ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಪಶ್ಚಿಮ ಬಂಗಾಳ ಬಾಂಬ್ ರಾಜಧಾನಿ' ಎಂಬ ಟೀಕೆ ನಿಜವೇ?

By ವಿಕಾಸ್ ನಂಜಪ್ಪ
|
Google Oneindia Kannada News

'ಪಶ್ಚಿಮ ಬಂಗಾಳ ಬಾಂಬ್ ರಾಜಧಾನಿ' ಎಂಬ ಟೀಕೆ ಮತ್ತೆ ಮತ್ತೆ ಕೇಳಿಬರುತ್ತಿದೆ. ಮಂಗಳವಾರ ಬರ್ಧ್ವಾನ್ ನಗರದಲ್ಲಿ ಮತ್ತೆ 150 ಬಾಂಬ್ ಸಿಕ್ಕಿರುವುದು ಅನುಮಾನವನ್ನು ದೃಢಪಡಿಸುತ್ತಿದೆ. ಇಲ್ಲಿ ಬಾಂಬ್‌ಗಳನ್ನು ಮನಬಂದಂತೆ ಭಾರೀ ಸಂಖ್ಯೆಯಲ್ಲಿ ತಯಾರಿಸಲಾಗುತ್ತಿದೆ ಎಂಬುದು ಜಗಜ್ಜಾಹೀರಾಗಿದೆ.

ಕಳೆದ ವರ್ಷದ ಅಕ್ಟೋಬರ್ ತಿಂಗಳಿನಿಂದ ಇಲ್ಲಿಯವರೆಗೆ ಪಶ್ಚಿಮ ಬಂಗಾಳದಲ್ಲಿ ವಶಪಡಿಸಿಕೊಂಡಿರುವ ಬಾಂಬ್‌ಗಳ ಸಂಖ್ಯೆ 350ಕ್ಕೂ ಹೆಚ್ಚು. ಕೇವಲ 10 ದಿನಗಳ ಹಿಂದಷ್ಟೇ ಸಟ್ಟೋರೆಯಲ್ಲಿ 70 ಕಚ್ಚಾ ಬಾಂಬ್‌ಗಳು ಪತ್ತೆಯಾಗಿದ್ದವು. ಇದಕ್ಕೂ ಮೊದಲು ಮಲ್ಡಾ ಜಿಲ್ಲೆಯಲ್ಲಿ ಎರಡು ಡಜನ್‌ಗಿಂತ ಹೆಚ್ಚು ಕಚ್ಚಾ ಬಾಂಬ್ ಸಿಕ್ಕಿದ್ದವು. ಕಳೆದ ವರ್ಷ ಬರ್ಧ್ವಾನ್‌ನಲ್ಲಿ ಸ್ಫೋಟದ ನಂತರ ಅಕ್ಟೋಬರ್ 2ರಂದು 100ಕ್ಕೂ ಹೆಚ್ಚು ಬಾಂಬ್‌ಗಳನ್ನು ವಶಪಡಿಸಿಕೊಂಡ ಘಟನೆಯನ್ನು ಯಾರಿಂದಲೂ ಮರೆಯಲು ಸಾಧ್ಯವಿಲ್ಲ. [ಬಾಂಬ್ ಸ್ಫೋಟ ನಂತರದ 10 ಬೆಳವಣಿಗೆ]

ಎರಡು ದಿನಗಳ ಮೊದಲು ಡಂಡಂ ರೈಲ್ವೆ ನಿಲ್ದಾಣದಲ್ಲಿ ಕಚ್ಚಾ ಬಾಂಬ್ ಸ್ಫೋಟಗೊಂಡು ಇಬ್ಬರು ಬಾಲಕರು ಗಾಯಗೊಂಡಿದ್ದನ್ನು ಮರೆಯಲು ಸಾಧ್ಯವೇ ಇಲ್ಲ. ಇಲ್ಲಿಯೇ ಮತ್ತೂ ಮೂರು ಬಾಂಬ್ ಸಿಕ್ಕಿವೆ.

