ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇರಾನ್ ಮೂಲಕ ಹೊಸ ಮಾರ್ಗದಲ್ಲಿ ರಷ್ಯಾದ ಸರಕುಗಳು ಭಾರತಕ್ಕೆ

|
Google Oneindia Kannada News

ನವದೆಹಲಿ, ಜೂನ್ 12: ರಷ್ಯಾದ ಸರಕುಗಳು ಭಾರತಕ್ಕೆ ತಲುಪಲು ಈಗ ಹೊಸ ಮಾರ್ಗ ಸಿಕ್ಕಿದೆ. ಹೊಸ ಟ್ರೇಡ್ ಕಾರಿಡಾರ್ ಅನ್ನು ಇರಾನ್ ಪರೀಕ್ಷಿಸುತ್ತಿದ್ದು, ಈಗಾಗಲೇ ರಷ್ಯಾದಿಂದ ಎರಡು ದೊಡ್ಡ ಕಂಟೇನರ್‌ಗಳನ್ನು ಭಾರತಕ್ಕೆ ಈ ಮಾರ್ಗದಿಂದ ಸಾಗಿಸಲಾಗುತ್ತಿದೆ.

Recommended Video

Russia to India, Iran ಮೂಲಕ ಹೊಸ ಮಾರ್ಗ | Oneindia Kannada

ಇರಾನ್ ದೇಶದ ಸುದ್ದಿ ಸಂಸ್ಥೆ ಮಾಡಿರುವ ವರದಿ ಪ್ರಕಾರ ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್ ನಗರದ ಬಂದರಿನಿಂದ ರಷ್ಯಾದ ಹಡಗೊಂದು ಅದೇ ದೇಶದ ಕ್ಯಾಸ್ಪಿನ್ ಸಮುದ್ರದ ಬಳಿಯ ಆಸ್ಟ್ರಾಕ್ಸಾನ್ ಬಂದರಿನತ್ತ ಸಾಗುತ್ತಿದೆ. ಇದರಲ್ಲಿ 40 ಅಡಿಯಷ್ಟು ದೊಡ್ಡದಾದ ಮತ್ತು 41 ಟನ್ ತೂಕದ ಎರಡು ದೊಡ್ಡ ಕಂಟೇನರ್‌ಗಳಿವೆ. ಈ ಕಂಟೇನರ್‌ಗಳಲ್ಲಿ ಮರದ ಲ್ಯಾಮಿನೇಟ್ ಶೀಟ್‌ಗಳಿವೆ ಎನ್ನಲಾಗಿದೆ.

ಪ್ರವಾದಿ ವಿವಾದಕ್ಕೆ ಇರಾನ್‌ ಕಳವಳ: ಕ್ರಮದ ಭರವಸೆ ನೀಡಿದ ದೋವಲ್ಪ್ರವಾದಿ ವಿವಾದಕ್ಕೆ ಇರಾನ್‌ ಕಳವಳ: ಕ್ರಮದ ಭರವಸೆ ನೀಡಿದ ದೋವಲ್

ಆಸ್ಟ್ರಾಖಾನ್ ಬಂದರಿನಿಂದ ಈ ಹಡಗು ಹೊರಟು ಕ್ಯಾಸ್ಪಿಯನ್ ಸಮುದ್ರದ ಹಾದು ಇರಾನ್‌ನ ಉತ್ತರ ಭಾಗದಲ್ಲಿರುವ ಅಂಝಾಲಿ ಎಂಬ ಬಂದರನ್ನು ತಲುಪಲಿದೆ. ಅಲ್ಲಿ ಈ ಹಡಗಿನಲ್ಲಿರುವ ಕಂಟೇನರ್‌ಗಳನ್ನು ಟ್ರಕ್‌ಗಳ ಮೂಲಕ ರಸ್ತೆ ಮಾರ್ಗದಲ್ಲಿ ಇರಾನ್‌ದ ದಕ್ಷಿಣ ಭಾಗದಲ್ಲಿರುವ ಬಂದರ್ ಅಬ್ಬಾಸ್ ಎಂಬಲ್ಲಿಗೆ ತರಲಾಗುತ್ತದೆ. ಅಲ್ಲಿಂದ ಬೇರೊಂದು ಹಡಗಿನ ಮೂಲಕ ಈ ಎರಡು ಕಂಟೇನರ್‌ಗಳನ್ನು ಮುಂಬೈನ ನಾವ ಶೇವಾ ಎಂಬ ಬಂದರಿಗೆ ತಲುಪಿಸಲಾಗುತ್ತದೆ.

