ಮಂಗಳನ ಅಂಗಳದ ಜ್ವಾಲಾಮುಖಿ ನೋಡಿದ್ದೀರಾ?
ಬೆಂಗಳೂರು, ಮಾ. 6: ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತಕ್ಕೆ ಹೊಸ ಕೀರ್ತಿ ತಂದುಕೊಟ್ಟ ಮಂಗಳಯಾನ ಮತ್ತಷ್ಟು ಚಿತ್ರಗಳನ್ನು ಸೆರೆಹಿಡಿದು ಕಳಿಸಿದೆ. ಈ ಬಾರಿ ಮಂಗಳನಲ್ಲಿರುವ ಅತಿದೊಡ್ಡ ಜ್ವಾಲಾಮುಖಿಯ ಚಿತ್ರವನ್ನು ಕಳಿಸಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕಳಿಸಿರುವ ಮಂಗಳ ಶೋಧಕ ಉಪಗ್ರಹ ಮಂಗಳನ ಭೂ ವೈಶಿಷ್ಟ್ಯಗಳ ಬಗೆಗೂ ಚಿತ್ರ ತೆಗೆದು ವಿಜ್ಞಾನಿಗಳಿಗೆ ರವಾನಿಸಿದೆ.[ಪ್ರತಿದಿನ ಮಂಗಳ ಮೇಲ್ಮೈ ಬದಲಾವಣೆ!]

ಭೂಮಿಯ ಅತಿ ದೊಡ್ಡ ಜ್ವಾಲಾಮುಖಿ ಹವಾಯಿಯಲ್ಲಿರುವ ಮೌನಾ ಲೋವಾಕ್ಕಿಂತ ಮಂಗಳನಲ್ಲಿರುವ ಆರ್ಸಿಯಾ ಮಾನ್ಸ್ 30 ಪಟ್ಟು ದೊಡ್ಡದಿದೆ. 435 ಕಿ.ಮೀ. ವಿಸ್ತಾರವನ್ನು ಹೊಂದಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. 10, 707 ಕಿ.ಮೀ. ದೂರದಿಂದ ಈ ಚಿತ್ರವನ್ನು ತೆಗೆಯಲಾಗಿದೆ. ಇನ್ನು ಮ್ಯಾರಿನೆರಿಸ್ ಕೆನ್ಯಾನ್ 4 ಸಾವಿರ ಕಿ.ಮೀ. ಉದ್ದದ ಕುಳಿಯಾಗಿದ್ದು, 200 ಕಿ.ಮೀ. ಅಗಲ ಮತ್ತು 7 ಕಿ.ಮೀ. ಆಳವಿದೆ. ಈ ಕುಳಿಯ ದೃಶ್ಯವನ್ನು 24 ಸಾವಿರ ಕಿ.ಮೀ. ಎತ್ತರದಿಂದ ಮಂಗಳಯಾನ ಸೆರೆಹಿಡಿದಿದೆ.[ವಿಡಿಯೋ: ದಕ್ಷಿಣ ಅಮೆರಿಕದ ಅಗ್ನಿಪರ್ವತ ಸ್ಫೋಟ]

ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಇಸ್ರೋ ಈ ಚಿತ್ರಗಳನ್ನು ಹಾಕಿಕೊಂಡಿದ್ದು, ಆರ್ಸಿಯಾ ಮಾನ್ಸ್ ಹೆಸರಿನ ಜ್ವಾಲಾಮುಖಿ, ಮ್ಯಾರಿನೆರಿಸ್ ಕೆನ್ಯಾನ್ ಹೆಸರಿನ ದೊಡ್ಡ ಕುಳಿ ಸೇರಿದಂತೆ ಮಂಗಳನ ಮೇಲ್ಮೈ ಗೆ ಸಂಬಂಧಿಸಿದ 3 ಚಿತ್ರಗಳನ್ನು ಪ್ರಕಟಿಸಿದೆ.












Click it and Unblock the Notifications