• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

26/11 ದಾಳಿ : ಡೇವಿಡ್ ಹೆಡ್ಲಿ ಬಾಯ್ಬಿಟ್ಟರೆ ಭಾರತಕ್ಕೇನು ಲಾಭ!

By ವಿಕಾಸ್ ನಂಜಪ್ಪ
|

ನವದೆಹಲಿ, ಡಿ. 11: 2008ರ ಮುಂಬೈ ದಾಳಿ ಪ್ರಕರಣದ ಪ್ರಮುಖ ಸಂಚುಕೋರ ಪಾಕಿಸ್ತಾನ-ಅಮೆರಿಕದ ಲಷ್ಕರ್ ಉಗ್ರ ಡೇವಿಡ್ ಕೋಲ್​ವುನ್ ಹೆಡ್ಲಿ ಕೊನೆಗೂ ಭಾರತದ ಕೋರ್ಟ್ ವಿಚಾರಣೆಗೆ ಸಿಕ್ಕಿದ್ದಾನೆ. ಈ ಪ್ರಕರಣದಲ್ಲಿ ಮಾಫೀ ಸಾಕ್ಷಿ (ಅಪ್ರೂವರ್) ಯಾಗಲು ಒಪ್ಪಿ ಕೊಂಡಿದ್ದು, 26/11 ದುರ್ಘಟನೆಯ ಸಂಪೂರ್ಣ ವಿವರವನ್ನು ಹೇಳಲು ಸಿದ್ಧ ಎಂದಿದ್ದಾನೆ.

ಪಾಕಿಸ್ತಾನದಲ್ಲಿ ಜನಿಸಿದ ದಾವೂದ್ ಸಯೀದ್ ಗಿಲಾನಿ ಅಲಿಯಾಸ್ ಡೇವಿಡ್ ಹೆಡ್ಲಿ ವಿಚಾರಣೆ ನಡೆಸಲು ಯುಎಸ್ಎನಿಂದ ಭಾರತ ಅನುಮತಿ ಪಡೆದುಕೊಂಡಿದೆ. ಅಮೆರಿಕ ಕೋರ್ಟ್ ಈಗಾಗಲೇ ಜೀವಾವಧಿ ಶಿಕ್ಷೆ ವಿಧಿಸಿದ್ದು, ಮುಂಬೈ ಕೋರ್ಟ್ ಮತ್ತೆ ಶಿಕ್ಷೆ ನೀಡಬಾರದು. ಇದಕ್ಕೆ ಒಪ್ಪಿದಲ್ಲಿ ವಿಚಾರಣೆಗೆ ಸಂಪೂರ್ಣ ಸಹಕಾರ ನೀಡಲು ಸಿದ್ಧ ಎಂದು ಹೆಡ್ಲಿ ಹೇಳಿದ್ದಾನೆ. [ಮುಂಬೈ ದಾಳಿ ರುವಾರಿ ಹೆಡ್ಲಿಗೆ 35 ವರ್ಷ ಶಿಕ್ಷೆ]

ಈಗಾಗಲೇ ಎಫ್ ಬಿಐ ಮುಂದೆ ಎಲ್ಲವನ್ನು ವಿವರಿಸಿರುವ ಹೆಡ್ಲಿ ಈಗ ಮುಂಬೈ ಕೋರ್ಟಿನ ವಿಚಾರಣೆ ಸಂದರ್ಭದಲ್ಲಿ ಯಾವ ಸತ್ಯ ಹೊರಹಾಕುತ್ತಾನೆ, ಇದರಿಂದ ಪಾಕಿಸ್ತಾನದ ಉಗ್ರ ಸಂಘಟನೆಗಳಿಗೆ ಯಾವ ಆಪತ್ತು ಕಾದಿದೆ ಎಂಬುದು ಸದ್ಯದ ಕುತೂಹಲದ ಸಂಗತಿ.

ಪಾಕಿಸ್ತಾನದಿಂದ ಅಮೆರಿಕಕ್ಕೆ ವಲಸೆ ಹೋಗಿದ್ದ ಹೆಡ್ಲಿ, ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಯೊಂದಿಗೆ ಗುರುತಿಸಿಕೊಂಡು ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್​ಐ ಜತೆಗೂ ನಂಟು ಹೊಂದಿದ್ದ.ಭಾರತದ ವಿರುದ್ಧ ಪಾಕ್ ಗುಪ್ತಚರ ಸಂಸ್ಥೆ ಐಎಸ್​ಐ ನಡೆಸಿರುವ ಸಂಚು, ಗಡಿಭಾಗದಲ್ಲಿನ ಭಯೋತ್ಪಾದನೆ ಚಟುವಟಿಕೆಗಳ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ಹೆಡ್ಲಿ ಏನು ಹೇಳಬಹುದು? ಭಾರತದ ತನಿಖಾ ತಂಡ ಬಯಸಿರುವ ಉತ್ತರವೇನು?

