ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಷಪ್ ವಿರುದ್ಧ ಸತ್ಯಾಗ್ರಹಕ್ಕೆ ಸಂತ್ರಸ್ತೆ ಕೂತರೂ ಪಕ್ಷಗಳು ಗಪ್ ಚುಪ್

|
Google Oneindia Kannada News

ಕೇರಳದಲ್ಲಿ ಜಲಂಧರ್ ಬಿಷಪ್- ಅತ್ಯಾಚಾರ ಆರೋಪಿ ಫ್ರಾಂಕೋ ಮುಲಕ್ಕಲ್ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ಈಗ ಅತ್ಯಾಚಾರ ಸಂತ್ರಸ್ತ ಮಹಿಳೆ ಕೂಡ ಸೇರಿಕೊಂಡಿದ್ದಾರೆ. 44 ವರ್ಷದ ಸನ್ಯಾಸಿನಿ ಮೇಲೆ 2014 ಮತ್ತು 2016ರ ಮಧ್ಯೆ ಹಲವು ಬಾರಿ ಫ್ರಾಂಕೋ ಮುಲಕ್ಕಲ್ ಅತ್ಯಾಚಾರ ಎಸಗಿದ್ದಾರೆ ಎಂಬುದು ಆರೋಪ.

ಬಿಷಪ್ ಬಂಧನಕ್ಕಾಗಿ ಒತ್ತಾಯಿಸಿ ಜಂಟಿ ಕ್ರಿಶ್ಚಿಯನ್ ಕೌನ್ಸಿಲ್ ನ 85 ವರ್ಷದ ಜೋಸ್ ಜೋಸೆಫ್, ರೈತರಾದ ಸ್ಟೀಫನ್ ಮ್ಯಾಥ್ಯೂಸ್ ಸೆಪ್ಟೆಂಬರ್ 9ರಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಬಂಧನಕ್ಕೆ ಒತ್ತಡ ಹೆಚ್ಚುತ್ತಿದ್ದಂತೆ ಸೋಮವಾರದಂದು ಪೋಪ್ ಗೆ ಪತ್ರ ಬರೆದಿರುವ ಬಿಷಪ್ ಫ್ರಾಂಕೋ ಮುಲಕ್ಕಲ್, ತಾತ್ಕಾಲಿಕವಾಗಿ ತಮ್ಮ ಜವಾಬ್ದಾರಿಯಿಂದ ಬಿಡುಗಡೆ ಮಾಡುವಂತೆ ಕೋರಿಕೊಂಡಿರುವುದಾಗಿ ತಿಳಿದುಬಂದಿದೆ.

ಅತ್ಯಾಚಾರ ಆರೋಪ: ಸ್ಥಾನ ತ್ಯಜಿಸಿದ ಬಿಷಪ್ ಫ್ರಾಂಕೋಅತ್ಯಾಚಾರ ಆರೋಪ: ಸ್ಥಾನ ತ್ಯಜಿಸಿದ ಬಿಷಪ್ ಫ್ರಾಂಕೋ

ಫ್ರಾಂಕೋ ಬಂಧನ ಆಗದ ಹೊರತು ವ್ಯಾಟಿಕನ್ ನಿಂದ ರಾಜೀನಾಮೆಗಾಗಿ ಒತ್ತಾಯ ಮಾಡುವ ಸಾಧ್ಯತೆ ಇಲ್ಲ ಎಂದು ಚರ್ಚ್ ಮೂಲಗಳು ತಿಳಿಸಿವೆ. ಆದರೆ ಐಪಿಸಿ ಸೆಕ್ಷನ್ 377 (ಅತ್ಯಾಚಾರಕ್ಕಾಗಿ ಶಿಕ್ಷೆ) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದರೂ ಈ ವರೆಗೆ ಬಂಧಿಸಿಲ್ಲ.

Is Bishop Franco Mulakkal so powerful?

ಕೇರಳದಲ್ಲಿ ಕ್ಯಾಥೋಲಿಕ್ ಚರ್ಚ್ ಗಳು ಬಹಳ ಪ್ರಭಾವಶಾಲಿ ಎಂಬುದರಲ್ಲಿ ಎರಡು ಮಾತಿಲ್ಲ. ಅಂಥ ಕ್ಯಾಥೋಲಿಕ್ ಚರ್ಚ್ ಗೆ ಸೇರಿದ ಬಿಷಪ್ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರಕಾರ ಹಾಗೂ ಅದರ ವಿರುದ್ಧ ಧ್ವನಿ ಎತ್ತಲು ವಿರೋಧ ಪಕ್ಷಗಳು ಯೋಚಿಸುತ್ತಿವೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.

