ಮೌಖಿಕ ಲೈಂಗಿಕತೆ ಅತ್ಯಾಚಾರವೆ? ನಿರ್ಧರಿಸಲಿದೆ ಕೋರ್ಟ್

Subscribe to Oneindia Kannada

ಅಹಮದಾಬಾದ್, ನವೆಂಬರ್ 7: ಪತ್ನಿಯನ್ನು 'ಮೌಖಿಕ ಸೆಕ್ಸ್' ನಡೆಸುವಂತೆ ಒತ್ತಾಯಪಡಿಸುವುದು ಅತ್ಯಾಚಾರ ಹೌದೋ ಅಲ್ಲವೋ ಎಂಬುದನ್ನು ಗುಜರಾತ್ ಹೈಕೋರ್ಟ್ ನಿರ್ಧಾರ ಮಾಡಲಿದೆ. ಈ ಆಧಾರದ ಮೇಲೆ ಪತಿಯ ವಿರುದ್ಧ ದಾವೆ ಹೂಡಬಹುದೇ ಎಂಬುದನ್ನೂ ಕೋರ್ಟ್ ನಿರ್ಧರಿಸಲಿದೆ.

ಮಹಿಳೆಯೊಬ್ಬರು ತಮ್ಮ ಪತಿ ಮೌಖಿಕ ಸೆಕ್ಸ್ ಗೆ ಒತ್ತಾಯಪಡಿಸಿದರು ಎಂಬ ಕಾರಣಕ್ಕೆ ಸಬರ್ಕಾಂತ್ ಜಿಲ್ಲೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಇದರ ವಿಚಾರಣೆಯನ್ನು ನ್ಯಾಯಮೂರ್ತಿ ಜೆಬಿ ಪರ್ಡಿವಾಲಾ ಅವರು ಸೋಮವಾರ ನಡೆಸಿದ್ದು ರಾಜ್ಯ ಸರಕಾರಕ್ಕೆ ನೊಟೀಸ್ ನೀಡಿದ್ದಾರೆ.

Is oral sex rape? Gujarat HC to decide

ವಿಚಾರಣೆ ವೇಳೆ ವೈವಾಹಿಕ ಅತ್ಯಾಚಾರದ ಬಗ್ಗೆ ಮಾತನಾಡಿದ ನ್ಯಾ. ಪರ್ಡಿವಾಲಾ "ಭಾರತದಲ್ಲಿ ವೈವಾಹಿಕ ಅತ್ಯಾಚಾರ ಅಸ್ತಿತ್ವದಲ್ಲಿದೆ. ಇದು ಮದುವೆಯ ವ್ಯವಸ್ಥೆಯ ಮೇಲಿರುವ ನಂಬಿಕೆಯ ಬುಡವನ್ನೇ ಅಲ್ಲಾಡಿಸಿದೆ," ಎಂದು ಹೇಳಿದ್ದಾರೆ.

ಈ ಸಂಬಂಧ ರಾಜ್ಯ ಸರಕಾರಕ್ಕೆ ನೊಟೀಸ್ ನೀಡಿರುವ ಹೈಕೋರ್ಟ್ ಹಲವು ಪ್ರಶ್ನೆಗಳಲ್ಲಿ ಸರಕಾರದ ಅಭಿಪ್ರಾಯ ಕೇಳಿದೆ.

ನೈಸರ್ಗಿಕವಲ್ಲದ ಸೆಕ್ಸ್ ಸಂಬಂಧ ಗಂಡನ ವಿರುದ್ಧ ಐಪಿಸಿ ಸೆಕ್ಷನ್ 377ರ ಅಡಿಯಲ್ಲಿ ಪತ್ನಿ ದಾವೆ ಹೂಡಬಹುದೇ? ಒಂದೊಮ್ಮೆ ಪತಿಯು ಪತ್ನಿಗೆ ಮೌಖಿಕ ಸೆಕ್ಸ್ ನಲ್ಲಿ ಪಾಲ್ಗೊಳ್ಳುವಂತೆ ಒತ್ತಾಯಿಸಿದರೆ ಅದನ್ನೂ ಸೆಕ್ಷನ್ 377ರ ಅಡಿಯಲ್ಲಿ ಸೇರಿಸಬಹುದೇ? ಮೊದಲಾದ ಪ್ರಶ್ನೆಗಳನ್ನು ಕೇಳಿದೆ.

ರಾಜ್ಯ ಸರಕಾರದ ಅಭಿಪ್ರಾಯ ಆಧರಿಸಿ ಈ ಸಂಬಂಧ ಕೋರ್ಟ್ ತನ್ನ ತೀರ್ಮಾನ ತೆಗೆದುಕೊಳ್ಳಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Gujarat high court is to decide whether forcing a wife to perform oral sex amounts to rape in marital life.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