IRCTC Char Dham Yatra: ಭಾರತದ ಪ್ರಮುಖ ಧಾರ್ಮಿಕ ಕೇಂದ್ರಗಳಿಗೆ 8,250 ಕಿಮೀ ರೈಲು ಪ್ರಯಾಣ- ಟಿಕೆಟ್‌ ದರ, ವಿವರ

ನವದೆಹಲಿ, ಸೆಪ್ಟೆಂಬರ್‌ 15: 186 ಪ್ರಯಾಣಿಕರು ಗುರುವಾರ ಚಾರ್‌ ದಾಮ್‌ ಯಾತ್ರೆಯನ್ನು ಕೈಗೊಂಡಿದ್ದಾರೆ. ಭಾರತೀಯ ರೈಲ್ವೆಯು ದೇಶದ ಪ್ರಮುಖ ಧಾರ್ಮಿಕ ಕೇಂದ್ರಗಳಿಗೆ ಈ ವಿಶೇಷ ರೈಲನ್ನು ನಿಯೋಜಿಸಿದೆ. ಇದು 17 ದಿನಗಳ ಪ್ರಯಾಣವಾಗಿದ್ದು, 8,250 ಕಿಲೋಮೀಟರ್ ಸಂಚರಿಸಲಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಪ್ರಯಾಣವು 17 ದಿನಗಳವರೆಗೆ ಇರುತ್ತದೆ. ಭಾರತದಾದ್ಯಂತ ಸುಮಾರು 8,250 ಕಿಲೋಮೀಟರ್ ದೂರವನ್ನು ಕ್ರಮಿಸುತ್ತದೆ. ಭಾರತೀಯ ರೈಲ್ವೇಯಿಂದ ನಿರ್ವಹಿಸಲ್ಪಡುವ ಈ ರೈಲಿಗೆ ಗುರುವಾರ ಸಂಜೆ ಹಜರತ್ ನಿಜಾಮುದ್ದೀನ್ ನಿಲ್ದಾಣದಿಂದ ಚಾಲನೆ ನೀಡಲಾಯಿತು.

IRCTC Char Dham Yatra: Rediscover India’s Spirituality Abroad THIS Special Train; Check Details Here

ಪ್ರಮುಖವಾಗಿ ವಾರಣಾಸಿ, ನಾಸಿಕ್, ಮಧುರೈ ಮತ್ತು ಹಂಪಿಯಲ್ಲಿ ನಿಲುಗಡೆ ಇರುತ್ತದೆ ಎಂದು ಉತ್ತರ ರೈಲ್ವೆ ವಕ್ತಾರರು ತಿಳಿಸಿದ್ದಾರೆ.

ಚಾರ್ ಧಾಮ್ ಯಾತ್ರೆಯ ವಿವರಗಳು

ಪ್ರವಾಸದ ಪ್ಯಾಕೇಜ್ ಹೆಸರು: ಚಾರ್ ಧಾಮ್ ಯಾತ್ರಾ
ಪ್ರವಾಸದ ಅವಧಿ: 16 ರಾತ್ರಿಗಳು / 17 ದಿನಗಳು
ಪ್ರವಾಸದ ದಿನಾಂಕ: 14ನೇ ಸೆಪ್ಟೆಂಬರ್ 2023
ಪ್ರವಾಸದ ವಿವರ: ದೆಹಲಿ - ಋಷಿಕೇಶ - ಜೋಶಿಮಠ - ಬದರಿನಾಥ್ - ವಾರಣಾಸಿ - ಪುರಿ - ರಾಮೇಶ್ವರಂ - ಮಧುರೈ - ಹಂಪಿ - ನಾಸಿಕ್ - ದ್ವಾರಕಾ - ದೆಹಲಿ
ಪ್ಯಾಕೇಜ್ ಬೆಲೆ: 62,985 ರೂಪಾಯಿ/ ಪ್ರತಿ ವ್ಯಕ್ತಿಗೆ ಮಾತ್ರ.

ಚಾರ್ ಧಾಮ್ ಯಾತ್ರೆಯ ವಿಶೇಷತೆಗಳು

ಯಾತ್ರಾರ್ಥಿಗಳನ್ನು ಯಾತ್ರೆಗೆ ಕರೆದೊಯ್ಯುವ ಭಾರತ್ ಗೌರವ್ ಡಿಲಕ್ಸ್ ಎಸಿ ಟೂರಿಸ್ಟ್ ರೈಲು ಎರಡು ಉತ್ತಮ ಊಟದ ರೆಸ್ಟೋರೆಂಟ್‌ಗಳು, ಆಧುನಿಕ ಅಡುಗೆ ಮನೆಯನ್ನು ಒಳಗೊಂಡಿದೆ.

IRCTC Char Dham Yatra: Rediscover India’s Spirituality Abroad THIS Special Train; Check Details Here

ಎಸಿ I ಮತ್ತು II ಕೋಚ್‌ಗಳಲ್ಲಿ ಶವರ್ ಕ್ಯೂಬಿಕಲ್‌ಗಳು, ಸೆನ್ಸಾರ್ ಆಧಾರಿತ ವಾಶ್‌ರೂಮ್‌ಗಳು ಮತ್ತು ಫುಟ್ ಮಸಾಜ್‌ಗಳು ಸೇರಿದಂತೆ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಸಂಪೂರ್ಣ ಹವಾನಿಯಂತ್ರಿತ ರೈಲು ಮೂರು ರೀತಿಯ ವಸತಿ ಸೌಕರ್ಯಗಳನ್ನು ಒದಗಿಸುತ್ತದೆ. AC I, AC II ಮತ್ತು AC III ಕೋಚ್‌ಗಳಿರುತ್ತವೆ. ಪ್ರತಿ ಕೋಚ್‌ಗೆ ಸಿಸಿಟಿವಿ ಕ್ಯಾಮೆರಾಗಳು ಹಾಗೂ ವಿನೂತನ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿದೆ.

ಚಾರ್ ಧಾಮ್ ಯಾತ್ರಾ ಪ್ರವಾಸ ತಾಣಗಳು

ಪ್ರವಾಸವು ದೆಹಲಿ ಸಫ್ದರ್‌ಜಂಗ್ ರೈಲು ನಿಲ್ದಾಣದಿಂದ ಪ್ರಾರಂಭವಾಗುತ್ತದೆ. ರಿಷಿಕೇಶ, ಜೋಶಿಮಠ, ಬದರಿನಾಥ್, ಪುರಿ, ರಾಮೇಶ್ವರಂ, ದ್ವಾರಕಾ ಮತ್ತು ದೆಹಲಿಗೆ ಹಿಂತಿರುಗುತ್ತದೆ.

IRCTC Char Dham Yatra: Rediscover India’s Spirituality Abroad THIS Special Train; Check Details Here

ಪ್ರವಾಸಿಗರು ಗಂಗಾ ಆರತಿಯನ್ನು ವೀಕ್ಷಿಸಬಹುದು. ಲಕ್ಷ್ಮಣ ಜೂಲಾ, ತ್ರಿವೇಣಿ ಘಾಟ್, ರಾಮಜನ್ಮ ಭೂಮಿ, ಹನುಮಾನ್ ಗರ್ಹಿ, ಸರಯು ಆರತಿ, ನಂದಿಗ್ರಾಮ್, ಕಾಶಿ ವಿಶ್ವನಾಥ ದೇವಾಲಯ, ಜಗನ್ನಾಥ ದೇವಾಲಯ, ಗೋಲ್ಡನ್ ಬೀಚ್ ಕೋನಾರ್ಕ್ ಸೂರ್ಯ ದೇವಾಲಯ, ಚಂದ್ರಭಾಗ ಬೀಚ್, ರಾಮನಾಥಸ್ವಾಮಿ ದೇವಾಲಯದಂತಹ ಜನಪ್ರಿಯ ಸ್ಥಳಗಳಿಗೆ ಭೇಟಿ ನೀಡುವ ಅವಕಾಶವನ್ನು ಯಾತ್ರಾತ್ರಿಗಳು ಪಡೆಯಲಿದ್ದಾರೆ.

ಧನುಷ್ಕೋಡಿ, ದ್ವಾರಕಾಧೀಶ ದೇವಸ್ಥಾನ, ನಾಗೇಶ್ವರ ಜ್ಯೋತಿರ್ಲಿಂಗ, ಶಿವರಾಜಪುರ ಬೀಚ್ ಮತ್ತು ಬೆಟ್ ದ್ವಾರಕಾಗಳಿಗೆ ಭೇಟಿಯ ಅವಕಾಶವಿದೆ. ಕರ್ನಾಟಕದ ಹಂಪಿಗೂ ಈ ರೈಲು ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+