Gaza Hospital Attack: ಗಾಜಾ ಆಸ್ಪತ್ರೆ ದಾಳಿ ಕುರಿತು ಪ್ರಧಾನಿ ಮೋದಿ ಹೇಳಿದ್ದೇನು?
ನವದೆಹಲಿ, ಅಕ್ಟೋಬರ್ 18: ಗಾಜಾದ ಆಸ್ಪತ್ರೆ ಮೇಲಿನ ದಾಳಿಯಲ್ಲಿ 500 ಮಂದಿ ಮೃತಪಟ್ಟಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಜಗತ್ತಿನಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೇರಿದಂತೆ ಪ್ರಮುಖ ರಾಷ್ಟ್ರಗಳ ನಾಯಕರು ದಾಳಿಯನ್ನು ಖಂಡಿಸಿದ್ದಾರೆ. ಪ್ರಧಾನಿ ಮೋದಿ ಅವರು ಆಸ್ಪತ್ರೆ ಮೇಲಿನ ದಾಳಿಗೆ ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಬರೆದುಕೊಂಡಿರುವ ಮೋದಿ, 'ಗಾಜಾದ ಅಲ್ ಅಹ್ಲಿ ಆಸ್ಪತ್ರೆಯಲ್ಲಿ ಸಂಭವಿಸಿದ ದುರಂತದ ಬಗ್ಗೆ ತೀವ್ರ ಆಘಾತವಾಯಿತು. ಸಂತ್ರಸ್ತರ ಕುಟುಂಬಗಳಿಗೆ ನಮ್ಮ ಸಂತಾಪಗಳನ್ನು ತಿಳಿಸುತ್ತೇನೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲು ಪ್ರಾರ್ಥನೆ ಮಾಡುತ್ತೇನೆ' ಎಂದು ಹೇಳಿದ್ದಾರೆ.

'ನಡೆಯುತ್ತಿರುವ ಸಂಘರ್ಷದಲ್ಲಿ ನಾಗರಿಕರ ಸಾವುನೋವುಗಳು ಗಂಭೀರ ವಿಷಯವಾಗಿದೆ. ಈ ಸಾವುನೋವುಗಳಿಗೆ ಸಂಬಂಧಿಸಿದವರನ್ನು ಹೊಣೆಗಾರರನ್ನಾಗಿ ಮಾಡಬೇಕು' ಎಂದು ಮೋದಿ ಬರೆದುಕೊಂಡಿದ್ದಾರೆ.
ಇಸ್ರೇಲ್‌ಗೆ ಬಂದಿಳಿದ ಜೋ ಬೈಡನ್
ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಇಂದು ಇಸ್ರೇಲ್‌ಗೆ ಬಂದಿಳಿದಿದ್ದಾರೆ. ಇಸ್ರೇಲ್ ರಾಜಧಾನಿ ಟೆಲ್ ಅವೀವ್‌ಗೆ ಬಂದಿಳಿದ ಅವರನ್ನು ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ವಾಗಿತಿಸಿದ್ದಾರೆ.
ಗಾಜಾ ಆಸ್ಪತ್ರೆಯ ಮೇಲಿನ ಇಸ್ರೇಲ್ ದಾಳಿ ಹಿನ್ನೆಲೆಯಲ್ಲಿ ಅರಬ್ ನಾಯಕರು ಬೈಡನ್ ಅವರನ್ನು ಭೇಟಿ ಮಾಡಲು ನಿರಾಕರಿಸಿದ್ದಾರೆ.

