ಉತ್ತರ ಪ್ರದೇಶದಲ್ಲಿ ಐಎಸ್‌ಐ ಏಜೆಂಟ್ ಬಂಧನ
ಲಕ್ನೋ, ನವೆಂಬರ್ 28 : ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ಐಎಸ್‌ಐ ಏಜೆಂಟ್‌ನನ್ನು ಬಂಧಿಸಿದೆ. ಬಾಂಗ್ಲಾದೇಶದ ಮೂಲಕ ಭಾರತಕ್ಕೆ ಬಂದಿದ್ದ ಈತ ಭಾರತೀಯ ಸೇನೆಯ ಕುರಿತು ಹಲವು ಮಾಹಿತಿಗಳನ್ನು ಸಂಗ್ರಹಣೆ ಮಾಡಿ ಪಾಕಿಸ್ತಾನಕ್ಕೆ ಕಳುಹಿಸಿದ್ದ ಎಂದು ಎಸ್‌ಟಿಎಫ್ ಐಜಿ ಸುಜೀತ್ ಪಾಂಡೆ ಹೇಳಿದ್ದಾರೆ.
ಬಂಧಿತ ಐಎಸ್‌ಐ ಏಜೆಂಟ್‌ನನ್ನು ಮೊಹಮದ್ ಇಜಾಜ್ ಎಂದು ಗುರುತಿಸಲಾಗಿದೆ. ಭಾರತದಲ್ಲಿ ಮೊಹಮದ್ ಕಲಾಂ ಎಂಬ ಹೆಸರಿನಲ್ಲಿ ಈತ ಕಾರ್ಯಾಚರಣೆ ನಡೆಸುತ್ತಿದ್ದ. ದೆಹಲಿಗೆ ಹೋಗುವ ತಯಾರಿಯಲ್ಲಿದ್ದ ಇಜಾಜ್‌ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. [ಶಾರುಖ್ ಅಸಹಿಷ್ಣುತೆ ಬಗ್ಗೆ ಯಾರು ಏನು ಹೇಳಿದರು?]

ಮೊಹಮದ್ ಇಜಾಜ್‌ನಿಂದ ಭಾರತೀಯ ಸೇನೆಗೆ ಸೇರಿದ ಮಾಹಿತಿಗಳ ಪತ್ರ, ಪಾಕಿಸ್ತಾನದ ಗುರುತಿನ ಪತ್ರ, ಪಶ್ಚಿಮ ಬಂಗಾಳದ ನಕಲಿ ಮತದಾರರ ಗುರುತಿನ ಚೀಟಿ, ನಕಲಿ ಆಧಾರ್ ಕಾರ್ಡ್, ದೆಹಲಿ ಮೆಟ್ರೋ ಕಾರ್ಡ್, ಲ್ಯಾಪ್‌ಟಾಪ್ ಸೇರಿದಂತೆ ಹಲವು ದಾಖಲೆಗಳನ್ನು ವಶಕ್ಕೆಪಡೆದುಕೊಳ್ಳಲಾಗಿದೆ. [ಒಡಿಶಾದಲ್ಲಿ ಶಂಕಿತ ಐಎಸ್ಐ ಏಜೆಂಟ್ ಬಂಧನ]
ಪಾಕಿಸ್ತಾನ ಬಾಂಗ್ಲಾದೇಶ ಮೂಲಕ ಪಶ್ಚಿಮ ಬಂಗಾಳಕ್ಕೆ ಮೊಹಮದ್ ಇಜಾಜ್‌ನನ್ನು ಕಳುಹಿಸಿತ್ತು. ಭಾರತೀಯ ಸೇನೆ ಬಗ್ಗೆ ಮಾಹಿತಿ ಕಲೆ ಹಾಕಿ ಪಾಕ್‌ಗೆ ಕಳುಹಿಸಿವ ಕಾರ್ಯವನ್ನು ಈ ಮಾಡುತ್ತಿದ್ದ. ಭಾರತಕ್ಕೆ ಬಂದ ಈತ ಮೊದಲು ವಿಡಿಯೋ ಗ್ರಾಫರ್‌ಆಗಿ ಕೆಲಸ ಆರಂಭಿಸಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.
2012ರಲ್ಲಿ ಐಎಸ್‌ಐ ಮೊಹಮದ್ ಇಜಾಜ್‌ಗೆ ತರಬೇತಿ ನೀಡಿ ಭಾರತಕ್ಕೆ ಕಳುಹಿಸಿಕೊಟ್ಟಿತ್ತು. ಭಾರತೀಯ ಸೇನೆ ಬಗ್ಗೆ ಮಾಹಿತಿ ನೀಡುವ ಕಾರ್ಯವನ್ನು ಈತ ಮಾಡುತ್ತಿದ್ದ. ಇಜಾಜ್‌ಗೆ ಇಲ್ಲಿ ಕೆಲಸ ಮಾಡಲು ಪಾಕ್ ಹಣಕಾಸು ಸಹಾಯ ಮಾಡುವ ಜೊತೆಗೆ ಪಾಕಿಸ್ತಾನದಲ್ಲಿರುವ ಆತನ ಕುಟುಂಬಕ್ಕೆ ಪ್ರತಿ ತಿಂಗಳು 50 ಸಾವಿರ ರೂ.ಗಳನ್ನು ನೀಡುತ್ತಿತ್ತು.
ಸದಾರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಇಜಾಜ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ಈತನ ವಿಚಾರಣೆ ಮುಂದುರೆಸಿದೆ. ಗುಪ್ತಚರ ಸಂಸ್ಥೆಗಳಿಗೂ ಇಜಾಜ್ ಬಂಧನದ ಬಗ್ಗೆ ಮಾಹಿತಿಗಳನ್ನು ರವಾನಿಸಲಾಗಿದೆ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications