ವೈಷ್ಣೋದೇವಿ, ಶಿರಡಿ ನಂತರ ವಾರಣಾಸಿಗೆ ಪ್ಯಾಕೇಜ್ ಟೂರ್
ನವದೆಹಲಿ, ಜುಲೈ 04: ಭಾರತೀಯ ರೈಲ್ವೆಯ ಕೇಟರಿಂಗ್ ಹಾಗೂ ಪ್ರವಾಸೋದ್ಯಮ ನಿಗಮ (IRCTC) ವಿಶೇಷ ತೀರ್ಥಯಾತ್ರೆ ಪ್ಯಾಕೇಜ್ ಮುಂದುವರೆಸಿದೆ. 'ಭಾರತ್ ದರ್ಶನ್ ಸ್ಪೆಷನ್ ಟ್ರೈನ್' ಹೆಸರಿನ ಈ ಆಫರ್ ನಲ್ಲಿ ಪ್ರಮುಖ ತೀರ್ಥಕ್ಷೇತ್ರಗಳ ಪ್ರವಾಸ ಕೈಗೊಳ್ಳಬಹುದಾಗಿದೆ. ವೈಷ್ಣೋದೇವಿ, ಶಿರಡಿ ಪುಣ್ಯಕ್ಷೇತ್ರಗಳ ದರ್ಶನ ಪ್ಯಾಕೇಜ್ ನಂತರ 6 ದಿನಗಳ ಕಾಲದ ವಾರಣಾಸಿ ಟೂರ್ ಪ್ಯಾಕೇಜ್ ನೀಡಲಾಗಿದೆ.
ಹರಿದ್ವಾರ ಹಾಗೂ ಋಷಿಕೇಶ, ಜಮ್ಮು ಮತ್ತು ಕಾಶ್ಮೀರದ ವೈಷ್ಣೋದೇವಿ ದರ್ಶನ ಪಡೆಯುವ ಟೂರ್ ಈಗಾಗಲೇ ಚಾಲನೆ ಪಡೆದುಕೊಂಡಿದೆ. ಶಿರಡಿ ಪ್ಯಾಕೇಜ್ ಟೂರ್ ನಲ್ಲಿ ಶಿರಡಿ, ಶನಿ ಶಿಂಗ್ನಾಪುರ್, ಮುಕ್ತಿಧಾಮ್, ಪಂಚವಟಿ ಹಾಗೂ ತ್ರಯಂಬಕೇಶ್ವರ್ ದರ್ಶನ ಪಡೆಯಬಹುದು. ಐಅರ್ ಸಿಟಿಸಿ ವೆಬ್ ತಾಣದಲ್ಲಿ ಟಿಕೆಟ್ ಬುಕ್ ಮಾಡಬಹುದು. ಅಥವಾ ವಲಯ ಕಚೇರಿಯಲ್ಲಿ ಟಿಕೆಟ್ ಪಡೆಯಬಹುದು.

ಗಯಾ-ವಾರಣಾಸಿ-ಸಾರನಾಥ್ -ಅಲಹಬಾದ್ ಪ್ರವಾಸದ ಪ್ಯಾಕೇಜ್ ಇದಾಗಿದೆ. ವಿಶ್ವದ ಅತ್ಯಂತ ಪುರಾತನ ನಗರಗಳಲ್ಲಿ ಒಂದೆನಿಸಿರುವ ಕಾಶಿ-ಬನಾರಸ್ ನಗರವನ್ನು ಸಪ್ತ ಪವಿತ್ರ ನಗರಗಳೆಂದು ಹಿಂದು ಹಾಗೂ ಜೈನರು ನಂಬಿದ್ದಾರೆ. ಮೃತ ವ್ಯಕ್ತಿಯು ಮೋಕ್ಷ ಪಡೆಯಲು ಇದುವೇ ಮುಕ್ತಿಧಾಮ ಎಂಬ ನಂಬಿಕೆಯೂ ಬಲವಾಗಿದೆ. ಕಾಶಿ ವಿಶ್ವನಾಥನ ಸನ್ನಿಧಿ, ಗಂಗಾರತಿ ನೋಡುವುದೇ ಪುಣ್ಯ ಎನ್ನಲಾಗಿದೆ.
ಈ ಟೂರ್ ಪ್ಯಾಕೇಜ್ ಬೆಲೆ 11,555 ರು(ಜಿಎಸ್ಟಿ ಸೇರಿಸಿ), ಪ್ಯಾಕೇಜ್ ಕೋಡ್ : SCBR07
ಪ್ಯಾಕೇಜ್ ನಲ್ಲಿ ಸಿಗುವ ಸೌಲಭ್ಯ
* ಟ್ರೈನ್ ಪ್ರಯಾಣವು 3ಎ / ಎಸ್ ಎಲ್ ಕ್ಲಾಸ್ ನಲ್ಲಿರಲಿದೆ.
* ಎಸಿ ವ್ಯವಸ್ಥೆ, ಎಸಿ ಬಸ್ ವ್ಯವಸ್ಥೆ ಪ್ಯಾಕೇಜ್ ನಲ್ಲಿರುವಂತೆ ಸಿಗಲಿದೆ.
* ಸಾಮಾನ್ಯ ದರ್ಶನ ವ್ಯವಸ್ಥೆ ಮಾಡಲಾಗಿರುತ್ತದೆ. ಇದಕ್ಕೆ ನೆರವು ಸಿಗಲಿದೆ.
* ಪ್ರಯಾಣ ವಿಮೆ ಸೌಲಭ್ಯವಿದೆ.
* ಟೋಲ್ ಶುಲ್ಕ, ಪಾರ್ಕಿಂಗ್, ಜಿಎಸ್ಟಿ ಎಲ್ಲವೂ ಸೇರಿರುತ್ತದೆ.
* ಆಹಾರ : 3 ಬಾರಿ ಬೆಳಗಿನ ಉಪಹಾರ, 1 ಊಟ,3 ರಾತ್ರಿ ಊಟ
* ಐ ಆರ್ ಸಿಟಿಸಿ ಟೂರಿಸಂ ವೆಬ್ ತಾಣದಲ್ಲಿ ಮಾತ್ರ ಟಿಕೆಟ್ ಕ್ಯಾನ್ಸಲ್ ಮಾಡಿಕೊಳ್ಳಬಹುದು.












Click it and Unblock the Notifications