ISRO: ಚಂದ್ರಯಾನ-3 ಬೆನ್ನಲ್ಲೆ ಇಸ್ರೋದಿಂದ ಜುಲೈ 30ರಂದು 7 ಉಪಗ್ರಹಗಳ ಉಡಾವಣೆ
ಶ್ರಹರಿಕೋಟಾ, ಜುಲೈ 25: ಇತ್ತೀಚೆಗಷ್ಟೆ ಚಂದ್ರಯಾನ 3 ಉಡಾವಣೆ ಮಾಡಿದ್ದ ಆಂಧ್ರಪ್ರದೇಶ ಶ್ರೀಹರಿಕೋಟಾದ ಸತೀಶ್ ಧವನ್ ಸ್ಪೇಸ್ ಸೆಂಟರ್ ಕೆಲವೇ ದಿನಗಳಲ್ಲಿ ಇನ್ನೊಂದು ವಿಶೇಷ ಉಪಕ್ರಮಕ್ಕೆ ಸಾಕ್ಷಿಯಾಗಲಿದೆ. ಇದಕ್ಕಾಗಿ ಇಸ್ರೋ (ISRO) ಭರದ ಸಿದ್ಧತೆ ನಡೆಸಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ISRO) ಇದೇ ಜುಲೈ 30 ರಂದು ಸಿಂಗಾಪುರದ 7 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಿದೆ. ಈ ಉಪಕ್ರಮಕ್ಕೆ ದಿನಗಣನೆ ಆರಂಭವಾಗಿದ್ದು, ಇಷ್ಟು ಉಪಗ್ರಹಗಳು ಸಹ ಶ್ರೀಹರಿಕೋಟಾದಿಂದ ನಭಕ್ಕೆ ಜಿಗಿಯಲಿವೆ ಎಂದು ಮೂಲಗಳು ತಿಳಿಸಿವೆ.

ಇಸ್ರೇಲ್ ವಿಜ್ಞಾನಿಗಳಿಂದ ಸಿದ್ಧಗೊಂಡಿರುವ ಡಿಎಫ್-ಸಿಂಥೆಟಿಕ್ ಅಪರ್ಚರ್ ಏರೋಸ್ಪೇಸ್ ಎಂಬ ಉಪಗ್ರಹ 360 ಕೆಜಿ ತೂಕದ ಕಕ್ಷೆ ಸೇರಲಿವೆ. ಇದು ಹವಾಮಾನ ವೈಪರಿತ್ಯದಲ್ಲಿಯೂ ಚಿತ್ರಗಳನ್ನು ತೆಗೆಯುವ ಶಕ್ತಿ ಹೊಂದಿದೆ, ಇದರೊಂದಿಗೆ ಆರು ಇತರ ಸಣ್ಣಪುಟ್ಟ ಉಪಗ್ರಹಗಳು ಆಕಾಶಕ್ಕೆ ತೆರಳಲಿವೆ. ಇವುಗಳನ್ನು ''ವೆಲಾಕ್ಸ್ ಎಎಂ, ಆರ್ಕೇಡ್, ಸ್ಕೂಬ್-2, ಗೆಲೇಸಿಯ-2, ಒಆಬಿ12 ಪ್ರೈಡರ್, ನೂಲಯನ್'' ಎಂದು ಕರೆಯಲಾಗುತ್ತದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) PSLV C56 ರಾಕೆಟ್ ಏಳು ಉಪಗ್ರಹಗಳನ್ನು ಇಸ್ರೋದ ಹೊತ್ತೂಯ್ಯಲಿದೆ. ಜುಲೈ 30ರಂದು ಇವುಗಳು ಬೆಳಗ್ಗೆ 6.30 ಗಂಟೆಗ ನಭಕ್ಕೆ ಜಿಗಿಯಲಿವೆ ಎಂದು ಇಸ್ರೋ ಮಾಹಿತಿ ನೀಡಿದೆ.

ನಾಲ್ಕು ಕಕ್ಷೆ ದಾಟಿದ ಚಂದ್ರಯಾನ 3
ಇದೇ ಜುಲೈ 14ರಂದು ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3 (Chandrayaan -3) ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. 2019ರಲ್ಲಿ ಉಡವಣೆ ಮಾಡಿದ್ದ ಚಂದ್ರಯಾನ-2 ಚಂದ್ರನ ಅಂಗಳದಲ್ಲಿ ಇಳಿಯುವಾಗ ವಿಫಲವಾಯಿತು.
ಹೀಗಾಗಿ ಈ ಬಾರಿ ಸುಧಾರಿತ ತಂತ್ರಜ್ಞಾನ, ವಿಶೇಷ ವಿನ್ಯಾಸದಡಿ ಒಟ್ಟು 600 ಕೋಟಿ ರೂಪಾಯಿಗೆ ಅಧಿಕ ವೆಚ್ಚದ ಚಂದ್ರಯಾನ-3 ಅನ್ನು ಇಸ್ರೋ ಸಂಸ್ಥೆ ಶ್ರೀಹರಿಕೋಟಾದ ಸತೀಶ್ ಧವನ್ ಸ್ಪೇಸ್ ಸೆಂಟರ್‌ನಿಂದ ನಭಕ್ಕೆ ಜಿಗಿಸಿತು. ಇದರ ಬೆನ್ನಲ್ಲೆ ನಾಲ್ಕು ಕಕ್ಷೆಗಳನ್ನು ದಾಟಿಸುವಲ್ಲಿ ಇಸ್ರೋ ಯಶಸ್ವಿಯಾಗಿದೆ. ಈ ಉಪಕ್ರಮ ಯಶಸ್ವಿಯಾಗಿದ್ದೇ ಆದರೆ ಚಂದ್ರನ ದಕ್ಷಿಣ ಅಂಗಳಕ್ಕೆ ಕಾಲಿಟ್ಟ ಮೊದಲ ದೇಶ ಭಾರತ ಆಗಲಿದೆ. ಉಡಾವಣೆಗೊಂಡ ಚಂದ್ರಯಾನ 3 ಅನ್ನು ಬೆಂಗಳೂರಿನ ಇಸ್ರೋ ಕೇಂದ್ರಿದಿಂದಲೇ ನಿರ್ವಹಣೆ ಮಾಡಲಾಗುತ್ತದೆ.
ಚಂದ್ರಯಾನ 3 ದಿನೇ ದಿನೆ ಚಂದ್ರನ ಅಂಗಳದ ನಿಗದಿತ ಗುರಿಯತ್ತ ಹತ್ತಿರವಾಗುತ್ತದೆ. ಜುಲೈ 20ರಂದು ಇಸ್ರೋ ಚಂದ್ರಯಾನ ನೌಕೆಯನ್ನು ನಾಲ್ಕನೇ ಕಕ್ಷೆಗೆ ಏರಿಸಿದೆ.












Click it and Unblock the Notifications