Iran Tests New Trade Route to Ship Russian Goods to India

ಇರಾನ್ ದೇಶದ ಶಿಪಿಂಗ್ ಲೈನ್ಸ್ ಗ್ರೂಪ್ ಸಂಸ್ಥೆ ಈ ಸರಕು ಸಾಗಣೆಯನ್ನು ವ್ಯವಸ್ಥೆ ಮಾಡಿದೆ. ಆದರೆ, ರಷ್ಯಾದ ಪೀಟರ್ಸ್‌ಬರ್ಗ್‌ನಿಂದ ಹಡಗು ಯಾವಾಗ ಹೊರಟಿತು ಎಂಬುದು ನಿಖರವಾಗಿ ತಿಳಿದಿಲ್ಲವಾದರೂ ಒಟ್ಟು ಈ ಸರಕು ಭಾರತವನ್ನು ತಲುಪಲು ಸುಮಾರು 25 ದಿನ ಹಿಡಿಯುವ ಅಂದಾಜು ಇದೆ.

ನಿಮ್ಮ ಜೊತೆ ನಮಗೇನ್ ಒಪ್ಪಂದ: ಭಾರತದ ಕಂಪನಿಗಳಿಗೆ ಕಚ್ಚಾತೈಲ ನೀಡಲ್ಲ ಎಂದ ರಷ್ಯಾ!ನಿಮ್ಮ ಜೊತೆ ನಮಗೇನ್ ಒಪ್ಪಂದ: ಭಾರತದ ಕಂಪನಿಗಳಿಗೆ ಕಚ್ಚಾತೈಲ ನೀಡಲ್ಲ ಎಂದ ರಷ್ಯಾ!

ರಷ್ಯಾ ಮೇಲೆ ಅಂತರರಾಷ್ಟ್ರೀಯ ನಿಷೇಧ ಹೇರಿಕೆ ಆದ ಬಳಿಕ ಇರಾನ್ ದೇಶ ನಾರ್ತ್ ಸೌತ್ ಟ್ರಾನ್ಸಿಟ್ ಕಾರಿಡಾರ್ ಯೋಜನೆಗೆ ಮರುಜೀವ ಕೊಡುವ ಪ್ರಯತ್ನ ಮಾಡುತ್ತಿದೆ. ಈ ಉತ್ತರ ಮತ್ತು ದಕ್ಷಿಣ ಕಾರಿಡಾರ್ ಮಾರ್ಗವು ರಷ್ಯಾದಿಂದ ಏಷ್ಯಾದ ಮಾರುಕಟ್ಟೆಗೆ ಸಂಪರ್ಕ ಕಲ್ಪಿಸುತ್ತದೆ. ರಷ್ಯಾದಿಂದ ಇರಾನ್‌ನ ಕ್ಯಾಸ್ಪಿಯನ್ ಸಮುದ್ರದ ಬಂದರುಗಳಿಗೆ ಬರುವ ಸರಕುಗಳನ್ನು ಆಗ್ನೇಯ ಭಾಗದಲ್ಲಿರುವ ಛಾಬಹಾರ್ ಬಂದರಿಗೆ (Chabahar Port) ಸಾಗಿಸಲು ರಸ್ತೆ ಮತ್ತು ರೈಲು ಮಾರ್ಗಗಳನ್ನು ನಿರ್ಮಿಸುವ ಉದ್ದೇಶ ಇದೆ.

ಛಾಬಹಾರ್ ಎಂಬುದು ಭಾರತಕ್ಕೆ ಆಯಕಟ್ಟಿನ ಜಾಗವೂ ಆಗಿದೆ. ಇದರಲ್ಲಿರುವ ಎರಡು ಬಂದುಗಳಲ್ಲಿ ಒಂದನ್ನು ಭಾರತವೇ ಅಭಿವೃದ್ಧಿಪಡಿಸಿದೆ. ಭಾರತ ಮತ್ತು ಮಧ್ಯ ಏಷ್ಯನ್ ರಾಷ್ಟ್ರಗಳ ನಡುವಿನ ಸರಕು ಸಾಗಣೆಗೆ ಈ ಬಂದರು ಬಹಳ ಅನುಕೂಲ ಕಲ್ಪಿಸುತ್ತದೆ.

(ಒನ್ಇಂಡಿಯಾ ಸುದ್ದಿ)

English summary
A Russian Cargo containing 2 big containers has left from St Petersberg port and these containers may reach Mumbai in 25 days through new route involving Iran, says a media report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X