'ಹೆಣ್ಣು ಭಕ್ಷಕ' ಬಿಷಪ್, ಅಸಹಾಯಕ ಸನ್ಯಾಸಿನಿ, ನೆರವಿಗೆ ಬಾರದ ಚರ್ಚ್ ವ್ಯವಸ್ಥೆ'ಹೆಣ್ಣು ಭಕ್ಷಕ' ಬಿಷಪ್, ಅಸಹಾಯಕ ಸನ್ಯಾಸಿನಿ, ನೆರವಿಗೆ ಬಾರದ ಚರ್ಚ್ ವ್ಯವಸ್ಥೆ

ಸನ್ಯಾಸಿನಿಯರು ದೊಡ್ಡ ಮಟ್ಟದಲ್ಲಿ ಬಿಷಪ್ ಫ್ರಾಂಕೋ ವಿರುದ್ಧ ಆರೋಪ ಮಾಡುತ್ತಿದ್ದರೂ, ಕೇರಳದಲ್ಲಿ ಈ ಪ್ರಕರಣ ಭಾರೀ ಚರ್ಚೆ ನಡೆಯುತ್ತಿದ್ದರೂ ಸಂತ್ರಸ್ತೆಯರ ಪರವಾಗಿ ಯಾವುದೇ ರಾಜಕೀಯ ಪಕ್ಷ ಧ್ವನಿ ಎತ್ತಿಲ್ಲ, ನೈತಿಕ ಬೆಂಬಲ ಸೂಚಿಸಿಲ್ಲ. ಕೇರಳದಲ್ಲಿ ಸೋಮವಾರ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ವಿರೋಧ ಪಕ್ಷ) ಅತ್ಯಾಚಾರ ಪ್ರಕರಣಗಳಲ್ಲಿ ನ್ಯಾಯ ದೊರಕಿಸಬೇಕೆಂದು ಪ್ರತಿಭಟನೆ ನಡೆಸಿದೆ.

ಆದರೆ, ಇದು ಆಡಳಿತ ಪಕ್ಷ ಸಿಪಿಎಂ ಅಧಿಕಾರ ಹಿಡಿದ ಮೇಲೆ ಕೇರಳದಲ್ಲಿ ನಡೆದ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಆಗಿತ್ತೇ ವಿನಾ ಸನ್ಯಾಸಿನಿಯರ ಪರವಾದ ಧ್ವನಿ ಆಗಿರಲಿಲ್ಲ. ಅಂದರೆ ಮುಲಕ್ಕಲ್ ಕಥೆ ಏನು? ಏತಕ್ಕಾಗಿ ಬಿಷಪ್ ವಿರುದ್ಧ ಯಾವುದೇ ಧ್ವನಿ ಎತ್ತುತ್ತಿಲ್ಲ?

ಅತ್ಯಾಚಾರ ಸಂತ್ರಸ್ಥೆಯ ಚಿತ್ರ ಬಿಡುಗಡೆ ಮಾಡಿದ ಮಿಷನರಿ ವಿರುದ್ಧ ದೂರುಅತ್ಯಾಚಾರ ಸಂತ್ರಸ್ಥೆಯ ಚಿತ್ರ ಬಿಡುಗಡೆ ಮಾಡಿದ ಮಿಷನರಿ ವಿರುದ್ಧ ದೂರು

ವಿರೋಧ ಪಕ್ಷ ಕಾಂಗ್ರೆಸ್ ನ ನಾಯಕ ರಮೇಶ್ ಚೆನ್ನಿತಾಲ ಅವರು ಫ್ರಾಂಕೋ ವಿರುದ್ಧ ಪ್ರತಿಭಟನೆ ನಡೆಸಿದರೂ ಅವೇ ಮಾತುಗಳನ್ನು ಹೇಳುತ್ತಿದ್ದಾರೆ. ಈ ಪ್ರಕರಣ ಬೇಗ ಬಗೆಹರಿಯಬೇಕು ಎಂದು ಉಳಿದವುಗಳ ಬಗ್ಗೆ ಮಾತಾಡುತ್ತಾರೆ. ಯಾವುದೇ ಅವಕಾಶ ಸಿಕ್ಕರೂ ಎಡ ಪಕ್ಷಗಳ ವಿರುದ್ಧ ದೊಡ್ಡ ಧ್ವನಿ ಮಾಡುವ ಬಿಜೆಪಿಯಿಂದಲೂ ಗುರುತಿಸಬಹುದಾದಂಥ ಹೋರಾಟ, ಆಕ್ಷೇಪ ಕಂಡುಬರುತ್ತಿಲ್ಲ.

ಬಿಷಪ್ ಫ್ರಾಂಕೋ ಮುಲಕ್ಕಲ್ ಅಷ್ಟು ಪ್ರಭಾವಿಯೇ? ಹಣ ಬಲ ಕೆಲಸ ಮಾಡುತ್ತಿದೆಯಾ ಅಥವಾ ವೋಟ್ ಬ್ಯಾಂಕ್ ರಾಜಕಾರಣದ ಹಿಂದೆ ರಾಜಕೀಯ ಪಕ್ಷಗಳು ಬಿದ್ದಿವೆಯಾ ಎಂಬು ಅನುಮಾನ ಮೂಡುತ್ತದೆ.

English summary
It is not a secret that the Catholic Church is a powerful institution in the state of Kerala. It is also well known that the Church heads – like their counterparts in other religions – are questioned by none, as their authority is supposed to be beyond criticism. Bishop Franco Mulakkal, it seems, is no exception.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X