ಜೋರ್ಡಾನ್ ರಾಜ ಅಬ್ದುಲ್ಲಾ, ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಮತ್ತು ಪ್ಯಾಲೆಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರ ಜೊತೆ ಬೈಡನ್ ಅವರು ಮಾತುಕತೆ ನಡೆಸುವವರಿದ್ದರು. ಇಸ್ರೇಲ್‌ಗೆ ಬೆಂಬಲ ನೀಡುವಂತೆ ಮನವಿ ಮಾಡಿಕೊಳ್ಳುವವರಿದ್ದರು. ಆದರೆ, ಗಾಜಾ ಆಸ್ಪತ್ರೆ ಮೇಲೆ ಬಾಂಬ್ ಹಾಕಿದ ಇಸ್ರೇಲ್ ವಿರುದ್ಧ ಈಗ ಜಗತ್ತಿನಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಬೈಡನ್ ಸಭೆಯು ಮೊಟಕುಗೊಂಡಿದೆ.
ಟೆಲ್ ಅವೀವ್‌ನಲ್ಲಿ ಬೈಡನ್ ಜೊತೆ ಜಂಟಿ ಪತ್ರಿಕಾಗೋಷ್ಠಿ ಉದ್ಧೇಶಿಸಿ ಮಾತನಾಡಿರುವ ನೆತಹ್ಯಾಹು, 'ಅಕ್ಟೋಬರ್ 7 ರಂದು ಹಮಾಸ್ ಉಗ್ರರು ಒಂದೇ ದಿನದಲ್ಲಿ 1400 ಇಸ್ರೇಲಿಗಳನ್ನು ಕೊಂದಿದ್ದಾರೆ. ಹಮಾಸ್ ಐಸಿಸ್‌ಗಿಂತ ಕೆಟ್ಟದ್ದಾಗಿದೆ. ಹಮಾಸ್ ಅನ್ನು ಸೋಲಿಸಲು ನಾಗರಿಕ ಜಗತ್ತು ಒಂದಾಗಬೇಕು' ಎಂದು ಕರೆ ನೀಡಿದ್ದಾರೆ.
ಇಸ್ರೇಲ್ ಜನರಿಗೆ ನಿಮ್ಮಂತಹ ನಿಜವಾದ ಸ್ನೇಹಿತನನ್ನು ಹೊಂದಿರುವುದಕ್ಕಿಂತ ಬೇರೆ ಉತ್ತಮವಾದದ್ದು ಏನು ಇಲ್ಲ. ಯುದ್ಧದ ಸಮಯದಲ್ಲಿ ಇಸ್ರೇಲ್‌ಗೆ ಅಮೆರಿಕದ ಅಧ್ಯಕ್ಷರು ಭೇಟಿ ನೀಡಿದ್ದಾರೆ. ಇದು ನಮ್ಮ ಆಳವಾಗಿ ಕೊನೆಯವರೆಗೂ ಇರಲಿದೆ. ನಾನು ಇದನ್ನು ಇಸ್ರೇಲ್‌ನ ಎಲ್ಲಾ ಜನರ ಪರವಾಗಿ ಮಾತನಾಡುತ್ತಿದ್ದೇನೆ. ಧನ್ಯವಾದಗಳು ಅಧ್ಯಕ್ಷರೇ, ಇಂದು, ನಾಳೆ ಮತ್ತು ಯಾವಾಗಲೂ ಇಸ್ರೇಲ್‌ನೊಂದಿಗೆ ನಿಂತಿದ್ದಕ್ಕಾಗಿ ಧನ್ಯವಾದಗಳು' ಎಂದು ಹೇಳಿದ್ದಾರೆ.
ಇದೇ ವೇಳೆ ಮಾತನಾಡಿದ ಬೈಡನ್, 'ನಿನ್ನೆ ಗಾಜಾದ ಆಸ್ಪತ್ರೆಯಲ್ಲಿ ಸಂಭವಿಸಿದ ಸ್ಫೋಟದಿಂದ ನಾನು ತುಂಬಾ ದುಃಖಿತನಾಗಿದ್ದೇನೆ. ನಾನು ಗ್ರಹಿಸಿದ ಆಧಾರದ ಮೇಲೆ ಹೇಳುವುದಾದರೆ, ಈ ಕೃತ್ಯವನ್ನು ಬೇರೆಯವರು ಎಸಗಿದ್ದಾರೆ' ಎಂದು ತಿಳಿಸಿದ್ದಾರೆ.
ಭಯೋತ್ಪಾದಕ ಗುಂಪು 31 ಅಮೆರಿಕನ್ನರು ಸೇರಿದಂತೆ 1300 ಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಿದೆ. ಅವರು ಮಕ್ಕಳನ್ನು ಒಳಗೊಂಡಂತೆ ಹಲವಾರು ಜನರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ. ಅವರು ಐಸಿಸ್ ಹೋಲುತ್ತಾರೆ. ಅದಕ್ಕಿಂತ ಹೆಚ್ಚು ದುಷ್ಕೃತ್ಯಗಳನ್ನು ಮಾಡಿದ್ದಾರೆ ಎಂದು ಬೈಡನ್ ಹೇಳಿದ್ದಾರೆ.












Click it and Unblock the Notifications