bomb

ಪಶ್ಚಿಮ ಬಂಗಾಳಕ್ಕೂ ಬಾಂಬ್‌ಗೂ ಸಂಬಂಧವೇನು?
ಬಾಂಬ್ ಸಂಸ್ಕೃತಿ ಪಶ್ಚಿಮ ಬಂಗಾಳಕ್ಕೆ ಹೊಸದಲ್ಲ. ವಿಶೇಷವಾಗಿ ಚುನಾವಣೆ ಸಂದರ್ಭದಲ್ಲಿ ಬಾಂಬ್‌ಗಳ ಸಾಗಾಟ ಹೆಚ್ಚಿರುತ್ತದೆ. ರಾಜಕೀಯ ಕಾಳಗಕ್ಕೋಸ್ಕರ ಹೆಚ್ಚು ಉಪಯೋಗಿಸಲ್ಪಡುತ್ತವೆ. ಬಾಂಬ್‌ಗಳು ಇಲ್ಲಿನ ರಾಜಕೀಯ ಪಕ್ಷಗಳ ಶಕ್ತಿಯ ಸಂಕೇತವಾಗಿದೆ ಎಂಬ ಆರೋಪವೂ ಇದೆ. [ಹಣ ಉಳಿಸಲು ಹೋಗಿ ಸಿಕ್ಕಿಬಿದ್ದ ರಿಯಾಜ್]

ಇಲ್ಲಿಯವರೆಗೆ ವಶಪಡಿಸಿಕೊಂಡಿರುವ ಬಾಂಬ್‌ಗಳು ವಿವಿಧ ರಾಜಕೀಯ ಪಕ್ಷಗಳಿಗೆ ಸಂಬಂಧಪಟ್ಟವು ಎಂಬುದು ಗಣನೀಯ ಅಂಶ. ಗ್ರಾಮ ಪಂಚಾಯಿತಿಯಿಂದ ಹಿಡಿದು ಲೋಕಸಭೆ ಚುನಾವಣೆವರೆಗೂ ಅನೇಕ ರಾಜಕೀಯ ಪಕ್ಷಗಳು ತಮ್ಮ ವಿರೋಧಿಗಳ ದಮನಕ್ಕೆ ಬಾಂಬ್ ಉಪಯೋಗಿಸಿವೆ.

ಬಾಂಬ್ ಗುಡಿ ಕೈಗಾರಿಕೆ : ಬಾಂಬ್ ತಯಾರಿಸುವುದು ಪಶ್ಚಿಮ ಬಂಗಾಳದಲ್ಲಿ ಗುಡಿ ಕೈಗಾರಿಕೆಯಂತಾಗಿದೆ ಎಂದು ಅಧಿಕಾರಿಯೋರ್ವರು 'ಒನ್ಇಂಡಿಯಾ ಕನ್ನಡ'ಕ್ಕೆ ತಿಳಿಸಿದ್ದಾರೆ. [ಶಂಕಿತರಲ್ಲಿ ಓರ್ವ ಎಂಬಿಎ ವಿದ್ಯಾರ್ಥಿ]

ಬಾಂಬ್ ತಯಾರಿಸುವ ಕೈಗಾರಿಕೆಗೆ ಅತಿ ಹೆಚ್ಚು ಬೇಡಿಕೆ ಬಂದಿದೆ. ಬಾಂಗ್ಲಾದೇಶಕ್ಕೆ ಪಶ್ಚಿಮ ಬಂಗಾಳದಿಂದ ನಿರಂತರ ಬಾಂಬ್ ಪೂರೈಕೆಯಾಗುತ್ತಿದೆ ಎಂಬುದಕ್ಕೆ ಬರ್ಧ್ವಾನ್ ಸ್ಫೋಟ ಒಂದು ಉದಾಹರಣೆಯಷ್ಟೇ.

ಹಲವು ನಿರುದ್ಯೋಗಿ ಯುವಕರು ಬಾಂಬ್ ತಯಾರಿಕೆಯನ್ನೇ ಕಾಯಕ ಮಾಡಿಕೊಂಡಿದ್ದಾರೆ. ಇವರಲ್ಲಿ ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದಿರುವವರು ಭಾರೀ ಸಂಖ್ಯೆಯಲ್ಲಿದ್ದಾರೆ. ಇವರಿಗೆ ದಿನಕ್ಕೆ 70 ರೂ. ಕೂಲಿ ನೀಡಲಾಗುತ್ತದೆ. [ಭವಾನಿ ಬದುಕಿನ ಹಳಿ ತಪ್ಪಿಸಿದ ಬಾಂಬ್ ಸ್ಫೋಟ]

ಇಂತಹ ಬಾಂಬ್‌ಗಳನ್ನು ಸುರಕ್ಷಿತ ಸ್ಥಳದಲ್ಲಿ ಇಡಲಾಗುತ್ತದೆ. ನಂತರ ರಾಜಕೀಯ ಕಾಳಗಕ್ಕಾಗಿ ಹಾಗೂ ಉಗ್ರ ಚಟುವಟಿಕೆಗಾಗಿ ಉಪಯೋಗಿಸಲಾಗುತ್ತದೆ.

English summary
The finding of 150 crude bombs in Birbhun, West Bengal today is once again a grim reminder that bombs are being manufactured at will and not in small numbers. These bombs are being used in political fights and terrorism.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X