾ ಇರುವ 'ಕಾರ್ಟೋಸ್ಟ್ಯಾಟ್ -2ಡಿ' ಯೂ ಇರಲಿದೆ. ಈ ಉಪಗ್ರಹ ಕಳುಹಿಸುವ ಚಿತ್ರಗಳನ್ನು ರಣತಂತ್ರ ರಚಿಸಲು ಭಾರತದ ಸೇನೆ ಬಳಸಿಕೊಳ್ಳಲಿದೆ.

ಕಳೆದ ವರ್ಷವಷ್ಟೆ ಇಸ್ರೋ 22 ಉಪಗ್ರಹಗಳನ್ನು ಏಕಕಾಲದಲ್ಲಿ ಉಡಾವಣೆ ಮಾಡಿ ಮಹತ್ವದ ಸಾಧನೆ ಗೈದಿತ್ತು. ಆದರೆ ಈ ಬಾರಿ ಅದರ ಐದು ಪಟ್ಟು ಹೆಚ್ಚಿನ ಉಪಗ್ರಹಗಳ ಉಡಾವಣೆಗೆ ಸಜ್ಜಾಗಿದೆ. ಅತೀ ಹೆಚ್ಚಿನ ಉಪಗ್ರಹಗಳನ್ನು ಉಡಾಯಿಸಿದ ದಾಖಲೆ ರಷ್ಯಾ ಹೆಸರಿನಲ್ಲಿದ್ದು, 2014ರಲ್ಲಿ 37 ಉಪಗ್ರಹಗಳನ್ನು ಉಡಾಯಿಸಿದೆ. ಇನ್ನು ಅಮೆರಿಕಾದ ಖ್ಯಾತ ಬಾಹ್ಯಾಕಾಶ ಸಂಸ್ಥೆ 29 ಉಪಗ್ರಹಗಳನ್ನು ಏಕಕಾಲಕ್ಕೆ ಉಡಾವಣೆ ಮಾಡಿ ಎರಡನೇ ಸ್ಥಾನದಲ್ಲಿದೆ. ಒಂದೊಮ್ಮೆ ಇಸ್ರೋ ತನ್ನ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದೇ ಆದಲ್ಲಿ ಏಕಕಾಲಕ್ಕೆ ಅತಿ ಹೆಚ್ಚು ಉಪಗ್ರಹಗಳನ್ನು ಉಡಾಯಿಸಿದ ಕೀರ್ತಿಗೆ ಪಾತ್ರವಾಗಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Indian Space Research Organization (ISRO) will create a new history with the launch of 104 satellite in a single mission on February 15.
Please Wait while comments are loading...