ಲಷ್ಕರ್ ನಾಯಕರ ಬಗ್ಗೆ ಮಾಹಿತಿ

ಲಷ್ಕರ್ ನಾಯಕರ ಬಗ್ಗೆ ಮಾಹಿತಿ

* ಲಷ್ಕರ್ ನ ವಿದೇಶಾಂಗ ವ್ಯವಹಾರ ಉಸ್ತುವಾರಿ ಹೊತ್ತಿರುವ ಅಬ್ದುರ್ ರೆಹಮಾನ್ ಮಕ್ಕಿಯ ಪಿಎ ಸಾಜೀದ್ ಮಾಜಿದ್ ಜೊತೆ ನಾನು ಕಾರ್ಯನಿರ್ವಹಿಸಿದೆ.

* 3 ವರ್ಷ ಕಠಿಣ ತರಬೇತಿ ನಂತರ ಕಾಶ್ಮೀರದಲ್ಲಿ ಹೋರಾಟಕ್ಕೆ ಹೋಗಲು ಮುಂದಾದೆ. ಅದರೆ, ನನಗಾಗಿ 26/11 ಸಂಚು ರೂಪಿಸುವ ಹೊಣೆ ಇತ್ತು.

* ಕೋಲ್ಕತ್ತಾ, ಬೆಂಗಳೂರು, ದೆಹಲಿ, ಪುಣೆ ನಮ್ಮ ಹಿಟ್ ಲಿಸ್ಟ್ ನಲ್ಲಿತ್ತು.

* ಯುಎಸ್ ವೀಸಾ ಕೇಂದ್ರದಿಂದ ಯುಎಸ್ ಪಾಸ್ ಪೋರ್ಟ್, ವೀಸಾ ಪಡೆದೆ ಇದಕ್ಕೆಲ್ಲ ನನ್ನ್ ಕಾಲೇಜು ಗೆಳೆಯ ರಾಣಾ ನೆರವಾದ.

ಹಫೀಜ್ ಸಯೀದ್ ಗೆ ಎಲ್ಲವೂ ಗೊತ್ತಿತ್ತು

ಹಫೀಜ್ ಸಯೀದ್ ಗೆ ಎಲ್ಲವೂ ಗೊತ್ತಿತ್ತು

26/11 ದಾಳಿ ಬಗ್ಗೆ ಹಫೀಜ್ ಸಯೀದ್ ಗೆ ಎಲ್ಲವೂ ಗೊತ್ತಿತ್ತು. ಜಾಕಿ ಉರ್ ರೆಹಮಾನ್ ಲಖ್ವಿ, ಸಾಜೀದ್ ಮಾಜೀದ್, ಮುಜ್ಜಾಮಿಲ್, ಅಬ್ದುರ್ ರೆಹಮಾನ್, ಅಬು ಅಲ್ ಕ್ವಾಮಾ, ಅಬುಕಾಫಾ, ಅಬು ಅನಾಸ್, ಅಬ್ದುಲ್ ಅಜೀಜ್, ಅಬು ಹಂಜಾ ಹಾಗೂ ಯಾಕೂಬ್ ಪ್ರಮುಖ ಪಾತ್ರಧಾರಿಗಳು.

ಸೆಪ್ಟೆಂಬರ್ 14, 2006ರಂದು ಮೊದಲಿಗೆ ಭಾರತಕ್ಕೆ ಕಾಲಿಟ್ಟೆ. ಶಿಕಾಗೋದಲ್ಲಿದ್ದ ರಾಣಾನಿಂದ ಎಲ್ಲಾ ಮಾಹಿತಿ ಸಿಗುತ್ತಿತ್ತು. ಕಾರ್ಪೊರೇಟ್ ಕಟ್ಟಡಗಳ ವಿಡಿಯೋ, ಗೇಟ್ ವೇ ಆಫ್ ಇಂಡಿಯಾ, ವಿಟಿ ಸ್ಟೇಷನ್, ಲಿಯೋಪೊಲ್ಡ್ ಕೆಫೆ ಎಲ್ಲದರ ಚಿತ್ರ ತೆಗೆಯುತ್ತಿದ್ದೆ.

ಪಾಕಿಸ್ತಾನದ ಪಾತ್ರವೇನು?

ಪಾಕಿಸ್ತಾನದ ಪಾತ್ರವೇನು?

