ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ರೋದ ಸ್ಕ್ರಮ್‌ಜೆಟ್‌ ರಾಕೆಟ್‌ ಎಂಜಿನ್‌ ವಿಶೇಷವೇನು?

By ಒನ್ ಇಂಡಿಯಾ ಡೆಸ್ಕ್
|
Google Oneindia Kannada News

ಬೆಂಗಳೂರು, ಆಗಸ್ಟ್, 29: ರಾಕೆಟ್‌ ಉಡ್ಡಯನ ತಂತ್ರಜ್ಞಾನದಲ್ಲಿ ಅತ್ಯಂತ ಕ್ಲಿಷ್ಟಕರ ಎನ್ನಲಾದ ಸ್ಕ್ರಮ್‌ಜೆಟ್‌ ರಾಕೆಟ್‌ ಎಂಜಿನ್‌ ಅನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ 'ಇಸ್ರೋ' ರವಿವಾರ ಯಶಸ್ವಿಯಾಗಿ ಪರೀಕ್ಷಿಸಿದೆ.

ಮಂಗಳನ ಅಂಗಳಕ್ಕೆ ಕಡಿಮೆ ವೆಚ್ಚದಲ್ಲಿ ಕಾಲಿಟ್ಟ ಇಸ್ರೋ ಇದೀಗ ಮತ್ತೊಂದು ಮೈಲಿಗಲ್ಲು ನೆಟ್ಟಿದೆ. ಇದು ಪ್ರಾಥಮಿಕ ಪರೀಕ್ಷೆಯಷ್ಟೇ ಸಂಶೋಧನೆ ಆಧಾರದಲ್ಲಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಇಸ್ರೋ ಸಾಧನೆಯನ್ನು ಶ್ಲಾಘಿಸಿದ್ದಾರೆ.[ಅಬ್ಬಬ್ಬಾ ಇಸ್ರೋ, ಒಂದೇ ಬಾರಿಗೆ 22 ಉಪಗ್ರಹ ಉಡಾವಣೆ]

ಭಾರತದ ವಿಜ್ಞಾನಿಗಳು ದೇಶವನ್ನು ಮತ್ತೆ ಹೆಮ್ಮೆ ಪಡುವಂತೆ ಮಾಡಿದ್ದಾರೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಕಡಿಮೆ ವೆಚ್ಚದಲ್ಲಿ ಉಪಗ್ರಹವನ್ನು ಕಕ್ಷೆಗೆ ಸೇರಿಸುವುದು ಈ ಎಂಜಿನ್ ನ ವಿಶೇಷ. ಇನ್ನಷ್ಟು ಮಾಹಿತಿಯನ್ನು ಮುಂದೆ ಪಡೆದುಕೊಳ್ಳಿ...

ಯಾವತ್ತು ಉಡಾವಣೆ?

ಯಾವತ್ತು ಉಡಾವಣೆ?

ಅತ್ಯಂತ ಕ್ಲಿಷ್ಟ ತಂತ್ರಜ್ಞಾನವನ್ನು ಹೊಂದಿರುವ ಈ ಸ್ಕ್ರಮ್‌ ಜೆಟ್‌ ಎಂಜಿನ್‌ ಅನ್ನು ಇಸ್ರೋ ರವಿವಾರ ಬೆಳಗ್ಗೆ 6 ಗಂಟೆಗೆ ಶ್ರೀಹರಿಕೋಟಾದಲ್ಲಿನ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಲ್ಲಿ ಯಶಸ್ವಿಯಾಗಿ ಪ್ರಯೋಗಿಸಿತು. ಈ ಮೂಲಕ ಭಾರತ ರಷ್ಯಾ ಮತ್ತು ಅಮೆರಿಕದ ಸಾಲಿಗೆ ಸೇರಿದೆ.

ಏನಿದರ ವೈಶಿಷ್ಟ್ಯ?

ಏನಿದರ ವೈಶಿಷ್ಟ್ಯ?

ಕಡಿಮೆ ವೆಚ್ಚದಲ್ಲಿ ಉಪಗ್ರಹ ಉಡಾವಣೆ ಸಾಧ್ಯ ಮಾಡುವುದು ಸ್ಕ್ರಮ್‌ಜೆಟ್‌ ರಾಕೆಟ್‌ ಎಂಜಿನ್‌ ನ ವಿಶೇಷ. ಜಪಾನ್ ಮತ್ತು ಚೀನಾಕ್ಕಿಂತಲೂ ಮೊದಲೆ ಸಾಧನೆ ಮಾಡಿದ ಶ್ರೇಯ ಭಾರತಕ್ಕೆ ಸಂದಿದೆ.

