ಕೆಂಪುಗ್ರಹಕ್ಕೆ ಉಪಗ್ರಹ ಕಳಿಸಲು ಇಸ್ರೋ ಸಜ್ಜು

ಬೆಂಗಳೂರು, ಸೆ.12: ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆ ಮಂಗಳಯಾನಕ್ಕೆ ವೇದಿಕೆ ಸಿದ್ಧಗೊಳ್ಳುತಿದೆ. ಮಂಗಳನ ಅಂಗಳದಲ್ಲಿ ಜೀವ ಕಣ ಪತ್ತೆಗೆ ಇಸ್ರೋ ಸಜ್ಜಾಗಿದೆ. ಮಂಗಳನೆಡೆಗೆ ಹಾರುವ ಉಪಗ್ರಹ ಹಾಗೂ ಹೊತ್ತೊಯ್ಯುವ ಬಾಹ್ಯಾಕಾಶ ನೌಕೆ ಪೂರ್ಣಗೊಂಡಿದೆ ಎಂದು ಇಸ್ರೋ ವಿಜ್ಞಾನಿಗಳು ಹೇಳಿದ್ದಾರೆ.

ಬೆಂಗಳೂರಿನ ISAC ಕೇಂದ್ರದಲ್ಲಿ ಉಪಗ್ರಹ ಹಾಗೂ ಪಿಎಸ್ ಎಲ್ ವಿ ಸಿ25ನ ಅಂತಿಮ ಹಂತದ ಪರೀಕ್ಷೆ ನಡೆಸಲಾಗುತ್ತಿದೆ. ಸೆಪ್ಟೆಂಬರ್ 27ರ ವೇಳೆಗೆ ಉಪಗ್ರಹ ಸಮೇತ ನೌಕೆಯನ್ನು ಶ್ರೀಹರಿಕೋಟಾಗೆ ರವಾನಿಸಲಾಗುತ್ತದೆ.

ವಿಶ್ವದಲ್ಲೇ ಅತಿ ಕಡಿಮೆ ವೆಚ್ಚದಲ್ಲಿ ತ್ವರಿತ ಗತಿಯಲ್ಲಿ ಇಂಥ ಮಹತ್ವದ ಯೋಜನೆಗೆ ಸಿದ್ಧತೆ ನಡೆಸಿದ್ದು ಇಸ್ರೋ ಸಾಧನೆಯಾಗಿದೆ. ಬಾಹ್ಯಾಕಾಶ ನೌಕೆಯ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಅಂತಿಮ ಹಂತದ ಪರೀಕ್ಷೆಗಳು ನಡೆದಿದೆ. ಹವಾಮಾನ ಅನುಕೂಲ ನೋಡಿಕೊಂಡು ಅಕ್ಟೋಬರ್ 21 ರಿಂದ ನವೆಂಬರ್ 19ರೊಳಗೆ ಉಪಗ್ರಹ ಉಡಾವಣೆ ಮಾಡಲಾಗುತ್ತ್ತದೆ ಎಂದು ಐಸಾಕ್ ನ ನಿರ್ದೇಶಕ ಡಾ. ಎನ್ ಶಿವಕುಮಾರ್ ಹೇಳಿದ್ದಾರೆ. (ಪಿಟಿಐ). ಮಂಗಳಯಾನ ಕುರಿತ ಇನ್ನಷ್ಟು ಮಾಹಿತಿ ಮುಂದೆ ಓದಿ..

ಡಾ. ಶಿವಕುಮಾರ್ ಹೇಳಿಕೆ

ಡಾ. ಶಿವಕುಮಾರ್ ಹೇಳಿಕೆ

ಉಪಗ್ರಹ ಹಾಗೂ ನೌಕೆಯನ್ನು ನಾನಾ ಹಂತಗಳಲ್ಲಿ ಪರಿಶೀಲನೆ ನಡೆಸಲಾಗಿದೆ. ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಉಪಕರಣಗಳನ್ನು ಶೇ.100ಕ್ಕೆ ನೂರರಷ್ಟು ತಪಾಸಣೆಗೆ ಒಳಪಡಿಸಲಾಗಿದೆ. ಭೂಮಿಯ ಕಕ್ಷೆಯಿಂದ ಹೊರಹೋಗಲಿರುವ ಹಿನ್ನೆಲೆಯಲ್ಲಿ ಉಪಗ್ರಹಕ್ಕೆ ಹೆಚ್ಚು ತೂಕ ಹೊರಿಸದೆ ಕೇವಲ 15 ಕೆ.ಜಿ. ಭಾರದ ಐದು ಉಪಕರಣಗಳನ್ನು ಅಧ್ಯಯನಕ್ಕಾಗಿ ಸೇರ್ಪಡೆ ಮಾಡಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಯೋಜನೆ ನಿರ್ದೇಶಕರಾದ ಸುಬ್ಬಯ್ಯ ಅರುಣನ್, ಎಂ ಅಣ್ಣಾದೊರೈ ಅವರು ಉಪಸ್ಥಿತರಿದ್ದರು.

ಉಪಗ್ರಹದ ಕೆಲಸ ಏನು?

ಉಪಗ್ರಹದ ಕೆಲಸ ಏನು?