ಲೆಫ್ಟಿನೆಂಟ್ ಕರ್ನಲ್ ಹಂಜಾ ನಿರ್ದೇಶನ ಹಾಗೂ 25,000 ಡಾಲರ್ ಕಾರ್ಯಾಚರಣೆಗೆ ದುಡ್ಡು ನೀಡಲಾಗಿತ್ತು. ಐಎಸ್ ಐ ಅಧಿಕಾರಿಗಳ ಜೊತೆ ಲಷ್ಕರ್ ನ ತರಬೇತುದಾರರ ಸಂಪರ್ಕ ನಿರಂತರವಾಗಿದೆ. ತಾಜ್ ಮೇಲೆ ದಾಳಿ ಮಾತ್ರ ಮೊದಲ ಗುರಿಯಾಗಿತ್ತು. ತಾಜ್ ನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಗಳ ಸಮಾವೇಶ ನಿಗದಿಯಾಗಿತ್ತು. ಇದಕ್ಕಾಗಿ ಮೂವರು ತಯಾರಿಗೊಳಿಸಿ ಕಳಿಸಲಾಯಿತು. ಅದರೆ, ಬೋಟ್ ಕಲ್ಲಿಗೆ ಬಡಿದು ಕಾರ್ಯಾಚರಣೆ ವಿಳಂಬವಾಯಿತು.ಗೂಗಲ್ ಮ್ಯಾಪ್ ಬಳಸಿ ತಾಜ್ ಹೊಟೆಲ್ ಧ್ವಂಸದ ಸ್ಕೆಚ್ ಹಾಕಿದೆ. ಮೇಜರ್ ಇಕ್ಬಾಲ್, ಸಮೀರ್ ಅಲಿ ನೆರವು ಪಡೆದುಕೊಂಡಿದೆ. ಮೊಬೈಲ್ ನಲ್ಲೇ ಹೆಚ್ಚಿನ ಚಿತ್ರ ತೆಗೆದೆ.

ಮೊದಲ ಪ್ರಯತ್ನ್ ವಿಫಲವಾಗಿತ್ತು, ಅದರೆ, ನಂತರ ಪಾಸ್

ಮೊದಲ ಪ್ರಯತ್ನ್ ವಿಫಲವಾಗಿತ್ತು, ಅದರೆ, ನಂತರ ಪಾಸ್

ಡೆನ್ಮಾರ್ಕ್ ನ ಮಿಕ್ಕಿ ಮೌಸ್ ಯೋಜನೆ ಮೇಲೆ ಹೆಚ್ಚಿನ ಗಮನ ಹರಿಸಿದ್ದರಿಂದ ತಾಜ್ ದಾಳಿ ಸ್ಕೆಚ್ ಪೂರ್ಣಗೊಳ್ಳಲಿಲ್ಲ. ನವೆಂಬರ್ 26ರಂದು ಸಾಜೀದ್ ನಿಂದ ಒಂದು ಎಸ್ಎಂಎಸ್ ಬಂದಿತು. ಟಿವಿ ಆನ್ ಮಾಡಿ ನೋಡು ತಾಜ್ ದಾಳಿ ಜಾರಿಯಲ್ಲಿದೆ ಎಂದಿದ್ದ. ದಾಳಿ ಪೂರ್ತಿಯಾದ ಮೇಲೆ ಸಾಜಿದ್ ಭೇಟಿ ಮಾಡಿದೆ. ಕಸಬ್ ನನ್ನು ಉಳಿಸಿಕೊಳ್ಳಲು ಯತ್ನಿಸಲಾಯಿತು. ವಿಟಿ ಸ್ಟೇಷನ್ ಬಳಿ ಹೆಚ್ಚಿನ ಹೊತ್ತು ಇದ್ದಿದ್ದು ಮುಳುವಾಯಿತು, ಪೊಲೀಸ್ ಪೇದೆಯಿಂದ ಸಿಕ್ಕಿಬೀಳಬೇಕಾಯಿತು ಎಂದು ವಿವರಿಸಿದ. ಅಫ್ಘಾನಿಸ್ತಾನದ ವಿಷಯದಿಂದ ಜಗತ್ತಿನ ಗಮನ ಬೇರೆಡೆ ಸೆಳೆಯಲು ಈ ಯೋಜನೆ ಹಮ್ಮಿಕೊಳ್ಳಲಾಗಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
David Headley was pardoned on Thursday, Dec 10 by a court in Mumbai after he agreed to turn approver. An approver basically aids the court or the investigation by spilling out details of the operation and in this case, Headley has agreed to tell the court everything he knows regarding the 26/11 attack.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more