ಚಿತ್ರಗಳು : ಇಸ್ರೋ ಸಾಧನೆ, 20 ಉಪಗ್ರಹ ಉಡಾವಣೆ

Posted By:
Subscribe to Oneindia Kannada

ಬೆಂಗಳೂರು, ಜೂನ್ 22 : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಐತಿಹಾಸಿಕ ದಾಖಲೆ ಮಾಡಿದೆ. ಬುಧವಾರ ಏಕಕಾಲಕ್ಕೆ 20 ಉಪಗ್ರಹಗಳನ್ನು ಪಿಎಸ್‌ಎಲ್‌ವಿ ಸಿ-34 ರಾಕೆಟ್ ಮೂಲಕ ಉಡ್ಡಯನ ಮಾಡಿದೆ.

ಬುಧವಾರ ಬೆಳಗ್ಗೆ ಬೆಳಗ್ಗೆ 9.25ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಉಡಾವಣಾ ಕೇಂದ್ರದಿಂದ 20 ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ ನಭಕ್ಕೆ ಚಿಮ್ಮಿತು. ಒಂದೇ ಬಾರಿಗೆ 20 ಉಪಗ್ರಹಗಳನ್ನು ಇಸ್ರೋ ಉಡಾವಣೆ ಮಾಡಿದ್ದು, ಇದೇ ಮೊದಲು. [ಮತ್ತೊಂದು ಸಾಧನೆಗೆ ಸಾಕ್ಷಿಯಾದ ಇಸ್ರೋ]

isro

ಅಮೆರಿಕ, ಜರ್ಮನಿ, ಕೆನಡಾ ಮತ್ತು ಇಂಡೋನೇಷ್ಯಾ ಸೇರಿದಂತೆ ವಿವಿಧ ರಾಷ್ಟ್ರಗಳ ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ. ಏಕಕಾಲದಲ್ಲಿ 36 ಉಪಗ್ರಹಗಳನ್ನು ಕಕ್ಷೆಗೆ ರಷ್ಯಾ ಹಾರಿಸಿದೆ, ಅದು ಬಿಟ್ಟರೆ ಒಟ್ಟಿಗೆ 20 ಉಪಗ್ರಹ ಉಡ್ಡಯನ ಮಾಡಿದ ದೇಶ ಭಾರತ. [ಅಬ್ಬಬ್ಬಾ ಒಂದೇ ಬಾರಿಗೆ 20 ಉಪಗ್ರಹ ಉಡಾವಣೆ]

20 ಉಪಗ್ರಹಗಳ ಪೈಕಿ ಇಸ್ರೋದ ಭೂ ಸರ್ವೇಕ್ಷಣಾ ಉಪಗ್ರಹ ಕಾರ್ಟೋಸ್ಯಾಟ್ 2 ಅತಿ ದೊಡ್ಡದು. ಸುಮಾರು 727 ಕೆಜಿ ತೂಕ ಹೊಂದಿರುವ ಈ ಉಪಗ್ರಹದ ಜೊತೆ 19 ಚಿಕ್ಕ ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ.

-
-
-
-
-
-

ಕಕ್ಷೆಗೆ ಚಿಮ್ಮಿದ ಉಪಗ್ರಹಗಳಲ್ಲಿ ಚೆನ್ನೈನ ಸತ್ಯಭಾಮಾ ವಿಶ್ವವಿದ್ಯಾಲಯದ 1.5 ಕೆ.ಜಿ.ತೂಕದ 'ಸತ್ಯಭಾಮ ಸ್ಯಾಟ್', ಪುಣೆ ಕಾಲೇಜ್ ಆಫ್ ಇಂಜಿನಿಯರಿಂಗ್‌ನ 1 ಕೆಜಿ ತೂಕದ 'ಸ್ವಯಂ' ಹೆಸರಿಗ ಉಪಗ್ರಹವೂ ಇದೆ.

ಇಸ್ರೋದ ಕಾರ್ಟೋಸ್ಯಾಟ್ ಭೂಮಿಯ ಚಿತ್ರಗಳನ್ನು ಕಳುಹಿಸಲಿದ್ದು, ನಕ್ಷೆ ತಯಾರಿಕೆ, ಗ್ರಾಮೀಣ ಮತ್ತು ಕರಾವಳಿಯ ಭೂಮಿ ಬಳಕೆ, ನೀರಿನ ಬಳಕೆ ಕುರಿತ ಸಂಶೋಧನೆಗೆ ನೆರವಾಗಲಿದೆ.

ಅಭಿನಂದನೆ ಸಲ್ಲಿಸಿದ ನಾಯಕರು

ಇಸ್ರೋದ ಐತಿಹಾಸಿಕ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ.

ಮೆಚ್ಚುಗೆ ಸೂಚಿಸಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್

ಅಭಿನಂದನೆ ಸಲ್ಲಿಸಿದ ರಾಷ್ಟ್ರಪತಿಗಳು

ಅಭಿನಂದನೆ ಸಲ್ಲಿಸಿದ ಕೇಜ್ರಿವಾಲ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Indian Space Research Organisation (Isro) create a new record by launching 20 satellites on Wednesday, June 22, 2016 morning.
Please Wait while comments are loading...