ಬಾಹ್ಯಾಕಾಶ ನೌಕೆ ಮೂಲಕ ಹಾರಿಬಿಡುವ ಉಪಗ್ರಹ ಭೂಮಿಯ ಆಚೆ 372 ಕಿ.ಮೀ. ದೂರದಲ್ಲಿ ಸಂಚರಿಸುತ್ತ ಮಂಗಳನತ್ತ ಸಾಗಲಿದೆ. ಮಂಗಳನ ಕಕ್ಷೆಯಲ್ಲಿ 272 ಕಿ.ಮೀ.ನಿಂದ 80 ಸಾವಿರ ಕಿ.ಮೀ. ಅಂತರದಲ್ಲಿ ಪರಿಭ್ರಮಿಸುವ ಉಪಗ್ರಹ ತನ್ನ ಮೊದಲ ಪೂರ್ಣ ಪ್ರಮಾಣದ ಚಿತ್ರವನ್ನು 9 ತಿಂಗಳ ಬಳಿಕ(ಸೆ.21, 2014) ಭೂಮಿಗೆ ರವಾನಿಸಲಿದೆ.

ಬೆಂಗಳೂರಿನ ಇಸ್ರೋ ಐಸಾಕ್ ಕೇಂದ್ರದ ಕ್ಲೀನ್ ರೂಮ್ ನಲ್ಲಿ ಉಪಗ್ರಹ. PTI Photo by Shailendra Bhojak

ಮಂಗಳಯಾನ ಯೋಜನೆ

ಮಂಗಳಯಾನ ಯೋಜನೆ

* ಈ ಯೋಜನೆಯ ಒಟ್ಟು ವೆಚ್ಚ 450 ಕೋಟಿ ರೂಪಾಯಿ. ಈ ಪೈಕಿ 150 ಕೋಟಿ ರೂ. ಬಾಹ್ಯಾಕಾಶ ನೌಕೆ ನಿರ್ಮಾಣಕ್ಕೆ, 110 ಕೋಟಿ ರೂ. ಉಡಾವಣಾ ವಾಹಕಕ್ಕೆ ಬಳಸಿಕೊಳ್ಳಲಾಗಿದೆ.
* ಮೀಥೇನ್ ಇರುವಿಕೆ ಪತ್ತೆಗೆ ಎಂಎಸ್‌ಎಂ ಹೆಸರಿನ ವೈಜ್ಞಾನಿಕ ಉಪಕರಣವನ್ನು ಉಪಗ್ರಹದಲ್ಲಿದೆ.
* ಮಂಗಳದ ಮೇಲ್ಮೈ ರಚನೆ ಸೆರೆ ಹಿಡಿಯಲು ಕ್ಯಾಮೆರಾ(ಎಂಸಿಸಿ), ಟಿಐಎಸ್, ಎಲ್ ಎಪಿ ಹಾಗೂ ಎಂಇಎನ್ ಸಿಎ ಉಪಕರಣವಿದೆ
* ಉಪಗ್ರಹದ ತೂಕ 1,340 ಕೆ.ಜಿ. ಇದು ಮಂಗಳನ ಕಕ್ಷೆಗೆ ಸೇರಿದಾಗ 582 ಕೆ.ಜಿ.ಗೆ ಕುಗ್ಗಲಿದೆ.

ಬೆಂಗಳೂರಿನ ಇಸ್ರೋ ಐಸಾಕ್ ಕೇಂದ್ರದ ಕ್ಲೀನ್ ರೂಮ್ ನಲ್ಲಿ ಉಪಗ್ರಹ ಪರೀಕ್ಷೆ. PTI Photo by Shailendra Bhojak

ಮಂಗಳಯಾನದ ವಿವರ

ಮಂಗಳಯಾನದ ವಿವರ

ಇಸ್ರೋ ಮುಂದೆ ಅನೇಕ ಸವಾಲುಗಳಿತ್ತು. ಕಡಿಮೆ ವೆಚ್ಚದಲ್ಲಿ ಉಪಗ್ರಹ ನಿರ್ಮಾಣ , ಸಂವಹನ, ನ್ಯಾವಿಗೇಷನ್, ವಿದ್ಯುತ್ ಪೂರೈಕೆ ಹಾಗೂ ಪ್ರೊಪಲ್ಷನ್ ವ್ಯವಸ್ಥೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಿತ್ತು. ಸಂವಹನ ವಿಳಂಬ ಕೊರತೆ ಸಂದರ್ಭದಲ್ಲಿ ಉಪಗ್ರಹದ ವ್ಯವಸ್ಥೆ ತನ್ನಷ್ಟಕ್ಕೇ ತಾನೇ ನಿರ್ಧಾರ ಕೈಗೊಳ್ಳುವಂತೆ ಮಾಡಲಾಗಿದೆ. ಹೀಗಾಗಿ ತೊಂದರೆ ಉಂಟಾದರೆ ಪರಿಹರಿಸಲು ಸಾಧ್ಯವಿದೆ.

ಬೆಂಗಳೂರಿನ ಇಸ್ರೋ ಐಸಾಕ್ ಕೇಂದ್ರದ ಕ್ಲೀನ್ ರೂಮ್ ನಲ್ಲಿ ಉಪಗ್ರಹ ಪರೀಕ್ಷೆ. PTI Photo by Shailendra Bhojak

ಇಸ್ರೋ ಅಧ್ಯಕ್ಷ ರಾಧಾಕೃಷ್ಣನ್

ಇಸ್ರೋ ಅಧ್ಯಕ್ಷ ರಾಧಾಕೃಷ್ಣನ್

ಇಸ್ರೋ ಚೇರ್ಮನ್ ಕೆ ರಾಧಾಕೃಷ್ಣನ್ ಅವರು ಮಂಗಳಯಾನ ಯೋಜನೆಯ ಸಂಪೂರ್ಣ ಪಡೆಯುತ್ತಿದ್ದು, ಶ್ರೀಹರಿಕೋಟದಲ್ಲಿನ ವ್ಯವಸ್ಥೆ ಬಗ್ಗೆ ಗಮನ ಹರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+