ಭಾರತ ನಾಲ್ಕನೇ ದೇಶ

ಭಾರತ ನಾಲ್ಕನೇ ದೇಶ

ಅಮೆರಿಕ, ರಷ್ಯಾಹಾಗೂ ಯುರೋಪಿಯನ್ ಸ್ಪೇನ್ಏಜೆನ್ಸಿ ಈಗಾಗಲೇ ಪ್ರಯೋಗ ಮಾಡಿ ಯಶಸ್ಸು ಸಾಧಿಸಿವೆ. ಜಪಾನ್ ಹಾಗೂ ಚೀನಾ ಇನ್ನು ಸಂಶೋಧನೆ ಹಾದಿಯಲ್ಲೇ ಇವೆ. ನಾಸಾ 2004ರಲ್ಲೇ ತಂತ್ರಜ್ಞಾನದ ಸಾಧನೆ ಮಾಡಿತ್ತು. ಇಸ್ರೋ 2006ರಲ್ಲೇ ಇ೦ಜಿನ್ ಪ್ರಯೋಗ ನಡೆಸಿತ್ತಾದರೂ ಇದೀಗ ಯಶಸ್ವಿ ಪ್ರಯೋಗ ಮಾಡಿದೆ.

ಉಡಾವಣೆ ಹೇಗಿತ್ತು?

ಉಡಾವಣೆ ಹೇಗಿತ್ತು?

ಶ್ರೀಹರಿಕೋಟಾದಿಂದ ಉಡಾವಣೆಗೊಂಡ ಎಂಜಿನ್ 300 ಸೆಕೆಂಡ್ ಗಳ ಕಾಲ ಮೇಲೇರಿ ಆರು ಸೆಕೆಂಡ್ ಕಾರ್ಯ ನಿರ್ವಹಿಸಿತು, ನಂತರ ಬಂಗಾಳಕೊಲ್ಲಿಯಲ್ಲಿ ಪತನವಾಯಿತು ಎಂದು ಇಸ್ರೋ ಅಧ್ಯಕ್ಷ ಕಿರಣ್ ಕುಮಾರ್ ತಿಳಿಸಿದ್ದಾರೆ.

ವಾತಾವರಣವೇ ಆಧಾರ

ವಾತಾವರಣವೇ ಆಧಾರ

ಉಪಗ್ರಹ ಉಡಾವಣೆ ವೇಳೆ ಜಲಜನಕ ಮತ್ತು ಆಮ್ಲಜನಕವನ್ನು ರಾಕೆಟ್ ಹೊತ್ತೊಯ್ಯುತ್ತದೆ. ಹೈಡ್ರೋಜನ್ ದಹಿಸಲು ಆಕ್ಸಿಡೈಸರ್ ಕೆಲಸ ಮಾಡುತ್ತದೆ. ಆದರೆ ಸ್ಕ್ರಮ್‌ಜೆಟ್‌ ರಾಕೆಟ್‌ ಎಂಜಿನ್‌ ಗೆ ಆಕ್ಸಿಡೈಸರ್ ಅಗತ್ಯ ಇರುವುದಿಲ್ಲ. 11 ಕಿಮೀ ಮೇಲೇರಿದ ಮೇಲೆ ಗಾಳಿಯನ್ನು ಒಳಗೆಳೆದುಕೊಂಡು ಅದರಲ್ಲಿರುವ ಆಮ್ಲಜನಕವನ್ನೆ ಬಳಕೆ ಮಾಡಿಕೊಂಡು ಮೇಲೆರುತ್ತದೆ.

ವೇಗ ಅತಿಹೆಚ್ಚು

ವೇಗ ಅತಿಹೆಚ್ಚು

ಆಮ್ಲಜನಕವನ್ನು ಬಳಸಿ ಜಲಜನಕವನ್ನು ದಹಿಸುವ ಕ್ರಿಯೆ ನಡೆಯುತ್ತದೆ. ಈ ಪ್ರಕ್ರಿಯೆ ನಡೆದರೆ ಮುಂದಿನ ಒಂದು ಸಾವಿರ ಸೆಕೆಂಡ್ ವರೆಗೆ ರಾಕೆಟ್ ಸೂಪರ್ ಸಾನಿಕ್ ವೇಗದಲ್ಲಿ ಸಂಚರಿಸುತ್ತದೆ. ರಾಕೆಟ್ ನ ಭಾರ ಕಡಿಮೆ ಇರುವುದರಿಂದ ವೇಗದ ಸಾಮರ್ಥ್ಯವೂ ಹೆಚ್ಚಾಗುತ್ತದೆ.

English summary
India on Sunday morning successfully tested its own scramjet or the air breathing engine with the launch of a big sounding rocket, said a senior official of Indian Space Research Organisation (ISRO). "The mission was successful. Two scramjet engines were tested during the flight. The finer details about the test will be known later," the official not wanting to be quoted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X